ಗುಲ್ಬರ್ಗಾ

ಸಮಾಜಕ್ಕೆ ಋಣಿಯಾಗಿರಿ: ಜೋಷಿ

Published On :

ಕೆಂಭಾವಿ: ಮಾನವ ಜನ್ಮ ದೊಡ್ಡದು. ಮನುಷ್ಯರಾಗಿ ಹುಟ್ಟಿದ ನಾವು ಸತ್ಕರ್ಮಗಳನ್ನು ಆಚರಿಸಬೇಕು. ಮತ್ತೊಬ್ಬರಿಗೆ ಕೇಡನ್ನು ಬಯಸದೇ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಿ ಸಮಾಜದ ಋಣ ತೀರಿಸಬೇಕೆಂದು ನಿವೃತ್ತ ಶಿಕ್ಷಕ ಪ್ರಹ್ಲಾದಾಚಾರ್ಯ ಜೋಷಿ ಹೇಳಿದರು.
ಪಟ್ಟಣದ ಚಂದ್ರಭಟ್ಟ ಜೋಷಿ ಅವರ ಮನೆಯಲ್ಲಿ ನಡೆದ ಉಪಾಕರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉಪ ಎಂದರೆ ಸಮೀಪ ಎಂದರ್ಥ. ದೇವರ ಸಾಮಿಪ್ಯ ಹೊಂದಲು ಮನುಷ್ಯರಾದ ಪ್ರತಿಯೊಬ್ಬರು ನಾವು ದೇವರ ಮೇಲೆ ಶ್ರದ್ಧೆ ಇಟ್ಟು ಅವನನ್ನು ಉಪಾಸನೆ ಮಾಡಿ ದೇವರ ಸಾಮಿಪ್ಯವನ್ನು ಪಡೆಯಲು ಪ್ರಯತ್ನಿಸಬೇಕು. ಸದಾಚಾರ, ಸಚ್ಚಾರಿತ್ರ್ಯ, ಸನ್ಮಾರ್ಗ ಇವೇ ಮೊದಲಾದ ಅನೇಕ ವಿಧಾನಗಳಿಂದ ದೇವರನ್ನು ಅರ್ಚಿಸಿ ಪೂಜಿಸಿದರೆ ಮಾನವ ಜನ್ಮ ಸಫಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೂಡಲಗಿ ಬಾಬಾ ಮಹಾರಾಜ ಮಠದ ಪೀಠಾಧಿಪತಿ ಉಮಾಕಾಂತ ಮಹಾರಾಜ, ಶಾಂಭಟ್ಟ ಜೋಷಿ, ಶ್ರೀಪಾದಭಟ್ಟ ಜೋಷಿ, ಜಯಾಚಾರ್ಯ ಪುರೋಹಿತ, ದಂತಂಭಟ್ಟ ಜೋಷಿ, ವಲ್ಲಭಭಟ್ಟ ಜೋಷಿ, ವಾಮನರಾವ ದೇಶಪಾಂಡೆ, ವೆಂಕಟೇಶ ನಾಡಿಗೇರ, ರಾಘವೇಂದ್ರರಾವ ಸದಬ, ರಂಗನಾಥ ಕುಲಕರ್ಣಿ, ರಾಘವೇಂದ್ರ ನಾಡಿಗೇರ, ಕೃಷ್ಣಾಜಿ ಕುಲಕರ್ಣಿ, ಮಲ್ಹಾರಾವ ಕುಲಕರ್ಣಿ ಇದ್ದರು. ಎಲ್ಲ ಕಾರ್ಯಕ್ರಮಗಳು ರಾಘವೇಂದ್ರಾಚಾರ್ಯ ಜೋಷಿ ಮಳ್ಳಿ ಇವರ ಪೌರೋಹಿತ್ಯದಲ್ಲಿ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.