ಗುಲ್ಬರ್ಗಾ

ಜಿಲ್ಲೆ ಬರಪೀಡಿತವಲ್ಲವೇ?

Published On :

ಕನ್ನಡಪ್ರಭ ವಾರ್ತೆ  ಕೆಂಭಾವಿ  ಆ.7
ರಾಜ್ಯದ ಸುಮಾರು 51 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಯಾದಗಿರಿ ಮತ್ತು ಶಹಾಪುರ ತಾಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಿ, ಮಳೆಯ ಮುಖ ನೋಡದ ಸುರಪುರ ತಾಲೂಕನ್ನು ಘೋಷಣೆ ಮಾಡದಿರುವುದು ವಿಪರ್ಯಾಸ ಎಂದು ಸುರಪುರ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನ ರಾವ್ ದೇಶಪಾಂಡೆ ಹೇಳಿದ್ದಾರೆ.
  ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡು ರಾಜ್ಯದ ಗಮನ ಸೆಳೆದಿರುವ ನಮ್ಮ ತಾಲೂಕು ಸರ್ಕಾರದ ಗಮನಕ್ಕೆ ಬರಲಿಲ್ಲವೇ ಎಂದು  ಖಾರವಾಗಿ ಪ್ರತಿಕ್ರಿಯಿಸಿದರು.
ಭೂಮಿ ವಿವರ ಗೊತ್ತಿಲ್ಲವೇ?: ನಾರಾಯಣಪುರದ ಬಸವಸಾಗರ ಈ ತಾಲೂಕಿನಲ್ಲಿ ಹರಿದರೆ, ಬರಗಾಲ ನಿವಾರಣೆಯಾಗುತ್ತದೆ. ಈ ಜಲಾಶಯದಿಂದ ಬರುವ ನೀರು ಎಷ್ಟರ ಮಟ್ಟಿಗೆ ರೈತರಿಗೆ ದೊರಕುತ್ತವೆ. ತಾಲೂಕಿನ ಯಾವ ಭಾಗದಲ್ಲಿ ನೀರಾವರಿ ಪ್ರದೇಶ ಇದೆ. ಯಾವ ಭಾಗದಲ್ಲಿ ಖುಷ್ಕಿ ಭೂಮಿ ಎಷ್ಟಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಎಂದರು.
  ತಾಲೂಕು ಕೃಷಿ ಇಲಾಖೆ ಪ್ರಕಾರ 2013ನೇ ಸಾಲಿನಲ್ಲಿ ವಾಡಿಕೆಯಂತೆ 767 ಮೀಮೀ ಮಳೆಯಾಗಬೇಕಾಗಿತ್ತು. ಆದರೆ ಸುರಪುರ ಹೋಬಳಿಯಲ್ಲಿ 264, ಕೆಂಭಾವಿ 92.4, ಹುಣಸಗಿ 148, ಕಕ್ಕೇರಾ 320, ಕೊಡೆಕಲ್ 222, ನಾರಾಯಣಪೂರ 192 ಮಿಮೀ ಮಳೆಯಾಗಿದೆ. ಇದು ತಾಲೂಕಿನಲ್ಲಿ ಬರಗಾಲ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ.
  ತಾಲೂಕಿನ ಅರ್ಧ ಭಾಗದಷ್ಟು ರೈತರು ನೀರಾವರಿ ಪ್ರದೇಶದಿಂದ ವಂಚಿತರಾಗಿದ್ದಾರೆ. ಇವರು ಈಗ ಬಿತ್ತಿರುವ ಹೆಸರು ಹಾಳಾಗಿದೆ. ಅಲ್ಲದೆ ತೊಗರಿ, ಸೂರ್ಯಕಾಂತಿ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳು ಮಳೆಯ ಅಭಾವದಿಂದ ಸಂಪೂರ್ಣ ಒಣಗಿದೆ. ಇದನ್ನು ಮನಗಂಡು ಸರ್ಕಾರ ಈ ಪ್ರದೇಶವನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕು. ಇದರ ಬಗ್ಗೆ ಶಾಸಕರಾದ ಗುರು ಪಾಟೀಲ ಮತ್ತು ರಾಜಾ ವೆಂಕಟಪ್ಪ ನಾಯಕ ಹೆಚ್ಚಿನ ಮುತುವರ್ಜಿ ವಹಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.