ಗುಲ್ಬರ್ಗಾ

ಮರಗಮ್ಮ ದೇವಿ ಜಾತ್ರೆ ಸಂಪನ್ನ

Published On :

ಗುಲ್ಬರ್ಗ/ಶಹಾಬಾದ್: ನಗರದ ಜೆಪಿ ಕಾಲೋನಿಯ ಮರಗಮ್ಮ ದೇವಿ ದೇವಸ್ಥಾನದಲ್ಲಿ ಮೂರ್ತಿ ಸ್ಥಾಪನೆಯ 35ನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ದೇವಿಗೆ ವಾದ್ಯ, ಮಾತಂಗಿಯರೊಂದಿಗೆ ಪಲ್ಲಕ್ಕಿ ಮೂಲಕ ಕಾಗಿಣಾ ನದಿಗೆ ಗಂಗಾಸ್ನಾಕ್ಕೆ ಕರೆದುಕೊಂಡು ಹೋಗಲಾಯಿತು. ಕಾಗಿಣಾ ನದಿ ತೀರದಲ್ಲಿ ನದಿಗೆ ಪೂಜೆ ಬಾಗಿನ, ಗಂಗಾಸ್ನಾನ ನಡೆಯಿತು. ಮುತ್ತೈದೆಯರ ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಿಗೆ ಪಂಚಾಮೃತ, ಶ್ರೀಸೂಕ್ತ ಅಭಿಷೇಕ, ಮಹಾಪ್ರಸಾದ ವಿತರಣೆ ನಡೆಯಿತು. ಸಂಜೆ 1008 ದೀಪೋತ್ಸವ, ರಾತ್ರಿ ಭಜನೆ ನಡೆಯಿತು.
ನಗರದ ಜಗದಂಬಾ ದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ದತ್ತಾತ್ರೇಯ ಜಿಂಗಾಡೆ, ದಿಲೀಪ ಯಲಶೆಟ್ಟಿ ಸಹಿತ ಪದಾಧಿಕಾರಿಗಳು, ಅಲ್ಸಟಾಮ್ ಕಾರ್ಖಾನೆ ಅಧಿಕಾರಿಗಳಾದ ಡಿ.ಶ್ರೀನಿವಾಸ, ರಮೇಶ ಮಹೇಂದ್ರಕರ್ ಸೇರಿದಂತೆ ಮಹಾರಾಷ್ಟ್ರ, ಆಂಧ್ರದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.
ದೇವಸ್ಥಾನ ಸಮಿತಿ ಸದಸ್ಯರಾದ ಆನಂದ ಹುಲಿಯಾರ್, ರಾಜೇಶ ಸಾಳೊಂಕೆ, ರಘು ಕಂಬಾನೂರ, ವಿಶಾಲ ಪವಾರ, ಆನಂದ ಕೋಳ್ಕೂರ, ಸದಾಶಿವ ಜಂಬಗಿ, ಅವಿನಾಶ ಕೋಳ್ಕೂರ. ಯೋಗಿಶ ಸಾಳೊಂಕೆ, ರಾಮು ಹುಲಿಯಾರ್, ಬಸವರಾಜ ಜಾಲಹಳ್ಳಿ, ದಶವಂತ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.