ಗುಲ್ಬರ್ಗಾ

ಖರ್ಗೆ ಕಾರ್ಯ ಶ್ಲಾಘನೀಯ: ಶರಣು

Published On :

ಸೈದಾಪುರ: ಇಲ್ಲಿನ ನಾರಾಯಣಪೇಟ್ ರೋಡ ರೈಲು ನಿಲ್ದಾಣವನ್ನು ಸೈದಾಪುರದೊಂದಿಗೆ ಮರುನಾಮಕರಣಕ್ಕೆ ಚಾಲನೆ ನೀಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಉತ್ತರ ಕರವೇ ಅಧ್ಯಕ್ಷ ಶರಣು.ಬಿ.ಗದ್ದುಗೆ ಅಭಿನಂದಿಸಿದ್ದಾರೆ.
ಇದೊಂದು ಪಕ್ಷಾತೀತವಾದ ಹಾಗೂ ಭಾವನಾತ್ಮಕವಾದ ನಿರ್ಧಾರವನ್ನು ಡಾ. ಮಲ್ಲಿಕಾರ್ಜುನ ಖರ್ಗೆ ಕೈಗೊಂಡಿದ್ದಾರೆ. ಉತ್ತಮ ಪ್ರಯತ್ನ ಅವರದ್ದಾಗಿದೆ. ತಾಂತ್ರಿಕ ತೊಂದರೆಗಳನ್ನು ದೂರ ಮಾಡಿ ಆ ಮೂಲಕ ರೇಲ್ವೆ ನಿಲ್ದಾಣ ಮರುನಾಮಕರಣವಾಗುತ್ತಿರುವುದು ಕನ್ನಡಿಗರಲ್ಲಿ ಅಭಿಮಾನವನ್ನುಂಟು ಮಾಡುವಂತಾಗಿದೆ. ಇದರ ಶ್ರೆಯಸ್ಸು ಸಂಸದರು ಹಾಗೂ ರೇಲ್ವೆ ಸಚಿವರಾದ ಖರ್ಗೆಗೆ ಸಲ್ಲುತ್ತದೆ ಎಂದರು.
ಉಸ್ತುವಾರಿ ಸಚಿವರ ಪ್ರವಾಸ
ಗುರುಮಠಕಲ್: ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ ಚಿಂಚನಸೂರ ಡಿ.7 ಹಾಗೂ 9 ರಂದು ಜಿಲ್ಲೆಗೆ ಆಗಮಿಸಲ್ಲಿದ್ದಾರೆ. ಡಿ.7ರಂದು ಮಧ್ಯಾಹ್ನ ಗುರುಮಠಕಲ್ ಮತಕ್ಷೇತ್ರದ ಸೈದಾಪುರದಲ್ಲಿ ನಡೆಯಲ್ಲಿರುವ ನಾರಾಯಣಪೇಟೆ ರೇಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 3ಕ್ಕೆ ಸೈದಾಪುರದಿಂದ ಗುಲ್ಬರ್ಗಕ್ಕೆ ತೆರಳುವರು. ಡಿ.9 ರಂದು ಗುರುಮಠಕಲ್ ಮತಕ್ಷೇತ್ರದ ಕಡೇಚೂರ ಮತ್ತು ಬಾಡಿಯಾಲದ ಹತ್ತಿರ ನಿರ್ಮಿಸಲಾಗುತ್ತಿರುವ ಟೆಕ್ಸಟೈಲ್ ಪಾರ್ಕ್‌ಗೆ ಪಡೆಯಲಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಕಿ ಇರುವ ಪರಿಹಾರ ಕ್ರಮವನ್ನು ಮತ್ತು ಅದಕ್ಕೆ ಸಂಬಂಧಿಸಿದಂತೆ ಗುಲ್ಬರ್ಗ ಕೈಗಾರಿಕಾ ಮಂಡಳಿಯಲ್ಲಿ ಬಾಕಿ ಇರುವ ಇತರೇ ಸಮಸ್ಯೆಗಳನ್ನು ಬಗೆ ಹರಿಸುವ ಕುರಿತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲ್ಲಿದ್ದಾರೆ.

ಸಚಿವ ಖರ್ಗೆ ಪ್ರವಾಸ
ಗುಲ್ಬರ್ಗ: ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿ ಜಿಲ್ಲೆಯ ಸೈದಾಪುರದಿಂದ ರೈಲಿನ ಮೂಲಕ ಡಿ.7ರಂದು ಸಂಜೆ 5ಕ್ಕೆ ಗುಲ್ಬರ್ಗ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಡಿ.8ರಂದು ಮ.12ಕ್ಕೆ ರೈಲಿನ ಮೂಲಕ ಉಮ್ದನಗರ ಪ್ರಯಾಣಿಸಿ ಅಲ್ಲಿಂದ ನವದೆಹಲಿಗೆ ಪ್ರಯಾಣಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.