50 ಕೇಂದ್ರಗಳಿಂದ ಸ್ವಯಂ ಉದ್ಯೋಗ
ಯಾದಗಿರಿ: ಭಾರತ ವಿಕಾಸ ಅಕಾಡೆಮಿ ಹಾಗೂ ಆಯಾ ಭಾಗದ ಸ್ಥಳೀಯರ ಸಹಾಯ, ಸಹಕಾರದಿಂದ 50 ಕೇಂದ್ರಗಳನ್ನು ಆರಂಭಿಸಲಾಗುವುದು. ಅವುಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾವಂತ ಯುವಕರು ಸ್ವಯಂ ಉದ್ಯೋಗ ಆರಂಭಿಸಲು ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಹಾಗೂ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಕ್ರಿಯಾಶೀಲತೆ: ಸೋಮವಾರ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಅಕಾಡೆಮಿಯ ಜಿಲ್ಲಾ ಸಂಚಾಲಕರ ಸಭೆಯನ್ನು ಉದ್ದೇಶಿಸಿ, ವಿದ್ಯಾವಂತ ಯುವಕರಲ್ಲಿ ಕೇವಲ ಅಭ್ಯಾಸ ಮಾಡಿದ ಪ್ರಮಾಣ ಪತ್ರ ಇರುವದು ಕಾಣುತ್ತೇವೆ. ಅವರಲ್ಲಿ ತಾಂತ್ರಿಕ ಪರಿಣಿತಿ ಹಾಗೂ ಗುಣವತ್ತತೆ ಜ್ಞಾನ ಕೊರತೆ ಕಾಣುತ್ತಿದೆ. ಆದ್ದರಿಂದ ಅವರಲ್ಲಿ ತಾಂತ್ರಿಕ ಕ್ರಿಯಾಶೀಲತೆಹೆಚ್ಚಿಸುವುದು ಅಗತ್ಯ ಎಂದರು.
ನಾವು ಕಳೆದ ಹತ್ತು ವರ್ಷಗಳಿಂದ ನಿರಂತರ ಹೈ.ಕ. ಭಾಗದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಕಾಣಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ. ಪ್ರಮುಖವಾಗಿ ಗ್ರಾಮ, ಕೃಷಿ, ಮಹಿಳೆ, ಯುವ ಜನತೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳತ್ತ ಹೆಚ್ಚಿನ ಮಹತ್ವ ನೀಡಿದ್ದೇವೆ. ಶಿಕ್ಷಣದ ಮೂಲಕ ಎಲ್ಲ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪರಿಹಾರಕ್ಕೆ ಶ್ರಮಿಸಲಾಗಿದೆ ಎಂದರು.
ಜಿಲ್ಲಾ ಸಂಚಾಲಕ ನೀಲಕಂಠರಾಯ ಎಲ್ಹೇರಿ ಸ್ವಾಗತಿಸಿ, ಕಲ್ಬುರ್ಗಿ ಕಂಪು ಕಾರ್ಯಕ್ರಮದ ನಂತರ ವಿಕಾಸ ಅಕಾಡೆಮಿ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ನಾವು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸಿದ್ದೇವೆ. ಪ್ರಮುಖವಾಗಿ ಜಿಲ್ಲೆಯಲ್ಲಿ ನಾಲ್ಕು ಸಾವಿರ ಶೌಚಾಲಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಲು ಆರ್ಥಿಕ ನೆರವು ನೀಡುವುದರ ಜೊತೆಗೆ ಜನರಲ್ಲಿ ಶೌಚಾಲಯದ ಮಹತ್ವ ಮೂಡಿಸಿದ್ದೇವೆ ಎಂದರು.
ಸಭೆಯಲ್ಲಿ ಅಕಾಡೆಮಿಯ ಮಾರ್ತಾಂಡ ಶಾಸ್ತ್ರಿ, ಜಿ.ಪಂ. ಸದಸ್ಯ ಬಸವರಾಜ ಖಂಡ್ರೆ, ಎಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ, ರಾಜೇಂದ್ರ ಯರಗೋಳ, ಚಂದುಲಾಲ್ ಗುರುಮಠಕಲ್, ಸೋಮನಾಥ ರೆಡ್ಡಿ ಬೋರೆಡ್ಡಿ, ಅಮೃತರಾವ್ ಮೂಲಗೆ, ಶಿವಕುಮಾರ ಹೊನಗೇರಾ, ಸಿದ್ರಾಮರೆಡ್ಡಿ ಯಲ್ಹೇರಿ, ಹಣಮರೆಡ್ಡಿ ಕಂದಕೂರ, ಜಿ.ಬಿ. ಕೋರಿ, ಭೀಮರೆಡ್ಡಿ ಕೌಳೂರ, ಶರಣಗೌಡ ಬಾಡಿಯಾಲ, ಬುಗ್ಗಯ್ಯ ಕಲಾಲ್, ಅಂಬಣ್ಣ ಪೂಜಾರಿ, ಪ್ರಕಾಶ ಅಂಗಡಿ, ಬಸವರೆಡ್ಡಿ ಎಂ.ಟಿ. ಪಲ್ಲಿ, ಪ್ರಶಾಂತರೆಡ್ಡಿ ಯಲ್ಹೇರಿ, ದೇವರಾಜ ವರ್ಕನಳ್ಳಿ, ಬಸವರಾಜ ಕಣೇಕಲ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

