ಸ್ವಾತಂತ್ರ್ಯ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಆ.17
ನಗರದಲ್ಲಿ ವಿವಿಧೆಡೆ ವಿವಿಧ ಸಂಘ- ಸಂಸ್ಥೆಗಳು 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದವು.
ಕೆವೈಎಫ್: ಕರ್ನಾಟಕ ಯುವಜನ ಒಕ್ಕೂಟವು ನಗರದ ಬ್ರಹ್ಮಪುರ ಬಡಾವಣೆಯ ಶಾಸ್ತ್ರೀ ಚೌಕ್ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಯಾವುದೇ ಜನಪ್ರತಿನಿಧಿಗಳಿಂದ ಧ್ವಜಾರೋಹಣ ನೆರವೇರಿಸಲು ಅವಕಾಶ ನೀಡದೆ ಒಬ್ಬ ಪುಟ್ಟ ಬಾಲಕಿಯಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟವಾಗಿ ದಿನಾಚರಣೆ ಮಾಡಲಾಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ಅನಂತ ಗುಡಿ, ಮುಖಂಡರಾದ ಸತೀಶ ದಿಕ್ಕಸಂಗ, ಶರಣು ಪರೀಟ್, ಅನಂತ ರೆಡ್ಡಿ, ಶರಣು ಕುಂಬಾರ, ಹಣಮಂತ, ಬಸ್ಸು, ನಾಗಣ್ಣ, ಗಟಾಟೆ, ಪಟ್ಟಣಶೆಟ್ಟಿ, ಮಲ್ಲು, ಶ್ರೀಕಾಂತ ಪಾಟೀಲ್ ಸೇರಿದಂತೆ ಬಡಾವಣೆಯ ನಾಗರೀಕರು, ವ್ಯಾಪಾರಿಗಳು ಪಾಲ್ಗೊಂಡಿದ್ದರು.
ಎಚ್ಕೆಇ: ನಗರದ ಪ್ರತಿಷ್ಠಿತ ಹೈ. ಕ. ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಕೇಂದ್ರೀಯ ಸ್ವಾತಂತ್ರ್ಯ ದಿನೋತ್ಸವ ಆಚರಣೆಯು ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಸಂಪತಕುಮಾರ್ ಲೋಹಾ, ಶಿವರಾಜ ನಿಗ್ಗುಡಗಿ, ಆರ್.ಎಸ್. ಹೊಸಗೌಡ, ಶಿವಾನಂದ ಮಾನಕರ್, ಡಾ. ಭೀಮಾಶಂಕರ ಬಿಲಗುಂದಿ, ಸುಭಾಷ ಬಿಜಾಪುರ, ಎನ್.ಡಿ. ಪಾಟೀಲ್, ಡಾ. ಶ್ರೀಕಾಂತ ವಡ್ಡನಗೇರಿ, ಪ್ರೊ. ಆರ್.ಎಂ. ಪಾಟೀಲ್, ಪ್ರೊ. ಎಸ್.ವಿ. ಧೂಳಗುಂಡಿ, ಡಾ. ಅಶೋಕ ಜೀವಣಿಗಿ, ಸುಧಾ, ಶ್ರೀದೇವಿ, ಡಾ. ಗೌರಾದೇವಿ ಕತ್ನಳ್ಳಿ, ಡಾ. ಶಕುಂತಲಾ ಭದ್ರಶೆಟ್ಟಿ, ಡಾ. ಸುಜಾತಾ ಬಿರಾದಾರ, ಪ್ರೊ. ಸುಜ್ಞಾನಮ್ಮ ಪಾಟೀಲ್, ಡಾ. ನಯನ ತಾರಾ ಇತರರು ಉಪಸ್ಥಿತರಿದ್ದರು.
ಬಾಲಾಜಿ ಚಾರಿಟಬಲ್: ನಗರದ ಬಾಲಾಜಿ ಚಾರಿಟೇಬಲ್ ಮತ್ತು ಸೋಸಿಯಲ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕೇಂದ್ರ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷೆ ಕುಂದನಬಾಯಿ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ ರವಿಸಿಂಗ್ ಠಾಕೂರ, ಜೀತೇಂದ್ರಸಿಂಗ್ ಠಾಕೂರ್, ಅನೀಲಸಿಂಗ್, ದಿನೇಶ ಅವಸ್ಥಿ, ಅಭಿಷೇಕ, ರಾಜು ಗೊಬ್ಬೂರ, ಶಂಕರ ಹೂಗಾರ, ಸುನೀಲ್ ಇತರರು ಉಪಸ್ಥಿತರಿದ್ದರು.
ಗಂಗಾಧರ ಬಕ್ಕಪ್ರಭು ಶಾಲೆ: ನಗರದ ಜಿಡಿಎ ಕಾಲೋನಿಯಲ್ಲಿರುವ ಗಂಗಾಧರ ಬಕ್ಕಪ್ರಭು ಪ್ರೌಢ ಶಾಲೆ ಮತ್ತು ಎಂ. ವೆಂಕಟಸ್ವಾಮಿ ಸಂಯುಕ್ತ ಪದವಿಪೂರ್ವ ಕಾಲೇಜು, ಜ್ಯೋತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ರಮಾಬಾಯಿ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಟಿ.ಎಂ. ಭಾವಿದೊಡ್ಡಿ ಧ್ವಜಾರೋಹಣ ನೆರವೇರಿಸಿದರು.
ಗೀತಾ ಎನ್. ದಾಸ್ಕರ್, ಸುಕನ್ಯಾ, ಸುವರ್ಣಾ ಪಾಟೀಲ್, ರಾಜಶೇಖರ, ರಮೇಶ ನಾಯಕ, ವಿಜಯಲಕ್ಷ್ಮೀ ಪಾಟೀಲ್, ಸುಚಿತಾ, ಗೀತಾ, ಮಮತಾ, ಸಂಗೀತಾ, ರವಿ, ಮಂಜುಳಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಸವೇಶ್ವರ ಶಾಲೆ: ನಗರದ ಮಹಾತ್ಮ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಚರಿಸಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸೂರ್ಯಕಾಂತ ಪೆದ್ದಿ ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ಅಧ್ಯಕ್ಷ ಎನ್.ಟಿ. ಉತ್ತಮ, ಸುರೇಶ ಎಚ್., ಪರಮೇಶ್ವರ ಪಾಟೀಲ್, ಜಯಾದೇವಿ ಅವಂತಿ, ಶಶಿಕಲಾ ಸಾಲಿಮಠ, ಶಿವಶಂಕರ ನರೂಣಿ, ಯಶವಂತ ಬಿ.ಹೊಸಮನಿ, ಶಾಂತಪ್ಪ ಬೈನಿ, ಕೋಮಲಾ ಬಿರಾದಾರ ಇತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು: ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ದಲಿತ ಬಂಡಾಯ ಲೇಖಕರ ಮತ್ತು ಕಲಾವಿದರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ನಡೆದ ಕವಿಗೋಷ್ಠಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣೇಶ ಪವಾರ ಉದ್ಘಾಟಿಸಿದರು.
ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ.ಎಚ್. ನಿರಗುಡಿ, ಸುರೇಶ ಬಡಿಗೇರ, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ, ಯುವ ಸಾಹಿತಿ ರಾಜಶೇಖರ ಮಾಂಗ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಡಾ. ಚೆನ್ನಣ್ಣ ವಾಲಿಕಾರ್, ಡಾ. ಸೂರ್ಯಕಾಂತ ಸುಜಾತ್, ಗಣಪತಿ ಕೊಡ್ಲೆ, ಶಿವಾ ವರ್ಮಾ, ಈಶ್ವರ ಕಟ್ಟಿಮನಿ, ಪ್ರಯಾಂಕಾ ಬಸವರಾಜ, ಕೆ.ಗಿರಿಮಲ್ಲ, ಎಂ.ಎನ್. ಸುಗಂಧಿ, ನಾಗಪ್ಪ ಬೆಳಮಗಿ, ಸಂತೋಷಕುಮಾರ್ ಗುಡಿಮನಿ, ರಾಘವೇಂದ್ರ ಗೌಡ, ಕವಿತಾ ಹಳ್ಳಿ, ಡಾ. ಮರಿಯಪ್ಪ ನಾಟೇಕಾರ್, ಸಿದ್ದಣ್ಣ ಕನ್ನಡಗಿ, ಮನೋಹರ್ ನಾವದಗಿ, ವಿಜಯಕುಮಾರ್ ರೋಣದ, ಪರ್ವೀನ ಸುಲ್ತಾನಾ, ಶಿವಲೀಲಾ, ವಿಶ್ವಕರ್ಮ, ಶಂಕ್ರಯ್ಯ ಘಂಟಿ ಇತರ ಕವಿಗಳು ಕವನ ವಾಚಿಸಿದರು.
ವಿಜಯ ಬ್ಯಾಂಕ್: ಗುಲ್ಬರ್ಗದ ಸೂಪರ್ ಮಾರ್ಕೆಟ್ನಲ್ಲಿರುವ ವಿಜಯ ಬ್ಯಾಂಕ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬ್ಯಾಂಕ್ ಸಿಬ್ಬಂದಿ ರಾಜಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಂತೋಷ ಸಾವಳಗಿ, ಶಂಕರ, ವಿಜಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅವರಾದ(ಬಿ) ಶಾಲೆ: ಗುಲ್ಬರ್ಗ ತಾಲೂಕಿನ ಅವರಾದ(ಬಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲೆಯ ಮುಖ್ಯಗುರು ಶಿವಾನಂದ ಬಿರಾದಾರ, ಎಸ್ಡಿಎಂಸಿ ಅಧ್ಯಕ್ಷ ಮಹೇಶ ಪಾಟೀಲ್, ರೇವಶೆಟ್ಟಿ ಇಟಗಿ, ಶ್ರೀಮಂತ ಕುಂಬಾರ, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

