ಖಬರಸ್ತಾನದ ಮರು ಸರ್ವೇ ಕಾರ್ಯ
ಕನ್ನಡಪ್ರಭ ವಾರ್ತೆ ಕೆಂಭಾವಿ ಅ.23
ಪಟ್ಟಣದ ಸರ್ಕಾರಿ ಸರ್ವೇ ನಂ.362, 363ರ ಖಬರಸ್ತಾನ ಜಮೀನು ಅತಿಕ್ರಮಣವಾಗಿದೆ ಎಂಬ ದೂರಿನ ಹಿನ್ನೆಲೆ ತಹಸೀಲ್ದಾರ ಮಹಮದ್ ಗೌಸುದ್ದೀನ ಭೇಟಿ ನೀಡಿ ಪೊಲೀಸ್ ಭದ್ರತೆಯಲ್ಲಿ ಜಮೀನು ಸರ್ವೇ ಕಾರ್ಯ ನಡೆಸಿದರು.
ಸುಮಾರು 1 ಎಕರೆ 20 ಗುಂಟೆ ಜಮೀನನ್ನು ಖಬರಸ್ತಾನ ಜಮೀನನ್ನು ಬೇರೊಬ್ಬರು ಅತಿಕ್ರಮಣ ಮಾಡಿದ್ದಾರೆ ಎಂಬುದನ್ನು ಸರ್ವೇ ಮೂಲಕ ದೃಢಪಡಿಸಿಕೊಳ್ಳಲಾಯಿತು. ಈ ಹಿಂದೆ ಕೂಡಾ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಜಮೀನಿನ ಸರ್ವೇ ಕಾರ್ಯ ಮಾಡಿ ಗಡಿ ಗುರುತಿಸಿದ್ದರೂ ಮತ್ತೆ ಅತಿಕ್ರಮಣವಾಗಿತ್ತು. ಆ ಹಿನ್ನೆಲೆಯಲ್ಲಿ ಫಿರ್ಯಾದುದಾರನ ದೂರಿನನ್ವಯ ಮತ್ತೆ ಅತಿಕ್ರಮಣವಾದ ಸ್ಥಳಗಳಿಗೆ ಸರ್ಕಾರದ ಜಮೀನಿನ ಗಡಿ ಗುರುತಿಸಿ ಸೀಮಾ ಕಲ್ಲುಗಳನ್ನು ನೆಡಲಾಯಿತು. ಈ ಕಲ್ಲುಗಳನ್ನು ಕೆಡಿಸುವುದಾಗಲಿ, ವಿಕಾರಗೊಳಿಸುವುದಾಗಲಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಕೆಂಭಾವಿ ಗ್ರಾಮದಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ಸುಮಾರು 20 ಎಕರೆ ಜಮೀನು ಅತಿಕ್ರಮಣವಾಗಿದೆ. ಶೀಘ್ರವಾಗಿ ಅವುಗಳ ತೆರವು ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ತಹಸೀಲ್ದಾರ ತಿಳಿಸಿದರು.
ಸುರಪುರ ತಾಲೂಕಿನಲ್ಲಿ ಸುಮಾರು 1 ಸಾವಿರ ಎಕರೆಗಿಂತಲೂ ಹೆಚ್ಚು ಸರ್ಕಾರಿ ಜಮೀನು ಕಬಳಿಕೆಯಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಬಂದಿದೆ. ಆ ವರದಿ ಆಧರಿಸಿ ಸರ್ವೇ ಪ್ರಕ್ರಿಯೆ ಆರಂಭಗೊಳಿಸಲಾಗುವುದು. ಹೋಬಳಿ ಸ್ಥಳಗಳಾದ ಕೆಂಭಾವಿ, ಹುಣಸಗಿ, ಕಕ್ಕೇರಾ, ಕೋಡೆಕಲ್, ಸುರಪುರಗಳಲ್ಲಿ ಮೊದಲ ಹಂತದ ಕಾರ್ಯಾಚರಣೆಯನ್ನು ಶೀಘ್ರವೇ ಆರಂಭಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಉಳಿದ ಸ್ಥಳಗಳಲ್ಲಿ ಕೂಡಾ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಹಸೀಲ್ದಾರ ಗೌಸುದ್ದೀನ್ ತಿಳಿಸಿದರು.
ಖಬರಸ್ತಾನ ಸರ್ವೇ ಕಾರ್ಯಾದ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ನೇತೃತ್ವದಲ್ಲಿ ಸಿಪಿಐ ಸತ್ಯನಾರಾಯಣರಾವ, ಪಿಎಸ್ಐ ಜಗದೇವಪ್ಪ ಇತರರು ಇದ್ದರು.
ಈ ಹಿಂದೆ ಖಬರಸ್ತಾನ ಜಮೀನು ಸರ್ವೇ ಮಾಡಿದ ಸಂದರ್ಭಧಲ್ಲಿ ಗ್ರಾಮದಲ್ಲಿ ಗಲಭೆಯಾಗಿದ್ದ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗ್ರಾಮದ ಜನತೆಗೆ ಸರ್ವೇ ಕಾರ್ಯ ತೀವ್ರ ಕುತೂಹಲ ಕೆರಳಿಸಿತ್ತು. ಆ ಭಾಗದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರ್ವೇ ಕಾರ್ಯ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

