ಅಂಬೇಡ್ಕರ್ ಜಾತ್ಯತೀತ ಪ್ರತಿಭೆ
ಸುರಪುರ: ಭಾರತದಲ್ಲಿ ಶತಮಾನಗಳಿಂದ ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆಯ ಬೇರು ಅಲುಗಾಡಿಸಿ, ಶೋಷಿತ ಸಮುದಾಯಗಳಿಗೆ ನ್ಯಾಯಾ ಒದಗಿಸಿಕೊಟ್ಟ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ಗೆ ಸಲ್ಲುತ್ತದೆ. ಅವರು ಒಂದೇ ಜಾತಿಗೆ ಸೀಮಿತವಾಗಿಲ್ಲ. ದೀನ ದಲಿತರಿಗಾಗಿ ಮಾನವೀಯ ಹೋರಾಟ ಮಾಡಿದ್ದು, ಜಾತಿ ವ್ಯವಸ್ಥೆಯ ಲೆಕ್ಕಾಚಾರ ಬಿಡಿಸಿದರು ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯಕುಮಾರ ಸಾಲಿಮನಿ ಹೇಳಿದರು.
ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ 57ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ತಾಲೂಕು ದಲಿತ ಸಮಾಜದ ಸಮನ್ವಯ ಸಮಿತಿ ಶುಕ್ರವಾರ ಏರ್ಪಡಿಸಿದ್ದ ದಲಿತ ಸಮಾಜದ ಐಕ್ಯತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ನಗರಾಭೀವೃದ್ಧಿ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ದಲಿತ ಸಮುದಾಯ ವಿಫಲವಾಗುತ್ತಿದೆ. ಇನ್ನು ಮುಂದಾದರು ದಲಿತರು ಸರ್ಕಾರಿ ಯೋಜನೆ ದುಪಯೋಗ ಪಡಿಸಿಕೊಂಡು ಅಭಿವೃದ್ಧಿಯಾಗಬೇಕೆಂದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಮಾತನಾಡಿ, ಸಾನಿಧ್ಯ ವಹಿಸಿದ್ದ ವರಭಂತೆಜಿ, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ದಲಿತ ಸಮಾಜದ ಸಮನ್ವಯ ಸಮಿತಿ ಗೌರವಾಧ್ಯಕ್ಷ ದುರ್ಗಪ್ಪ ಗೋಗಿಕರ್ ಮಾತನಾಡಿದರು.
ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಧ್ವಜಾರೋಹಣ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಏಜಾಜ ಹುಸೇನ್, ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ವೇದಿಕೆಯಲ್ಲಿದ್ದರು. ದೇವಿಂದ್ರ ಹೆಗಡೆ ಪ್ರಾಸ್ತವಿಕ ಮಾತನಾಡಿದರು. ಶರಣಪ್ಪ ದಖನಿ ತಂಡ ಕ್ರಾಂತಿಗೀತೆ ಹಾಡಿದರು. ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು. ರಾಹುಲ್ ಹುಲಿಮನಿ ನಿರೂಪಿಸಿದರು. ಮಲ್ಲಿಕಾರ್ಜುನ ಕ್ರಾಂತಿ ವಂದಿಸಿದರು.
ಕಲ್ಲದೇವನಹಳ್ಳಿಯಲ್ಲಿ...
ಹುಣಸಗಿ: ಕಲ್ಲದೇವನಹಳ್ಳಿ ಗ್ರಾಮದಲ್ಲಿ ಅಂಬೇ ಡ್ಕರ್ ಪರಿನಿರ್ವಾಣ ದಿನವನ್ನು ಶ್ರೀಕಾಂತ ಗಣಾಚಾರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಡಿಎಸ್ಎಸ್ ಯಾದಗಿರಿ ಜಿಲ್ಲಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸಿಮೀತವಾಗಿರದೆ ಎಲ್ಲ ಜಾತಿ ಜನಾಂಗದವರನ್ನು ಸಹೋದರರಂತೆ ಕಾಣಬೇಕು ಮತ್ತು ದೀನ ದಲಿತರ ಏಳ್ಗಗೆ ಶ್ರಮವಹಿಸಬೇಕು ಎಂದಿದ್ದರು ಎಂದರು.
ವಿವಿಧ ಇಲಾಖೆಯಿಂದ ಬಿಡುಗಡೆಯಾಗುವ ಹಣ ಸರಿಯಾದ ರೀತಿಯಲ್ಲಿ ಬಳಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಹೇಳಿದ ಸಚಿವರನ್ನು ಸ್ವಾಗತಿಸುವುದಾಗಿ ಹೇಳಿದರು. ಶಿವಣ್ಣ ಬಡಿಗೇರ, ಬಸವರಾಜ ತಳವಾರ, ದೇವಪ್ಪ ದೊಡಮನಿ, ಯಲ್ಲಪ್ಪ ಇಸ್ಲಾಂಪುರ ಸೇರಿದಂತೆ ಗ್ರಾಮದ ಮಕ್ಕಳು ಪ್ರಮುಖರು ಭಾಗವಹಿಸಿದ್ದರು.
ತಡಿಬಿಡಿಯಲ್ಲಿ...
ಶಹಾಪುರ: ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ 57ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಧ್ವಜಾರೋಹಣ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಮಾರಂಭದ ಅಧ್ಯಕ್ಷತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಸಂಚಾಲಕರು ತಿಪ್ಪಣ್ಣ ಲಂಡನಕರ್ ಮತ್ತು ಗ್ರಾಪಂ ಅಧ್ಯಕ್ಷ ಅಬ್ದುಲ್ ಬಾಷಾ ದೇವಿಂದ್ರಪ್ಪ ಡಿ. ಸಾಗರ ಮಲ್ಲಪ್ಪ ಹಳ್ಳಿ ಗ್ರಾಮ ಶಾಖೆ ಸಂಚಾಲಕರು ಹೋನಪ್ಪ ದಳಪತಿ ಬಸಪ್ಪ ಪೂಜಾತಿ ಮತ್ತು ಗ್ರಾಮ ಶಾಖೆ ಎಲ್ಲಾ ಪದಾಧಿಕಾರಿಗಳು ಊರಿನ ಪ್ರಮುಖ ಮುಖಂಡರು ಪಾಲ್ಗೊಂಡು ಡಾ. ಬಾಬಾಸಾಹೇಬರ ಸ್ಮರಣೆ ಮಾಡಿದರು.
'ಬಾಬಾ ತತ್ವ ಸ್ಫೂರ್ತಿಯಾಗಲಿ'
ಶಹಾಪುರ: ಸಾಮಾಜಿಕ ನ್ಯಾಯದ ಕನಸು ಹೊತ್ತ ಡಾ. ಅಂಬೇಡ್ಕರ್ ಜೀವನದುದ್ದಕ್ಕೂ ಹೋರಾಟದ ಬದುಕನ್ನು ರೂಪಿಸಿಕೊಂಡು ಇಡೀ ಶೋಷಿತ ಸಮುದಾಯಗಳ ಭರವಸೆಯ ನೇತಾರದಾರರು ಎಂದು ನಿವೃತ್ತ ಪ್ರಾಚಾರ್ಯ ತುತಾರೆ ಸುರೇಶ ತಿಳಿಸಿದರು.
ಅಂಬೇಡ್ಕರ್ 57ನೇ ಮಹಾಪರಿನಿರ್ವಾಣ ದಿನ ಪ್ರಯುಕ್ತ ಪಟ್ಟಣದ ಬುದ್ಧನಗರದಲ್ಲಿರುವ ಡಾ. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ, ದೇಶಕ್ಕೆ ಮಹಾನ್ ಕೂಡುಗೆ ನೀಡಿದ ಅವರ ತತ್ವಾದರ್ಶಗಳು ಇಡೀ ನಾಗರಿಕ ಸಮಾಜಕ್ಕೆ ಸ್ಫೂರ್ತಿ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶರಣಪ್ಪ ಚಿಪ್ಪಾರ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ಶಿವಪುತ್ರಪ್ಪ ಜವಳಿ, ನಾಗಣ್ಣಾಬಡಿಗೇರ, ರುದ್ರಪ್ಪ ಹುಲಿಮನಿ, ಯಲ್ಲಪ್ಪದೊಡ್ಮನಿ, ತಿಪ್ಪಣ್ಣ ನಾಯ್ಕೋಡಿ, ಮಲ್ಲಪ್ಪ ಮುಂಡಾಸ, ಬಸವರಾಜ ನಾಯ್ಕಲ್, ರಾಜು, ನಿಂಗಣ್ಣ, ಅಂಬರೇಶ ಇತರರು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

