'ದಾನಗಳಲ್ಲಿ ರಕ್ತದಾನ ಶ್ರೇಷ್ಠ'
ಸುರಪುರ: ಚಿನ್ನ, ಬೆಳ್ಳಿ, ಹಣ, ಆಸ್ತಿ, ಧಾನ್ಯ, ಆಹಾರ ಇವೆಲ್ಲ ದಾನಗಳು ತೋರಿಕೆಗೆ ಮಾತ್ರ. ಇವುಗಳಿಂದ ವ್ಯಕ್ತಿಯ ಘನತೆ ಗೌರವ ಹೆಚ್ಚಾಗಬಹುದು. ಆದರೆ ರಕ್ತದಾನ ತೋರಿಕೆ ದಾನವಲ್ಲ. ಸಾವು ಬದುಕಿನ ಮಧ್ಯೆ ಹೋರಾಟ ಮಾಡುವ ವ್ಯಕ್ತಿಯ ಜೀವ ಉಳಿಸುತ್ತದೆ. ಹೀಗಾಗಿ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಅಭಿಪ್ರಾಯಪಟ್ಟರು.
ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ರಂಗಂಪೇಟೆ ಓಂಕಾರ ಹಾಗೂ ಸುರಪುರ ಪತಂಜಲಿ ಯೋಗ ಶಿಕ್ಷಣ ಸಮಿತಿಗಳು ಮತ್ತು ತಾಲೂಕು ವೀರಶೈವ ಸಮಿತಿ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನಕ್ಕೆ ಮುಂದಾಗಿ: ಅಪಘಾತ ಸಂಭವಿಸಿದಾಗ, ಹೆಚ್ಚು ರಕ್ತಸ್ರಾವವಾದಾಗ ಅಥವಾ ರಕ್ತಹೀನತೆಯಿಂದ ಬಳಲುವವರ ಜೀವ ಉಳಿಸಲು ನೀವು ನೀಡಿದ ರಕ್ತ ನೆರವಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು. ರಕ್ತ ನೀಡಿದಂತೆ ದೇಹದಲ್ಲಿ ಇನ್ನಷ್ಟು ರಕ್ತ ಉತ್ಪಾದನೆಗೆ ಅವಕಾಶ ಸಿಗುತ್ತದೆ. ಕಾರಣ ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು.
ಜಾಗೃತಿ ಶಿಬಿರ ಆಯೋಜಿಸಿ: ವೀರಶೈವ ಸಮಿತಿ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ರಕ್ತದಾನ ಜೀವದಾನಕ್ಕೆ ಸಮನಾವಾಗಿದೆ. ಆದರೆ ರಕ್ತ ದಾನ ಮಾಡಿದರೆ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಶಕ್ತಿ ಕುಂಠಿತವಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಹೀಗಾಗಿ ರಕ್ತದಾನಕ್ಕೆ ಬಹುತೇಕರು ಹಿಂದೇಟು ಹಾಕುತಿದ್ದಾರೆ. ರಕ್ತ ದಾನದ ಬಗ್ಗೆ ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.
ಡಾ. ಶಾಲಿನಿ ಪಾಟೀಲ, ಡಾ. ಶಫೀ ಉಜ್ಜಮಾ, ಡಾ. ಹರ್ಷವರ್ಧನ ರಫೂಗಾರ, ಡಾ. ಸುಭಾಷ ಢಬೀರ, ಡಾ. ಇಮ್ತಿಯಾಜ ಹುಸೇನ್, ಪತಂಜಲಿ ಯೋಗ ಶಿಕ್ಷಕ ವೆಂಕಟೇಶ ಚಿತ್ರಗಾರ ವೇದಿಕೆಯಲ್ಲಿದ್ದರು. ಯೋಗ ಶಿಕ್ಷಕ ಭುವನ ಸುಂದರ ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್.ತೇಲ್ಕರ್ ಸ್ವಾಗತಿಸಿದರು. ಶ್ರೀನಿವಾಸ ಪೊಲಂಪಲ್ಲಿ ನಿರೂಪಿಸಿದರು. ಸಂತೋಷ ಹೆಡಗಿನಾಳ ವಂದಿಸಿದಿರು.
ಸೂಗೂರೇಶ ವಾರದ, ರಾಜಶೇಖರ ಪಾಟೀಲ, ಶಾಂತಪ್ಪ ಬೂದಿಹಾಳ, ಬಸಲಿಂಗಪ್ಪ ಸಜ್ಜನ್, ಮಂಜುನಾಥ ಗುಳಗಿ, ನಾನಾಗೌಡ ಮಾಳನೂರ್, ಸುಬಾಷ ತೇಲ್ಕರ್, ಮಲ್ಲಿಕಾರ್ಜುನ ಅವಂಟಿ, ಶಂಕರ ಜುಜಾರೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

