ಗಾಂಜಾ ಮಾರಾಟ; ಇಬ್ಬರ ಸೆರೆ
ಗುಲ್ಬರ್ಗ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುವ ಹಾಗೂ ಮಟಕಾ ಚೀಟಿ ಬರೆಯುವುದರಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 68,500 ನಗದು, 500 ಗ್ರಾಂ ಗಾಂಜಾ, 1 ಮೋಟರ್ ಸೈಕಲ್, 2 ಮೊಬೈಲ್, 2 ಪೆನ್ ಜಪ್ತಿ ಮಾಡಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾದವರನ್ನು ನಗರದ ಗಾಜೀಪೂರ ನಿವಾಸಿ ಭೂಪಾಲತೇಗನೂರ್ ಗ್ರಾಮದ ಆಟೋ ಚಾಲಕ ಬಸಯ್ಯ ಬಂಡಯ್ಯ ಸ್ವಾಮಿ (44) ಹಾಗೂ ನ್ಯೂ ರಾಘವೇಂದ್ರ ಕಾಲೋನಿ ನಿವಾಸಿ ಜೆಸ್ಕಾಂ ನಿವೃತ್ತ ನೌಕರ ಮಲ್ಕಪ್ಪ ಮಾಣಿಕಪ್ಪ ದಿವಟಗಿ ಎಂದು ಗುರುತಿಸಲಾಗಿದೆ.
ಡಿಸಿಐಬಿ ಪೊಲೀಸರು ಈ ಮಾಹಿತಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಎಸ್ಪಿ ಅಮಿತ್ ಸಿಂಗ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಎ ವಿಭಾಗದ ಉದಯ ಬೇವಿನಮರದ ಅವರ ನೇತೃತ್ವದಲ್ಲಿ, ಡಿಸಿಐಬಿ ಪಿಎಸ್ಐ ಎಸ್.ಎಸ್. ಹುಲ್ಲೂರ್, ಬ್ರಹ್ಮಪುರ ಠಾಣೆ ಪಿಐ ಶರಣಬಸವೇಶ್ವರ ಭಜಂತ್ರಿ, ಡಿಸಿಐಬಿ ಪಿಎಸ್ಐ ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಭಾಗವಹಿಸಿದ್ದರು.
ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಐಬಿ ಪಿಎಸ್ಐ ಮಹಾಂತೇಶ ಪಾಟೀಲ್ 'ಕನ್ನಡಪ್ರಭ' ಜೊತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿ ಪುಟ್ಟ್ಯಾ ಬಂಧನ
ಗುಲ್ಬರ್ಗ: ಇಲ್ಲಿನ ಕೆರೆ ಭೋಸಗಾ ಬಳಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ, ಆತ ಕೊಲೆ ಮಾಡಲು ಬಳಸಿದ್ದ ಮಾರಕಾಸ್ತ್ರ ಹಾಗೂ ಕಾರ್ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಫಜಲ್ಪುರ ತಾಲೂಕಿನ ಚೌಡಾಪುರದ ಪುಟ್ಟ್ಯಾ ಅಲಿಯಾಸ್ ಸಂದೀಪ ಎಂಬಾತನೇ ಬಂಧಿತನಾದ ಕೊಲೆ ಆರೋಪಿ. ಮಿಥನ್ ಬಾಬು ರಾಠೋಡ ಎಂಬಾತನನ್ನು ಕೆರೆಭೋಸಗಾ ಬಳಿ ಆತನನ್ನು ಕೊಲೆ ಮಾಡಿ ಶವವನ್ನು ರಸ್ತೆಗೆ ಹಾಕಿ ಅಪಘಾತ ಎಂಬಂತೆ ಬಿಂಬಿಸುವಂತೆ ಮಾಡಿ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದರು ಎಂದು ದೂರು ದಾಖಲಾಗಿತ್ತು. ಕೊಲೆಯಾದ ಮಿಥುನ್, ಆರೋಪಿ ಸಂದೀಪನ ಸೋದರಮಾವನ ಮಗಳನ್ನು ಚುಡಾಯಿಸಿದ್ದರಿಂದ ಕುಪಿತಗೊಂಡಿದ್ದ. ಆತನನ್ನು ಮಾಲೀಕರ ಕಾರಿನಲ್ಲಿ ಕರೆದುಕೊಂಡು ಹೋಗಿ ಯಡ್ಡಳ್ಳಿ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ. ನೆಲಕ್ಕೆ ಬಿದ್ದಾಗ, ಮಿಥುನ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಭೋಸಗಾ ಬಳಿ ಬಿಸಾಕಿ ಪರಾರಿಯಾಗಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

