ಭಕ್ತೋದ್ಧಾರಕ ರಾಸಣಗಿ ಬಲಭೀಮ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಡಿ.6
ಜೇವರ್ಗಿ ತಾಲೂಕಿನ ರಾಣಸಗಿಯಲ್ಲಿ ಡಿ.7, 8ರಂದು ಬಲಭೀಮ ದೇವರ ಉತ್ಸವ ನಡೆಯಲಿದೆ.
ಛಟ್ಟಿ ಉತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 7ರಂದು ಬೆ.7ಕ್ಕೆ ಸುಪ್ರಭಾತ, 9ಕ್ಕೆ ವಾಯುಸ್ತುತಿ ಪುನಶ್ಚರಣ, 11ಕ್ಕೆ ಪಂಚಾಮೃತ ಅಭಿಷೇಕ, ಮ.1ಕ್ಕೆ ಬಲಭೀಮಸೇನ್ ದೇವರಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಹಾಗೂ ಮಹಾ ಮಂಗಳಾರತಿ, ಮ.1ರಿಂದ 4ರವರೆಗೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಭಜನೆ, ರಾತ್ರಿ 8ಕ್ಕೆ ಗುಲ್ಬರ್ಗದ ಪ್ರಸನ್ನ ಕೊರ್ತಿ ಅವರಿಂದ ಸಂಗೀತ ಕಾರ್ಯಕ್ರಮ, 9ಕ್ಕೆ ಪಲ್ಲಕ್ಕಿ ಸೇವೆ, ಗುರುರಾಜ ಹೇರೂರ ನೆಲೋಗಿ ಹಾಗೂ ವೃಂದದಿಂದ ಭಜನೆ ನಡೆಯಲಿದೆ.
ಡಿ.8ರಂದು ಮರು ಛಟ್ಟಿ ಉತ್ಸವ ನಡೆಯಲಿದ್ದು, ಅನ್ನಸಂರ್ಪಣೆಯನ್ನು ದಿ. ರಂಗಾಚಾರ್ಯಾ ಹರವಾಳಕರ್ ಅವರ ಪುತ್ರರಾದ ವೆಂಕಟೇಶ ಹರವಾಳ, ಅನಂತ ಹರವಾಳ, ರಾಘವೇಂದ್ರ ಹರವಾಳಕರ್, ಆಂಜನೇಯ ಹರವಾಳಕರ್, ಕೃಷ್ಣಮೂರ್ತಿ ಹರವಾಳಕರ್ ಮತ್ತು ಪ್ರಸನ್ನ ಹರವಾಳಕರ್ ಇವರಿಂದ ಮಾಡಲಾಗುತ್ತದೆ.
ಭಕ್ತೋದ್ಧಾರಕ ಬಲಭೀಮ: ಉತ್ತಾರಾಭಿಮುಖವಾಗಿ ಹರಿಯುತ್ತಿರುವ ಜೇವರ್ಗಿ ತಾಲೂಕಿನ ರಾಸಣಗಿ ಭೀಮಾನದಿ ತೀರದಲ್ಲಿ ನೆಲೆಸಿರುವ ಶ್ರೀರಾಸಣಗಿ ಬಲಭೀಮಸೇನ ದೇವರು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಭಕ್ತೋದ್ಧಾರಕರಾಗಿ ನೆಲೆಸಿದ್ದಾರೆ.
ಜೇವರ್ಗಿಯಿಂದ 15 ಕಿಮೀ ತೆರಳಿದರೆ ರಾಸಣಗಿ ಬಲಭೀಮ ದೇವರ ದೇವಸ್ಥಾನವಿದೆ. ದೇವರ ಮಹಿಮೆ ತನ್ನದೇಯಾದ ಇತಿಹಾಸವಿದೆ. ಹಿಂದೆ ಅಗಸನೊಬ್ಬ ನದಿಯಲ್ಲಿ ಬಟ್ಟೆ ತೊಳೆಯುವಾಗ ಆತ ಉಪಯೋಗಿಸಿದ ಬಂಡೆಗಲ್ಲು “ÔÚàM’ ಗುಡುತ್ತಾ ನರಳುವಂತೆ ಭಾಸವಾಗುತ್ತಿತ್ತು. ನಂತರ ಆತ ಊರಿನ ಸರ್ವ ಸಮ್ಮುಖದಲ್ಲಿ ಹೋದಾಗ ಭಕ್ತ ವತ್ಸಲನಾದ ಬಲಭೀಮ ದೇವರ ಉದ್ಭವಮೂರ್ತಿ ಪತ್ತೆಯಾಯಿತು ಎನ್ನುವ ಪ್ರತೀತಿ ಇದೆ. ಆ ಸ್ಥಳ ಇಂದು ಹೊಳೆ ಜಟ್ಟಿಂಗರಾಯ ಎಂದು ಜನಜನಿತವಾಗಿದೆ.
ಬಲಭೀಮನ ರಾಸಣಗಿ ಒಲವು: ನದಿಯಲ್ಲಿ ದೊರೆತ ಬಲಭೀಮ ದೇವರಮೂರ್ತಿಯನ್ನು ರಾಸಣಗಿ ಪಕ್ಕದ ಹರವಾಳಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸಿದರೂ ಸಾಧ್ಯವಾಗಲಿಲ್ಲ. ನಂತರ ರಾಸಣಗಿ ಗ್ರಾಮದ ಕಡೆಗೆ ಎತ್ತಿನ ಬಂಡಿ ತಿರುಗಿಸಿದಾಗ ಸರಾಗವಾಗಿ ಸಾಗಿ ರಾಸಣಗಿ ಗ್ರಾಮದ ಒಂದು ಸ್ಥಳಕ್ಕೆ ಬಂದು ನಿಂತಿತು. ಅದೇ ಸ್ಥಳ ಮಾರ್ಗಶಿರ ಶುದ್ಧ ಪಂಚಮಿಯಂದು ಆ ಉದ್ಭವಮೂರ್ತಿಯನ್ನು ಪ್ರತಿಷ್ಠಾಪಿಸಿ, ದೇವಸ್ಥಾನ ಕಟ್ಟಿಸಿದರು. ಜಾತಿ, ಮತ, ಪಂಥಗಳ ಭೇದ ಎಣಿಸದೆ ಇಂದಿಗೂ ಜನರು ದೇವಸ್ಥಾನದಲ್ಲಿ ನಿತ್ಯ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಮಾರ್ಗಶಿರ ಬಹಳ ಶ್ರೇಷ್ಠವಾಗಿದ್ದು, ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಮಾರ್ಗಶಿರ ಪಂಚಮಿ ಮತ್ತು ಷಷ್ಠಿ ಎರಡು ದಿವಸ ಆಚರಿಸಲಾಗುತ್ತದೆ. ಎರಡು ದಿವಸವು ಪಂಚಾಮೃತಾಭಿಷೇಕ, ಅಲಂಕಾರ, ಪೂಜೆ, ಪ್ರಸಾದದ ವ್ಯವಸ್ಥೆ ಇರುತ್ತದೆ.
ಗುರುವರ್ಯರ ಭೇಟಿ: ಪ್ರಥಮವಾಗಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ದರುಶನ ಪಡೆದಿದ್ದಾರೆ. 2009ರಲ್ಲಿ ಶ್ರೀಗಳು ಪುನಃ ದೇವಸ್ಥಾನಕ್ಕೆ ಬಂದು ಮೂಲ ರಾಮದೇವರ ಪೂಜೆ ಮತ್ತು ಬಲಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿದ್ದಾರೆ.
ಅದಲ್ಲದೆ ಪೇಜಾವರ ಶ್ರೀಗಳು, ತದನಂತರ ಮಂತ್ರಾಲಯದ ಸುವಿಧೇಂದ್ರತೀರ್ಥರು, ವಿಧ್ಯಾಧೀಶ ಶ್ರೀಗಳು ಪಾಲಿಮಾರು ಯತಿಧ್ವಯರು ಇಲ್ಲಿ ತಂಗಿ ಉತ್ತರವಾಹಿನಿಯಲ್ಲಿ ಗ್ರಹಣ ದಿನದಂದು ಸ್ಥಾನಾದಿ ಕರ್ಮವನ್ನು ಮಾಡಿ ಭೀಮಸೇನ ದೇವರಿಗೆ ಮಧು ಅಭಿಷೇಕ ಮಾಡಿ ದರುಶನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

