ಸಮಾಲೋಚನೆ ಸಭೆ ಇಂದು
ಗುಲ್ಬರ್ಗ: ರಾಜ್ಯ ಪ್ರಥಮ ಚಿಕಿತ್ಸಕರು ಹಾಗೂ ಜನಪದ ವೈದ್ಯರುಗಳ ಸಮಾಲೋಚನೆ ಸಭೆ ಡಿ.6 ರಂದು ಬೆಳಗ್ಗೆ 11.30ಕ್ಕೆ ನಗದ ಬಾಲಭವನದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರದ ಆಯುಷ ಅಧಿಕಾರಿಗಳಿಂದ ಕಿರುಕುಳ ನೀಡುತ್ತಿರುವ ಬಗ್ಗೆ ಚರ್ಚೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಚಿಕಿತ್ಸಕರು ಭಾಗವಹಿಸಬೇಕೆಂದು ಪಿ.ಕೆ. ಕುಮಾರ್ ಕೋರಿದ್ದಾರೆ.
ಈಜಲು ಹೋಗಿದ್ದ ಯುವಕ ಸಾವು
ಚಿಂಚೋಳಿ: ತಾಲೂಕಿನ ಶಿಕಾರಮೋತಕಪಳ್ಳಿ ಗ್ರಾಮದಲ್ಲಿ ಯುವಕ ಬಾವಿಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ನರಸಿಂಹ ಸಿದ್ದಪ್ಪ ಕಲ್ಲೂರ ವಡ್ಡರ್(35) ಮೃತನು. ಶಿಕಾರಮೋತಕಪಳ್ಳಿ ಗ್ರಾಮದ ಹೊರವಲಯದಲ್ಲಿನ ಬಾವಿಯಲ್ಲಿ ಬುಧವಾರ ಸಂಜೆ ಈಜಲು ಹೋಗಿ ಕೆಸರಿನಲ್ಲಿ ಸಿಕ್ಕಿಕೊಂಡು ನರಸಿಂಹ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಶವ ಹೊರಕ್ಕೆ ತೆಗೆದಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣವನ್ನು ಪಿಎಸ್ಐ ಶಿವಶಂಕರ ಸಾಹು ದಾಖಲಿಸಿದ್ದಾರೆ.
ವಿದ್ಯಾರ್ಥಿ ಮೇಲೆ
ಮಾರಣಾಂತಿಕ ಹಲ್ಲೆ
ಗುಲ್ಬರ್ಗ: ಮಕ್ಕಾ ಕಾಲೋನಿ ಕಡೆ ಸಾಗುತಿದ್ದ ಮಹ್ಮದ್ ಮೈಬೂಬ್ ಜಾಂಗೀರ ಪಾಶಾ ಎಂಬ ವಿದ್ಯಾರ್ಥಿ ಮೇಲೆ ಹಿಂದಿನಿಂದ ಬಂದ ವ್ಯಕ್ತಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ. ಮಕ್ಕಾ ಕಾಲೋನಿ ರಜಾಯಿ ಮುಸ್ತಾಫಾ ಇಸ್ಲಾಮಿಕ್ ಕಾಲೋನಿಯ ಶಿಕ್ಷಕ ಮೌಲ್ವಿ ರಿಯಾಜ್, ವಿದ್ಯಾರ್ಥಿ ಮಾನವಿಯ ಮಹ್ಮದ್ ಮೈಬೂಬ್ ಜಾಂಗೀರ ಪಾಶಾ ಇಬ್ಬರೂ ಮಕ್ಕಾ ಕಾಲೋನಿಯ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಮೈಬೂಬ್ ತೀವ್ರ ಗಾಯಗೊಂಡಿದ್ದು, ಜಗಳ ಬಿಡಿಸಲು ಯತ್ನಿಸಿದ ಮೌಲ್ವಿ ರಿಯಾಜ್(ಎಂಪಿ) ಎಂಬುವರಿಗೂ ಗಾಯಗಳಾಗಿವೆ. ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಲ್ಬರ್ಗ ವಿವಿ ಠಾಣೆಯ ಪಿಎಸ್ಐ ಹುಸೇನ್ ಬಾಷಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೈಕ್ ಸವಾರ ಸಾವು
ಗುಲ್ಬರ್ಗ: ಹುಮನಾಬಾದ್ ಮುಖ್ಯ ರಸ್ತೆಯ ತಾವರಗೇರಾ ಕ್ರಾಸ್ ಬಳಿ ಬುಲೋರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ 10ಕ್ಕೆ ನಡೆದಿದೆ. ಸುನೀಲಕುಮಾರ್ ಮೃತಪಟ್ಟಿದ್ದು, ಶರಣಬಸಪ್ಪ ಗಾಯಗೊಂಡಿದ್ದಾನೆ. ಇವರಿಬ್ಬರೂ ಬೈಕ್ ಮೇಲೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬುಲೋರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುನೀಲಕುಮಾರ್ ಮೇಲೆ ವಾಹನ ಹರಿದು ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಶರಣಬಸಪ್ಪನ ಸ್ಥಿತಿ ಚಿಂತಾಜನಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

