ಮುಸ್ಲಿಮರಿಂದ ಕರಾಳ ದಿನಾಚರಣೆ
ಯಾದಗಿರಿ: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಾಶಗೊಳಿಸಿ ಹಲವಾರು ವರ್ಷಗಳು ಕಳೆದಿವೆ. ಇಲ್ಲಿನ ಮುಸ್ಲಿಂ ಸಮಾಜದ ಮುಖಂಡರು ನಗರದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕರಾಳ ದಿನವನ್ನಾಗಿ ಆಚರಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ಮುಖಂಡ ಮಹ್ಮದ್ ಸಮ್ದಾನಿ ಮೂಸಾ, ಮಸೀದಿ ನಾಶ ನಂತರ ಕೇಂದ್ರ ಸರ್ಕಾರ ಪುನರ್ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಅದು ಅನುಷ್ಠಾನಗೊಂಡಿಲ್ಲ. ಕಾರಣ ನಮ್ಮ ಭಾವನೆಗಳನ್ನು ಅರಿತು ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು. ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಲಾಯಕ ಹುಸೇನ ಬಾದಲ್, ಶೇಖ್‌ಜಹೀರುದ್ದೀನ್, ಮತಿನ ಅಹ್ಮದ್ ಚೌದರಿ, ಡಾ. ರಫಿಕ್ ಸೌಗರ್, ಫಕೀರ್ ಮಹ್ಮದ್ ಖೋತ್, ನಗರಸಭೆ ಸದಸ್ಯರಾದ ಶೇಖ್ ಜಕೀಯೋದ್ದನ್, ಕಮಲ ಅಹ್ಮದ್, ಇನಾಯುತುಲ್ಲಾ ರೆಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದರೋಡೆ: ಬಂಧನ
ಕೆಂಭಾವಿ: ಕಳೆದ ಆಗಸ್ಟ್ 27ರಂದು ಮಲ್ಲಾ- ಕೆಂಭಾವಿ ರಸ್ತೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮಾಲೀಕ, ಪತ್ರಕರ್ತ ರಾಘವೇಂದ್ರ ದೇಶಪಾಂಡೆ ಮೇಲೆ ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ ಪ್ರಕರಣವು ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಕಡೆಗೂ ದರೋಡೆಕೋರರನ್ನು ಪತ್ತೆ ಹಚ್ಚುವಲ್ಲಿ ಕೆಂಭಾವಿ ಪೋಲಿಸರು ಶುಕ್ರವಾರದಂದು ಯಶಸ್ವಿಯಾಗಿದ್ದಾರೆ. ಯಾದಗಿರಿ ಜಿಲ್ಲಾ ಎಸ್ಪಿ ವಂಶಿಕೃಷ್ಣ ಮತ್ತು ಡಿವೈಎಸ್‌ಪಿ ಎಸ್.ಡಿ. ಕಟ್ಟಿಮನಿ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತಂಡವು ಸಿಪಿಐ ವಿಜಯ ಮುರಗುಂಡಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದೆ. ಪ್ರಕರಣ ಸಂಭವಿಸಿದ 3 ತಿಂಗಳೊಳಗೆ ಕಳ್ಳರನ್ನು ಪತ್ತೆ ಹಚ್ಚಲು ಮೊಬೈಲ್ ಟವರ್ ಲೋಕೆಶನ್ ಸಹಾಯ ಮಾಡಿತು ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಇನ್ನೂ ಇಬ್ಬರ ಬಂಧನಕ್ಕೆ ಜಾಲ: ಬಂಧಿತರಿಂದ ಎರಡು ತೊಲೆ ಬಂಗಾರ, ಒಂದು ಸ್ಯಾಮಸಂಗ್ ಮೊಬೈಲ್, 3600 ನಗದು, ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಮೋಟರ್ ಬೈಕ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಶಹಾಪುರ ತಾಲೂಕಿನ ಮೂವರನ್ನು, ಮಲ್ಲಾ ಗ್ರಾಮದ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳಾದ ಹುಸೇನ ಚಂದಾಸಾಬ ಪಟೇಲ ಸಿಂಗನಳ್ಳಿ, ಕರ್ನಾಟಕ ರಕ್ಷಣಾ ವೇದಿಕೆಯ ಶಹಾಪುರ ತಾಲೂಕಾ ಘಟಕ ಉಪಾಧ್ಯಕ್ಷ ವಿನೋದ ಕೇಶುನಾಯಕ ರಾಠೋಡ ಉಕಿನಾಳ ತಾಂಡಾ, ಅಶೋಕ ಸೋನುಮಲ ರಾಠೋಡ ಉಕನಾಳ ತಾಂಡಾ, ಹಳ್ಳೆಪ್ಪ ನಾಗಪ್ಪ ದೊಡಮನಿ ಮಲ್ಲಾ(ಬಿ) ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ ಎಂದರು. ಪಿಎಸ್‌ಐ ಸುನೀಲಕುಮಾರ ಮೂಲಿಮನಿ ಮತ್ತು ಸಿಬ್ಬಂದಿ ಹಾಜರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

