ಗುಲ್ಬರ್ಗಾ

'ಸವಿತಾ ಸಮಾಜ ಎಸ್ಟಿಗೆ ಸೇರಿಸಿ'

Published On :

ಯಾದಗಿರಿ: ಸವಿತಾ ಸಮಾಜವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರ್ಪಡೆ ಮಾಡಿ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವಂತೆ ಜಿಲ್ಲಾ ಸವಿತಾ ಸಮಾಜದ ಮುಖಂಡರು ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ತಮ್ಮ ಸಮಾಜದ ವಿದವೆಯರಿಗೆ ಮಾಸಾಶನ ನೀಡಬೇಕು. ಪ್ರತಿಯೊಂದು ತಾಲೂಕಿನಲ್ಲಿ ಸವಿತಾ ಸಮಾಜದ ಮಕ್ಕಳಿಗಾಗಿ ಪ್ರತ್ಯೇಕ ವಸತಿ ನಿಲಯ ಪ್ರಾರಂಭಿಸಬೇಕು. ವಸತಿ ರಹಿತರಿಗೆ ವಸತಿ ಯೋಜನೆಯಡಿಯಲ್ಲಿ ನಿವೇಶನ ಹಾಗೂ ಭೂರಹಿತರಿಗೆ ಸರ್ಕಾರದಿಂದ ಭೂಮಿಯನ್ನು ಒದಗಿಸಬೇಕು. ನಗರ ಪ್ರದೇಶದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ನಡೆಸಲು ನಿವೇಶನ ಮತ್ತು ಅಗತ್ಯ ಸೌಲಭ್ಯ ಒದಗಿಸುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಶಿವಾಜಿ ಹಕೀಮ್ ನೇತೃತ್ವದಲ್ಲಿ ಎಚ್. ಆಂಜನೇಯ, ಚೆನ್ನಪ್ಪ ಕಲ್ಮನಿ, ಈರಪ್ಪ ಮದ್ರಿಕಿ, ಯಮನಪ್ಪ ಪ್ಯಾಟಿ, ವಿಶ್ವನಾಥ ಬಸವನಗುಡಿ, ಶ್ರೀನಿವಾಸ ಕಲ್ಮನಿ, ಬನ್ನಪ್ಪ ಕಿಲ್ಲನಕೇರಾ, ಮಾರುತಿ ಕಟ್ಟಿಮನಿ, ಶಂಕರ ಕಲ್ಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
--
ರಸ್ತೆ ಕಾಮಗಾರಿಗೆ ಚಾಲನೆ
ಯಾದಗಿರಿ: ನಗರದ ಬಾಲಾಜಿ ದೇವಸ್ಥಾನದ ಎದುರುಗಡೆ ಇರುವ ರಸ್ತೆ ಕಾಮಗಾರಿಗೆ ಶಾಸಕ ಮಾಲಕರಡ್ಡಿ ಭೂಮಿಪೂಜೆ ನೆರವೇರಿಸಿದರು.
ನಗರೋತ್ಥಾನ ಯೋಜನೆಯ 3.9 ಕೋಟಿ ಅನುದಾನದಲ್ಲಿ ಚಿತ್ತಾಪುರ ರಸ್ತೆಗೆ ಜೋಡಿಸುವ ಬಾಲಾಜಿ ದೇವಸ್ಥಾನ ಮಾರ್ಗದ ಮುಖ್ಯ ರಸ್ತೆ ನಿರ್ಮಿಸಲಾಗುತ್ತಿದ್ದು, 7 ಮೀಟರ್ ಅಗಲದ ಈ ರಸ್ತೆಯ ಡಾಂಬರೀಕರಣ ಮಾಡಲಾಗುವುದು. 1.2 ಕಿಮೀ ಉದ್ದದ ಈ ರಸ್ತೆ ನಿರ್ಮಾಣದಿಂದ ಸ್ಟೇಷನ್ ಏರಿಯಾದ ಬಸ್‌ನಿಲ್ದಾಣ ಮಾರ್ಗವಾಗಿ ನಗರದ ಗಾಂಧಿ ವೃತ್ತಕ್ಕೆ ತೆರಳಲು ಅನುಕೂಲವಾಗಲಿದೆ. ಇದು ನಗರದ ಪ್ರಮುಖ ಕೂಡು ರಸ್ತೆಯಾಗಿದ್ದು, ಈ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಕೈಗೆತ್ತಿಕೊಳ್ಳಲಾದ ಈ ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಶಾಸಕರು ಗುತ್ತೇದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸರೆಡ್ಡಿ ಕಂದಕೂರು, ರವಿಮಾಲಿಪಾಟೀಲ್, ಶರಣಗೌಡ ಅರಿಕೇರಿ, ಬಸರೆಡ್ಡಿ, ಎಂ.ಎಸ್. ಪಾಟೀಲ್, ಶಶಿಧರ ಅರಿಕೇರಿ, ವೆಂಕಟರೆಡ್ಡಿ ಗುರುಸುಣಗಿ, ರಾಹುಲ ಅರಿಕೇರಿ, ಸುರೇಶ ಜೈನ್, ಶರಣಗೌಡ ಬೆಟಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.