ಇಂದಿನಿಂದ ಅಹವಾಲು ಸ್ವೀಕಾರ
ಗುಲ್ಬರ್ಗ: ಗುಲ್ಬರ್ಗ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಆ.27 ರಿಂದ 30ರವರೆಗೆ ಭೇಟಿ ನೀಡಿ ಬೆಳಗಿನ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಕುಂದು ಕೊರತೆಗಳ ಮತ್ತು ದೂರಿನ ಬಗ್ಗೆ ಅರ್ಜಿಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ. ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆ ಪ್ರಪತ್ರ ಸಂ.1 ಮತ್ತು 2ನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಅಹವಾಲು ಸ್ವೀಕರಿಸುವ ಅಧಿಕಾರಿಗಳ ಹೆಸರು ಹಾಗೂ ಹುದ್ದೆ, ಭೇಟಿ ನೀಡುವ ಸ್ಥಳ ಮತ್ತು ದಿನಾಂಕ ಹಾಗೂ ಅಹವಾಲು ಸ್ವೀಕರಿಸುವ ಸ್ಥಳ ಇಂತಿದೆ.
ಲೋಕಾಯುಕ್ತ ಡಿ.ಎಸ್.ಪಿ. ರವಿಕುಮಾರ್, ಎನ್. ಪಾಟೀಲ್ ಆಳಂದ ಆ.27 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಆಳಂದ ಹಾಗೂ ಚಿತ್ತಾಪುರ ಆ.30 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಚಿತ್ತಾಪುರ, ಲೋಕಾಯುಕ್ತ ಪಿ.ಐ- ತಮ್ಮರಾಯ ಪಾಟೀಲ್, ಅಫಜಲ್ಪುರ ಆ.27 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಅಫಜಲ್ಪುರ.
ಲೋಕಾಯುಕ್ತ ಪಿ.ಐ ಶಾಂತಿನಾಥ ಬಿ.ಪಿ. ಚಿಂಚೋಳಿ ಆ.28 ರಂದು ಚಿಂಚೋಳಿ ಲೋಕೋಪಯೋಗಿ ಪ್ರವಾಸಿ ಮಂದಿರ ಹಾಗೂ ಜೇವರ್ಗಿ ಆ.30 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಜೇವರ್ಗಿ.
ಲೋಕಾಯುಕ್ತ ಪಿ.ಐ. ಜೇಮ್ಸ್ ಲಾಯ್ ಕ್ಸೇವಿಯರ್ ಮಿನೇಜೆಸ್, ಸೇಡಂ ಆ.29 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಸೇಡಂ.
ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಲೋಕಾಯುಕ್ತ ಆರಕ್ಷಕ ಅಧೀಕ್ಷಕರ ಕಚೇರಿ, ಐವಾನ್-ಇ-ಶಾಹಿ ಕಂಪೌಂಡ್ ಗುಲ್ಬರ್ಗ-585102, ದೂರವಾಣಿ ಸಂಖ್ಯೆ 08472-263645, 263684ಗಳನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

