ತಾಮ್ರದ ವೈರ್ ಕದ್ದ 8 ಜನರ ಬಂಧನ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.9
ಸೇಡಂ ತಾಲೂಕಿನ ರಾಜಶ್ರೀ ಸಿಮೆಂಟ್ ಫ್ಯಾಕ್ಟರಿಯ ಖುಲ್ಲಾ ಜಾಗದಲ್ಲಿ ಇಟ್ಟಿರುವ ರು. 2.40 ಲಕ್ಷ ಮೌಲ್ಯದ ತಾಮ್ರದ ಕೇಬಲ್ ವೈರ್ ಕಳ್ಳತನ ಮಾಡಿದ 8 ಜನ ಕಳ್ಳರನ್ನು ಮತ್ತು ವೈರ್ ಖರೀದಿಸಿದ ಮಾಲೀಕ ಮತ್ತು ನೌಕರ ಸೇರಿ ಒಟ್ಟು 10 ಜನರನ್ನು ಬಂಧಿಸುವಲ್ಲಿ ಮಳಖೇಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೇಡಂ ನಿವಾಸಿಗಳಾಗಿರುವ ಅರುಣ ಕುಮಾರ್ ತಂದೆ ಗೋಪಾಲ ರಾಠೋಡ, ಮಹ್ಮದ್ ತಂದೆ ಸೈಫನ್ ತಂದೆ ಮಹ್ಮದ್ ಪಾಶಾ, ಖೈಯುಮ ತಂದೆ ಹಿರಾಯತಲಿ, ಸಲೀಂ ತಂದೆ ಗಫಾರಸಾಬ್, ಸಲೀಂ ತಂದೆ ಮೈನೋದ್ದೀನ್, ಅಹ್ಮದ್ ತಂದೆ ಹುಸೇನಸಾಬ್, ದೇವರಾಜ ತಂದೆ ಶಿವರಾಯ ಗುತ್ತೇದಾರ, ಮಹ್ಮದ್ ಹನೀಫ್ ತಂದೆ ಉಸ್ಮಾನ್ ಅವಂಟಗಿ, ಅಜಹರ್ ತಂದೆ ಮಹ್ಮದ್ ಫಕ್ರೋದ್ದೀನ್ ಮತ್ತು ಗುಜರಿ ಅಂಗಡಿ ಮಾಲಿಕ ಮಹ್ಮದ್ ಜಾವೀದ್ ತಂದೆ ಮಹ್ಮದ್ ಫಕ್ರೋದ್ದೀನ್, ನೌಕರ ಅಜಹರ್ ಎಂಬ ಕಳ್ಳರನ್ನು ಬಂಧಿಸಿದ್ದಾರೆ.
ಕಂಪನಿ ಸಹಾಯಕ ಸೆಕ್ಯುರಿಟಿ ಮ್ಯಾನೇಜರ್ ಪಾಪಿರೆಡ್ಡಿ ಅವರು ಮಳಖೇಡ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸೇಡಂ ಪಿಎಸ್‌ಐ ಪಿ.ಎಸ್. ವನಂಜಕರ್, ಮಳಖೇಡ ಪಿಎಸ್‌ಐ ಪ್ರಭು ದುದ್ದಗಿ, ಶಿವಶಂಕರ ಸಾಹು ಅವರು ಸಿಪಿಐ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ಮಳಖೇಡದ ಎಚ್‌ಡಿಎಫ್‌ಸಿ ಬ್ಯಾಂಕ್ ಎದುರು ಇರುವ ಜಾವಿದ್ ಗುಜರಿ ಅಂಗಡಿಯ ಬಳಿ ದಾಳಿ ನಡೆಸಿ 8 ಜನರನ್ನು ಬಂಧಿಸಿದರು.
ಅವರಿಂದ ವೈರ್ ಮತ್ತು ಆಟೋ ಜಪ್ತಿ ಮಾಡಿಕೊಂಡಿರುವುದರ ಜತೆಗೆ ಕಳ್ಳತನ ಮಾಲು ಸ್ವೀಕರಿಸಿದ ಅಂಗಡಿ ಮಾಲೀಕ ಮಹ್ಮದ್ ಜಾವೀದ್ ಮತ್ತು ನೌಕರ ಅಜಹರ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ: ವ್ಯಕ್ತಿ ಸಾವು
ಗುಲ್ಬರ್ಗ: ರಸ್ತೆ ದಾಟುವ ವೇಳೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಸಮೀಪದ ಕೋಟನೂರ ಬಳಿ ಗುರುವಾರ ಸಂಜೆ ಶಿವಪ್ಪ ತಂದೆ ಚಂದಪ್ಪ ಪೂಜಾರಿ (55) ಎಂಬಾತ ಮೃತಪಟ್ಟಿದ್ದಾನೆ. ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಕುಟುಂಬದವರು ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಿಂಚಿನ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

