ಶಾಸಕ ಅಜಯಸಿಂಗ್ಗೆ ಸನ್ಮಾನ
ಗುಲ್ಬರ್ಗ: ರಜಪೂತ ಸಮಾಜ ಸಂಘಟನೆಯಿಂದ ಶಾಸಕ ಡಾ. ಅಜಯಸಿಂಗ್ ಅವರನ್ನು ಸತ್ಕರಿಸಲಾಯ್ತು. ರಜಪೂತ ಸಮಾಜದ ಸಂಘಟನೆಗೆ ತಾವು ಸದಾ ಬದ್ಧ ಎಂದು ಇದೇ ಸಂದರ್ಭದಲ್ಲಿ ಹೇಳಿರುವ ಡಾ. ಅಜಯಸಿಂಗ್ ಮುಂದಿನ ದಿನಗಳಲ್ಲಿ ಗುಲ್ಬರ್ಗದಲ್ಲಿ ಸಮಾಜದ ರಾಷ್ಟ್ರೀಯ ಸಮಾವೇಶ ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಹಳೆ ಜೇವರ್ಗಿ ರಸ್ತೆಯ ರಾಜೀವ್ಗಾಂಧಿ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಈ ಸಮಾರಂಭ ನಡೆದಿತ್ತು. ತಾವು ಎಲ್ಲ ಜನಾಂಗದವರನ್ನು ಪ್ರೀತಿ-ವಿಶ್ವಾಸದಿಂದ ಕಾಣುವುದಾಗಿ ಹೇಳಿದ ಶಾಸಕರು, ಎಲ್ಲಾ ಸಮಾಜದವರು ಆಶೀರ್ವಾದ ಮಾಡಿದ್ದರಿಂದಲೇ ತಾವು 37 ಸಾವಿರ ಮತಗಳ ಅಂತರದಿಂದ ಗೆಲ್ಲುವಂತಾಯ್ತು ಎಂದರು. ಸಮಿತಿ ಅಧ್ಯಕ್ಷ ಕುಬೇರಸಿಂಗ್ ಛತ್ರಪತಿ, ಮುಖಂಡರಾದ ಸಾಗರಸಿಂಗ್ ಛತ್ರಪತಿ, ಭವಾನಿಸಿಂಗ್ ಠಾಕೂರ, ಡಾ. ಕಿಶೋರಸಿಂಗ್ ಛತ್ರಪತಿ, ಬಸವರಾಜ ಮಠಪತಿ, ತೇನಸಿಂಗ್ ಇದ್ದರು. ಮುಖಂಡರಾದ ಡಾ. ರಾಜೇಂದ್ರ ಸಿಂಗ್, ಶೈಲೆಂದ್ರ ಸಿಂಗ್, ಗಣಪತ್ ಸಿಂಗ್, ಅಶೋಕ ಸಿಂಗ್, ಪ್ರಲ್ಹಾದ ಸಿಂಗ್, ಉದಯಸಿಂಗ್, ಮೀಲಾಸಿಂಗ್, ಕಿಶನಸಿಂಗ್, ರಘುವೀರ ಸಿಂಗ್, ದೇವಿಸಿಂಗ್, ಜಯಕಿಶನ್ ಸಿಂಗ್, ರವಿ ಸಿಂಗ್, ವೀರಭದ್ರಪ್ಪ, ವಿಜಯಕುಮಾರ, ಸವಿತಾ ಠಾಕೂರ, ಲಲಿತ ಠಾಕೂರ, ದೇವೇಂದ್ರ ಚವ್ಹಾಣ, ಸಂತೋಷ ಸಿಂಗ್, ಜಯಂತ್ ಸಿಂಗ್, ವಿಜಯಸಿಂಗ್ ಇದ್ದರು.
ಡಿವಿಜಿ ಅಧ್ಯಯನ ಪೀಠ ಸ್ಥಾಪನೆಯಾಗಲಿ
ಗುರುಮಠಕಲ್: ಕನ್ನಡ ಸಾಹಿತ್ಯದಲ್ಲಿ ಮೇರುಸಾಧನೆಗೈದ ಡಿವಿಜಿ ಅವರ ಕೃತಿಗಳ ಸಮಗ್ರ ಅಧ್ಯಯನಕ್ಕಾಗಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಡಿವಿಜಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕಾಗಿದೆ ಎಂದು ಪುಟಪಾಕ್ ಶಾಲೆಯ ಶಿಕ್ಷಕ ವಿರೂಪಾಕ್ಷಪ್ಪ ಕೋರಿ ಆಗ್ರಹಿಸಿದರು. ತಾಲೂಕಿನ ಗಾಜರಕೋಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ಗಡಿನಾಡಲ್ಲಿ ಕನ್ನಡದ ಕಂಪು ಮಾಸಿಕ ಸರಣಿ ಕಾರ್ಯಕ್ರಮದ 3ನೇ ಉಪನ್ಯಾಸಕ ಮಾಲಿಕೆಯಲ್ಲಿ ಡಿವಿಜಿಯ ಮಂಕುತಿಮ್ಮನ ಕಗ್ಗ ಒಂದು ವಿಮರ್ಶೆ ಕುರಿತು ಉಪನ್ಯಾಸ ನೀಡಿದರು. ಡಿವಿಜಿಯವರ ಅಮೂಲ್ಯ ಕೃತಿ ಮಂಕ್ಕುತಿಮ್ಮನ ಕಗ್ಗ ಇಂಗ್ಲಿಷ್ ಭಾಷೆಗೆ ಅನುವಾದವಾಗಿದ್ದಾರೆ ಆ ಕೃತಿಗೆ ನೋಬಲ್ ಪ್ರಶಸ್ತಿ ಸಿಗುವ ಅವಕಾಶವಿತ್ತು. ಅಷ್ಟು ಪರಿಣಾಮಕಾರಿಯಾಗಿ ಅಮೂಲ್ಯವಾದ ಮಾರ್ಗದರ್ಶನ ನೀಡಿದ್ದಾರೆ. ಈ ಕೃತಿಯನ್ನು ಎರಡನೇ ಭಗವ್ದಗೀತೆ ಎಂದೇ ಪ್ರಖ್ಯಾತವಾಗಿದೆ. ಮಂಕುತಿಮ್ಮನ ಕಗ್ಗ ನಾಲ್ಕು ಸಾಲುಗಳಲ್ಲಿ ಪ್ರತಿಯೊಬ್ಬರ ಜೀವನ ದರ್ಶನವನ್ನು ಪ್ರತಿಬಿಂಬಿಸಿದ ಅದ್ಭುತ ಕೃತಿಯಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

