ಏಡ್ಸ್ ವಿರುದ್ಧ ಜಾಗೃತಿ ಅಭಿಯಾನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.1
ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬರುವ ಏಡ್ಸ್ ರೋಗವನ್ನು ಪ್ರತಿಬಂಧಕ ಉಪಾಯಗಳಿಂದ ತಡೆಗಟ್ಟಬಹುದು. ಸೋಂಕು ತಗುಲಿದರೂ ಉಪಚಾರಗಳಿಂದ ಮೆಟ್ಟಿ ನಿಲ್ಲಬಹುದೆಂಬ ಸಂದೇಶ ಸಾರುವ ಮೂಲಕ ಇಲ್ಲಿನ ಯೂನೈಟೆಡ್ ಆಸ್ಪತ್ರೆ ವೈದ್ಯರು, ಅಲ್ ಕಮರ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಹಲವು ಔಷಧಿ ಕಂಪನಿಗಳವರು ಜಂಟಿಯಾಗಿ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.
ಜಗತ್ ವೃತ್ತದಲ್ಲಿ ಆರಂಭವಾದ ರ್ಯಾಲಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಹಸಿರು ನಿಶಾನೆ ತೋರಿದರು. ಯುನೈಟೆಡ್ ಆಸ್ಪತ್ರೆಯ ವೈದ್ಯ ಡಾ. ವಿಕ್ರಂ ಸಿದ್ದಾರೆಡ್ಡಿ ಹಾಗೂ ತಂಡದ ನೇತೃತ್ವದಲ್ಲಿ ನಡೆದ ರ್ಯಾಲಿ ಸರ್ದಾರ್ ಪಟೇಲ್ ವೃತ್ತದಿಂದ ಸಾಗಿ ಜಿಲ್ಲಾ ಕೋರ್ಟ್ ಸಮುಚ್ಚಯದ ಬಳಿ ಅಂತ್ಯಗೊಂಡಿತು.
ಘೋಷಣೆ, ಫಲಕ ಪ್ರದರ್ಶನೊಂದಿಗೆ ಜಾಗೃತಿ: ದಾರಿಯುದ್ದಕ್ಕೂ ಯುವಕರು ರ್ಯಾಲಿಯಲ್ಲಿ ಜನರನ್ನು ಸೆಳೆಯುವ, ಅವರ ಮನದಲ್ಲಿ ಸದಾಕಾಲ ಅಚ್ಚಳಿಯದೆ ಕೂಡುವಂತಹ ಸಂದೇಶ ಸಾರುವ ವಾಕ್ಯಗಳನ್ನು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆದು ಪ್ರದರ್ಶನ ನಡೆಸಿದರು. ಏಡ್ಸ್ ಸೋಂಕು, ಅದರ ವೈಜ್ಞಾನಿಕ ಹಿನ್ನೆಲೆ ಸಾರುವ ಮಾಹಿತಿ ಫಲಕಗಳೊಂದಿಗೂ ಅನೇಕರು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ಜೀಜೂ ಜೋಸೆಫ್, ವೈದ್ಯರಾದ ರಾಜು ಕುಲ್ಕರ್ಣಿ, ವೀಣಾ ಸಿದ್ದಾರೆಡ್ಡಿ, ಗಿರೀಶ ಹಾಗೂ ಯುನೈಟೆಡ್ ಆಸ್ಪತ್ರೆಯ ಸಿಬ್ಬಂದಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ದಿವ್ಯ ಜೀವನದಲ್ಲಿ ದಿನಾಚರಣೆ: ವಿಶ್ವ ಏಡ್ಸ್ ದಿನವನ್ನು ಇಲ್ಲಿನ ಸುಂದರ ನಗರದಲ್ಲಿರುವ ದಿವ್ಯ ಜೀವನ ಎಚ್ಐವಿ ಪಾಸಿಟಿವ್ ಸೋಂಕಿತರ ಸಂಘಟನೆಯಲ್ಲಿಯೂ ಅನೇಕ ವಿಧಾಯಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಸೇರುವ ಮೂಲಕ ಏಡ್ಸ್ ಸೋಂಕಿತರಾದರೂ ಹೇಗೆ ಬದುಕು ಕಟ್ಟಬಹುದು ಎಂಬುದರ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಹಾನ್ ಯೋಜನೆಯ ಕಾರ್ಯಕರ್ತರು ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನಾಮದಾರ ಸಮಾಜಕಾರ್ಯ ವಿದ್ಯಾಲಯದಲ್ಲಿಯೂ ವಿಶ್ವ ಏಡ್ಸ್ ದಿನ ಆಚರಿಸಲಾಯಿತು. ಪೊಲೀಸ್ ಅಧಿಕಾರಿಗಳು, ಜಿಪಂ ಅಧ್ಯಕ್ಷರು, ಕಾಲೇಜು ಸಿಬ್ಬಂದಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಡೆದ ಜಾಥಾದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಏಡ್ಸ್ ಜಾಗೃತಿ ಸಂದೇಶ ಸಾರುವ ಪ್ರಯತ್ನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

