ಸಂವಿಧಾನಶಿಲ್ಪಿಗೆ ನಮನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.6
ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಡಾ. ಅಂಬೇಡ್ಕರರ 57ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇಲ್ಲಿನ ಜಗತ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ, ಆರ್ಪಿಐ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಮ ಮೋಘಾ ಇತರ ಗಣ್ಯರು ಮಾಲಾರ್ಪಣೆ ಮಾಡಿದರು. ಎಸ್ಪಿ ಅಮೀತಸಿಂಗ್, ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್, ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾಧಾಕೃಷ್ಣರಾವ್ ಮದನಕರ್, ಡಾ. ಸರ್ವೋದಯ ಶಿವಪುತ್ರ, ಸಂಘಾನಂದ ಭಂತೆ ಇತರರು ಪಾಲ್ಗೊಂಡಿದ್ದರು.
ಚಿಂಚೋಳಿ: ಡಾ. ಅಂಬೇಡ್ಕರ್ ಪ್ರತಿಮೆಗೆ, ಭಾವಚಿತ್ರಕ್ಕೆ ಹೂಮಾಲೆ ಮತ್ತು ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಲಿತ ಮುಖಂಡ ರಮೇಶ ಯಾಕಾಪುರ ಅವರು ಮಾತನಾಡಿ, ಭಾರತ ರತ್ನ ಡಾ. ಅಂಬೇಡ್ಕರರು ಭಾರತದ ಎಲ್ಲ ಜಾತಿ ಜನಾಂಗದವರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಂವಿಧಾನದಲ್ಲಿ ಕಲ್ಪಿಸಿದ್ದಾರೆ. ಅವರ ತತ್ವ ಮತ್ತು ವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ತಹಸೀಲ್ದಾರ್ ಮೋಹನ ಜೋಶಿ, ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ, ಪಪಂ ಅಧ್ಯಕ್ಷೆ ಇಂದುಮತಿ ಶಿವನಾಗಯ್ಯ ಸ್ವಾಮಿ, ಉಪಾಧ್ಯಕ್ಷ ಶಾಮರಾವ ಕೊರವಿ, ರಮೇಶ ಯಾಕಾಪುರ, ಪಪಂ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ, ಕೆ.ಎಂ.ಬಾರಿ, ದಲಿತ ಸಂಘಟನೆಯ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ವೇಳೆ ಬುದ್ಧ ವಂದನೆ ಮಾಡಲಾಯಿತು. ಪಟ್ಟಣದ ವಿವಿಧ ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸಿದ್ದರು.
ತಾಲೂಕಿನ ಸುಲೇಪೇಟ್, ಕೋಡ್ಲಿ, ರಟಕಲ್, ನಿಡಗುಂದಾ, ಕುಂಚಾವರಂ, ಸಾಲೇಬೀರನಳ್ಳಿ, ದೇಗಲಮಡಿ, ಚಿಮ್ಮನಚೋಡ, ಐನಾಪುರ, ಭೂಯಾರ (ಬಿ), ಗಡಿಕೇಶ್ವರ, ಸಲಗರ, ಬಸಂತಪುರ, ಚಿಮ್ಮಾಇದಲಾಯಿ, ತುಮಕುಂಟಾ, ಹಸರಗುಂಡಗಿ, ಮೋಘಾ, ಚಂದನಕೇರಾ, ಚೆಂಗಟಾ ಮುಂತಾದ ಗ್ರಾಮಗಳಲ್ಲಿರುವ ಡಾ. ಬಿ.ಆರ್.ಅಂಬೇಡ್ಕರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಚಿತ್ತಾಪುರ: ಚಿತ್ತಾಪುರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ನೇ ಪರಿನಿರ್ವಾಣ ದಿನವನ್ನು ತಾಲೂಕು ಆಡಳಿತ ಹಾಗೂ ದಲಿತ ಸಮುದಾಯದವರಿಂದ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸಿ ಪಂಚಶೀಲ ಧ್ವಜಾರೋಹಣ ಮಾಡಿದರು. ತಾಪಂ ಇಒ ಬಸವರಾಜ ಜಿರಡೆ ನೀಲಿ ಧ್ವಜಾರೋಹಣ ಮಾಡಿದರು. ಶಿವರಾಜ ಗೋರ್ಟಕರ್ ಬುದ್ದ ವಂದನೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ತಾಲೂಕಾಧಿಕಾರಿಗಳಾದ ಸಮಾಜ ಕಲ್ಯಾಣಾಧಿಕಾರಿ ಎಚ್.ಕೆ. ರಾಜಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವೀಂದ್ರ ರತ್ನಾಕರ್, ಜಿಪಂ ಎಡಬ್ಲೂ ನಂದಕುಮಾರ್ ಕುಲ್ಕರ್ಣಿ, ಬಿಇಒ ಶಿವಶರಣಪ್ಪ ಬನ್ನಿಕಟ್ಟೆ, ಪಿಎಸ್ಐ ಸಂಜಿವಕುಮಾರ್, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಪ್ರತಾಪ ಮುಕ್ತೆದಾರ, ದಲಿತ ಸಮುದಾಯದ ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ ಮುಡಬೂಳಕರ್, ಮಹೇಶ ಜಾಯಿ, ರಾಜಣ್ಣ ಕರದಾಳ, ಅಶೋಕ ಕಲ್ಲಕ, ಮಲ್ಲಪ್ಪ ಬುರ್ಲಿ, ಮಲ್ಲೇಶಿ ಹುಂಡೇಕಾರ, ನಾಗೇಂದ್ರ ಬುರ್ಲಿ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

