ಮದ್ಯದಂಗಡಿಗಳ ಬಣ್ಣ ಬದಲು
ಗುಲ್ಬರ್ಗ: ಕಣ್ಣಿಗೆ ರಾಚುವಂಥ, ಲೈಟಿಂಗ್, ಬೃಹದಾಕಾರದ ಫಲಕ, ಮದ್ಯದ ಬ್ರಾಂಡ್‌ಗಳ ಮುಗಿಲೆತ್ತರದ ಕಟೌಟ್, ಜಾಹೀರಾತುಗಳೊಂದಿಗೆ ಕಂಗೊಳಿಸುತ್ತಿದ್ದ ಮದ್ಯದಂಗಡಿ, ಬಾರ್, ಕ್ಲಬ್‌ಗಳ ಫಲಕಗಳ ಬಣ್ಣವೀಗ ಬದಲಾಗಿದೆ.
ಬೇಕಾಬಿಟ್ಟಿ ಫಲಕ ಹಾಕಿಕೊಳ್ಳುವುದಾಗಲಿ, ತಮ್ಮಲ್ಲಿರುವ ಮದ್ಯದ ಬ್ರಾಂಡ್‌ಗಳ ಬಗ್ಗೆ ಅಳತೆ ಮೀರಿದ ಜಾಹೀರಾತುಗಳನ್ನು ಅಂಗಡಿಗಳ ಮೇಲೆ ಪ್ರದರ್ಶಿಸುವುದನ್ನು ಅಬಕಾರಿ ಇಲಾಖೆ ನಿಷೇದಿಸಿದೆ.
ಇದರ ಪರಿಣಾಮವಾಗಿ ರಾಜ್ಯಾದ್ಯಂತ ಇರುವ ಲಿಕ್ಕರ್, ವೈನ್ ಶಾಪ್‌ಗಳು, ಬಾರ್- ರೆಸ್ಟೋರೆಂಟ್‌ಗಳು, ಕ್ಲಬ್-ಪಬ್‌ಗಳ ಫಲಕಗಳ ಬಣ್ಣ- ವಿನ್ಯಾಸ ಬದಲಾಗಿದೆ. ಇಲಾಖೆ ಫಲಕಗಳ ಬಣ್ಣದಲ್ಲಷ್ಟೇ ಅಲ್ಲ, ಮದ್ಯದ ಅಂಗಡಿ ಪರವಾನಗಿ (ಸನ್ನದು) ಯಾರ ಹೆಸರಿಲ್ಲಿದೆ ಎಂಬುದನ್ನೂ ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂಬ ನಿಯಮ ಜಾರಿಗೊಳಿಸಿದ್ದು, ಫಲಕಗಳ ಮೇಲೆಯೇ ಸನ್ನದುರಾರರ ಹೆಸರು, ವಿಳಾಸ ಹೊಂದಿರುವ ಪರವಾನಗಿ ನಮೂನೆ, ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಬೇಕು.
ಮೊದಲೆಲ್ಲ ಮದ್ಯ ನವನವೀನ ಬ್ರಾಂಡ್‌ಗಳು, ರೂಪದರ್ಶಿಯರ ಅರೆನಗ್ನ ಭಾವಚಿತ್ರಗಳೊಂದಿಗೆ ಇರುತ್ತಿದ್ದ ಮದ್ಯದ ಜಾಹೀರಾತು ಭಿತ್ತಿ ಪತ್ರಗಳು, ಫ್ಲೆಕ್ಸ್‌ಗಳೂ ಮದ್ಯದಂಗಡಿಗಳಿಂದ ಮಾಯವಾಗಿವೆ. ಮದ್ಯದಂಗಡಿಗಳ ಪ್ರವೇಶ ದ್ವಾರದಲ್ಲಿ ಇಂಥ ಜಾಹೀರಾತುಗಳನ್ನು ಪ್ರದರ್ಶಿಸುವುದೂ ನಿಷಿದ್ಧ.
ಝಗಮಗಿಸಲು ಅವಕಾಶವಿಲ್ಲ: ಬೇಕಾಬಿಟ್ಟಿಯಾಗಿ ಜಾಹಿರಾತು ಪ್ರದರ್ಶಿಸಿ, ಜನರ ಗಮನ ಸೆಳೆಯುವಂತಿಲ್ಲ ಎಂಬ ಸಂದೇಶ ಮದ್ಯ ವಹಿವಾಟುದಾರರಿಗೆ ಅಬಕಾರಿ ಇಲಾಖೆ ಈ ಹೊಸ ನೀತಿ ಮೂಲಕ ಮೂಲಕ ರವಾನಿಸಿದೆ.
ಬೇರೆ ಜಿಲ್ಲೆಗಳಲ್ಲಿ ಫಲಕಗಳ ಬದಲಾವಣೆ ಕಾರ್ಯ ಪೂರ್ಣಗೊಂಡಿದೆ. ಇದೀಗ ಗುಲ್ಬರ್ಗ ಜಿಲ್ಲೆಯಲ್ಲೂ ಈ ಕೆಲಸ ಭರದಿಂದ ಸಾಗಿದ್ದು ಇಲಾಖೆಯೇ ಅಂಗಡಿ ಸನ್ನದುದಾರರನ್ನು ಸಂಪರ್ಕಿಸಿ ಹೊಸ ಫಲಕ ಮಾದರಿ ನೀಡಿ ಅದನ್ನು ಕಡ್ಡಾಯವಾಗಿ ಅಳವಡಿಸುವಂತೆ ಮಾಡಿದೆ.
ನಿರ್ದಿಷ್ಟ ಬಣ್ಣ- ಅಳತೆ ಫಲಕ
ಅಬಕಾರಿ ಇಲಾಖೆ ವೈನ್ ಶಾಪ್ (ಸಿಎಲ್-2), ಲಾಡ್ಜಿಂಗ್, ಬಾರ್ ಸಹಿತ (ಸಿಎಲ್-7), ಬಾರ್-ರೆಸ್ಟೋರೆಂಟ್ (ಸಿಎಲ್-9) ಸೇರಿ ಹಲವು ನಮೂನೆಯಲ್ಲಿ ಮದ್ಯ ಮಾರಾಟದ ಪರವಾನಗಿ ನೀಡುತ್ತದೆ. ಇದೀಗ ಜಾರಿಗೆ ತಂದಿರುವ ಫಲಕ ನೀತಿಯಲ್ಲಿಯೂ ಪರವಾನಗಿ ಅನುಸರಿಸಿ ಫಲಕ ಬಣ್ಣ, ಆಕಾರ ನಿರ್ಧರಿಸುತ್ತಿದೆ.
- ಮದ್ಯದಂಗಡಿ: ಸಿಎಲ್-2 ಸನ್ನದು - ತಿಳಿ ನೀಲಿ (ಐಸ್‌ಬ್ಲೂ).
- ಕ್ಲಬ್‌ಗಳು, ಇತರೆ: ಸಿಎಲ್-4 ಸನ್ನದು - ಲೈಟ್ ಪರ್ಪಲ್.
- ಲಾಡ್ಜಿಂಗ್ (ಬಾರ್ ಸಹಿತ): ಸಿಎಲ್-7 ಸನ್ನದು- ಮಿಂಟ್ ಗ್ರೀನ್.
- ಬಾರ್- ರೆಸ್ಟೋರೆಂಟ್: ಸಿಎಲ್- 9- ಲೈಟ್ ಆರೆಂಜ್.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

