7ರಂದು ಕಾರ್ತೀಕೋತ್ಸವ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ರಾಸಣಗಿ ಬಲಭೀಮಸೇನ್ ದೇವರ ಕಾರ್ತಿಕೋತ್ಸವ ಡಿ.7 ರಿಂದ ಎರಡು ದಿನಗಳವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಉತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.7 ರಂದು ಬೆಳಗ್ಗೆ 7 ಗಂಟೆಗೆ ಸುಪ್ರಭಾತ, 9 ಗಂಟೆಗೆ ವಾಯುಸ್ತುತಿ ಪುನಶ್ಚರಣ, 11 ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 1 ಗಂಟೆಗೆ ಶ್ರೀಬಲಭೀಮಸೇನ್ ದೇವರಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1ರಿಂದ 4ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಭಜನೆ, ರಾತ್ರಿ 8 ಗಂಟೆಗೆ ಗುಲ್ಬರ್ಗದ ಪ್ರಸನ್ನ ಕೊರ್ತಿ ಅವರಿಂದ ಸಂಗೀತ ಕಾರ್ಯಕ್ರಮ, 9 ಗಂಟೆಗೆ ಪಲ್ಲಕ್ಕಿ ಸೇವೆ ನಡೆಯಲಿದೆ. ಪಲ್ಲಕ್ಕಿ ಸೇವೆಯಲ್ಲಿ ಗುರುರಾಜ ಹೇರೂರ ನೆಲೋಗಿ ಹಾಗೂ ವೃಂದದಿಂದ ಭಜನೆ ನಡೆಯಲಿದೆ.
ಡಿ.8ರಂದು ಮರು ಕಾರ್ತಿಕೋತ್ಸವ ನಡೆಯಲಿದೆ. ಅಂದು ಅನ್ನ ಸಂತರ್ಪಣೆಯನ್ನು ದಿ.ರಂಗಾಚಾರ್ಯ ಹರವಾಳಕರ್ ಅವರ ಪುತ್ರರಾದ ವೆಂಕಟೇಶ ಹರವಾಳ, ಅನಂತ ಹರವಾಳ ಹಾಗೂ ಉತ್ಸವದಂದು ರಾಘವೇಂದ್ರ ಹರವಾಳಕರ್, ಆಂಜನೇಯ ಹರವಾಳಕರ್, ಕೃಷ್ಣಮೂರ್ತಿ ಹರವಾಳಕರ್ ಮತ್ತು ಪ್ರಸನ್ನ ಹರವಾಳಕರ್ ಇವರಿಂದ ಮಾಡಲಾಗುತ್ತದೆ. ಭಕ್ತರು ಆಗಮಿಸುವಂತೆ ದೇವಸ್ಥಾನ ಟ್ರಸ್ಟ್ ಕಮಿಟಿ ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

