ರೇವಪ್ಪಯ್ಯ ಅಜ್ಜನ ತೊಟ್ಟಿಲು
ಭಾಲ್ಕಿ: ಪವಾಡ ಪುರುಷ ನಾವದಗಿಯ ರೇವಪ್ಪಯ್ಯಾ ಶಿವಶರಣ ಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಮಧ್ಯಶ್ರಾವಣ ಸೋಮವಾರ ನಿಮಿತ್ತ ನಾದಗಿಯ ರೇವಪ್ಪಯ್ಯಾ ಶಿವಶರಣರ ಮಂದಿರದಲ್ಲಿ ಗ್ರಾಮದ ಮಹಿಳೆಯಲ್ಲರೂ ಸೇರಿಕೊಂಡು ಜಾನಪದ ಹಾಡುಗಳನ್ನು ಹಾಡುತ್ತಾ ಶ್ರೀರೇವಪ್ಪಯ್ಯಾ ಅಜ್ಜನ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದರು. ರೇವಣಯ್ಯಾ ಮಹಾಸ್ವಾಮಿ ನೇತೃತ್ವದಲ್ಲಿ ನಡೆದ ತೊಟ್ಟಿಲು ಮತ್ತು ಪಲ್ಲಕ್ಕಿ ಉತ್ಸವದಲ್ಲಿ ನಾವದಗಿ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಭಕ್ತಿಭಾವದಿಂದ ಶಾಲಿವಾನ್ ನಡೆಸಿಕೊಟ್ಟರು. ಪಲ್ಲಕ್ಕಿ ಮಹೋತ್ಸವದಲ್ಲಿ ಗ್ರಾಮದ ಸುಮಂಗಲೆಯರು ಆರತಿ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾದರು. ಮಹಾರಾಷ್ಟ್ರದಿಂದ ಬಂದ ಭಜನಾ ತಂಡದವರು ಭಜನೆ ಕಾರ್ಯಕ್ರಮ ನಡೆಸಿದರು. ಪಲ್ಲಕ್ಕಿ ಉತ್ಸವದಲ್ಲಿ ಬಸಪ್ಪಾ ದಾಬಶೆಟ್ಟಿ, ನಾಗಪ್ಪಾ ಭೀಮಣ್ಣೋರ, ಭೀಮಶಾ ಬೇಲೂರೆ, ರಾಜೆಪ್ಪಾ ಬೇಲೂರೆ, ಚಂದ್ರಕಾಂತ, ವಿಮಲಾಬಾಯಿ, ವೀರಯ್ಯಾ ಸ್ವಾಮಿ, ಮಲ್ಲಿಕಾರ್ಜುನ ಶೇರಿಕಾರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

