ಪಾಟೀಲ್ಗೆ ಪ್ರಥಮ ಸ್ಥಾನ
ಗುಲ್ಬರ್ಗ: ಇತ್ತೀಚೆಗೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನಗೋಷ್ಠಿಯಲ್ಲಿ ನಗರದ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ವಿಶ್ವಾರಾಧ್ಯ ತಂದೆ ಬಸನಗೌಡ ಪಾಟೀಲ್ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ವಿಜ್ಞಾನಗೋಷ್ಠಿ- 2013ರ ಜಲಸಹಕಾರ ಸಂಗತಿಗಳು ಮತ್ತು ಸವಾಲುಗಳು ಎಂಬ ಮುಖ್ಯ ವಿಷಯದ ಮೇಲೆ ದೃಶ್ಯ ಮತ್ತು ಶ್ರವಣ ಉಪಕರಣಗಳ ಮೂಲಕ ತನ್ನ ವಿಚಾರ ಮಂಡಿಸಿದ ವಿದ್ಯಾರ್ಥಿ ವಿಶ್ವಾರಾಧ್ಯನು ನೀರಿನ ಸಮಗ್ರ ಚಿತ್ರಣವನ್ನು ನೀಡಿ ದೇಶದಲ್ಲಿಯ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಉತ್ತರದ ಗಂಗೆ ಮತ್ತು ದಕ್ಷಿಣದ ಕಾವೇರಿ ನದಿಗಳನ್ನು ಜೋಡಿಸಬೇಕೆಂಬ ಸಲಹೆಯನ್ನು ನೀಡಿದ್ದಾನೆ. ತನ್ಮೂಲಕ ಜಿಲ್ಲಾಮಟ್ಟದ ವಿಜ್ಞಾನ ಗೋಷ್ಠಿಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಶ್ರಾವಣ ಮಾಸದ ಪೂಜೆಗೆ ಆಹ್ವಾನ
ಗುಲ್ಬರ್ಗ: ನಗರದ ಮಕ್ತಂಪುರ ಬಡಾವಣೆಯಲ್ಲಿರುವ ರಾಚೋಟಿ ವೀರಭದ್ರೇಶ್ವರ ಹಾಗೂ ಭದ್ರ ಕಾಳಿಕಾ ದೇವಿ ಮೂರ್ತಿಗೆ ಶ್ರಾವಣ ಮಾಸದ ಅಂಗವಾಗಿ ಆ. 7ರಿಂದ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಗುವುದು. ಪ್ರತಿನಿತ್ಯ ಬೆಳಗ್ಗೆ 6.30ಕ್ಕೆ ರುದ್ರಾಭಿಷೇಕ, ಕುಂಕಮ ಅರ್ಚನೆ, ಬಿಲ್ವಾರ್ಚನೆ, ಅಷ್ಟೋತ್ತರ ನಾಮಾವಳಿ, ಮಹಾಮಂಗಳಾರತಿ ನಡೆಯಲಿವೆ. ರಾತ್ರಿ 8.30ಕ್ಕೆ ಪ್ರತಿ ನಿತ್ಯ ಶಿವಭಜನೆ, ದಾಸೋಹ ನಡೆಯಲಿದೆ. ವಿಶೇಷ ಪೂಜೆ ಮಾಡಿಸಲು ಇಚ್ಛಿಸುವ ಭಕ್ತರು 9342261744ಗೆ ಸಂಪರ್ಕಿಸಲು ಪ್ರಧಾನ ಅರ್ಚಕ ಗಂಗಾಧರ ಸ್ವಾಮಿ ಅಗ್ಗಿಮಠ ಕೋರಿದ್ದಾರೆ.
ಹಿರೋಶಿಮಾ ದಿನಾಚರಣೆ ಇಂದು
ಗುಲ್ಬರ್ಗ: ಸರ್ವಜ್ಞ ಮತ್ತು ಜಸ್ಟೀಸ್ ಶಿವರಾಜ ಪಾಟೀಲ್ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆ. 6ರಂದು ಬೆಳಗ್ಗೆ 10.30ಕ್ಕೆ ಸರ್ವಜ್ಞ ಕಾಲೇಜಿನಲ್ಲಿ ಹಿರೋಶಿಮಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವಿ.ಎಂ. ಜಾಲಿ, ಬೆಂಗಳೂರಿನ ಕಲಾವಿದ ಜಾನ್ ದೇವರಾಜ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಎಂ. ಸಿ. ಕಿರೇದಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜಂಗಮ ಪಾದಪೂಜೆ
ಗುಲ್ಬರ್ಗ: ಮಕ್ತಂಪುರದ ರೇವಣಸಿದ್ದೇಶ್ವರ ಗದ್ದುಗೆಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಆ.7ರಿಂದ ಸೆ. 9ರವರೆಗೆ ಪ್ರತಿನಿತ್ಯ ಜಂಗಮ ಪಾದಪೂಜೆ ನಡೆಯಲಿದೆ. ದಿನನಿತ್ಯ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ, ಮಹಾ ಮಂಗಳಾರತಿ ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

