ಹೆದ್ದಾರಿ ಕಾಮಗಾರಿ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ, ಹುಣಸಗಿ, ಡಿ.9
ಪಟ್ಟಣದಲ್ಲಿ ಸೋಮವಾರ ಹುಣಸಗಿ ಮತ್ತು ಸುತ್ತಮುತ್ತಲಿನ ನಾಗರಿಕರು ಹಾಗೂ ಅನೇಕ ಸಂಘ- ಸಂಸ್ಥೆಗಳಿಂದ ದೇವಾಪುರ- ಮನಗೂಳಿ ರಾಜ್ಯ ಹೆದ್ದಾರಿ- 61ರ ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ಅಂಗಡಿ-ಮುಂಗ್ಗಟ್ಟು ಮುಚ್ಚಿ ಬೃಹತ್ ಮೆರವಣಿಗೆ ನಡೆಸಿ ಹುಣಸಗಿ ಬಂದ್ಅನ್ನು ಯಶಸ್ವಿಯಾಗಿ ನಡೆಸಿದರು.
ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಕೊಡೇಕಲ್ಲ ಕ್ರಾಸ್ನ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆದು, ನಂತರ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ ಹುಣಸಗಿ ಪಟ್ಟಣದ ಹೋರಾಟ ಸಮಿತಿಯ ಮುಖಂಡರು ಮಾತನಾಡಿ, ಸುರಪುರ ತಾಲೂಕಿನ ದೇವಪುರ ಕ್ರಾಸ್ನಿಂದ ದೇವತ್ಕಲ್, ವಜ್ಜಲ್, ಹುಣಸಗಿ, ಮಾಳನೂರ ಮುಖಾಂತರ ಬಿಜಾಪುರ ಜಿಲ್ಲೆಯ ಮನಗೂಳಿವರೆಗೆ ಇರುವ 106 ಕಿಮೀ ರಾಜ್ಯ ಹೆದ್ದಾರಿ ರಸ್ತೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಒತ್ತಾಯಿಸಿದರು.
2 ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆಯ ಆಧೀನ ಸಂಸ್ಥೆಯಾದ ಕೆ-ಶಿಪ್ ಮೂಲಕ 106 ಕಿಮೀ ರಸ್ತೆಯನ್ನು 248 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು. ತದನಂತರ ರಾಜ್ಯದಲ್ಲಿ ಕೆ-ಶಿಪ್ ನಿರ್ಮಿಸುತ್ತಿರುವ ರಸ್ತೆಯ ವಿಳಂಬಕ್ಕೆ ಲೋಕೋಪಯೋಗಿ ಇಲಾಖೆಯ ಗೊಂದಲವೇ ಕಾರಣ ಎಂದು ಹೇಳಿದರು.
ವಾರದೊಳಗೆ ತಾತ್ಕಾಲಿಕ ರಸ್ತೆ ದುರಸ್ತಿ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ತೀವ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲು ಮನವಿಯನ್ನು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಲಾಯಿತು.
ಮುಖಂಡರಾದ ನಾಗಣ್ಣ ಸಾಹು ದಂಡಿನ್, ಯುವ ಮುಖಂಡ ಬಬ್ಲುಗೌಡ ಕೊಡೇಕಲ್ಲ, ಎಚ್.ಸಿ. ಪಾಟೀಲ್, ವೀರೇಶ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಬಸವರಾಜಸ್ವಾಮಿ ಸ್ಥಾವರಮಠ, ಶರಣಗೌಡ ವಜ್ಜಲ್, ಗುರಪ್ಪ ಸಜ್ಜನ್, ತಿಪ್ಪಣ್ಣ ಸಾಹು ಚಂದಾ, ರಾಚಯ್ಯಸ್ವಾಮಿ ಮಠ, ಬಸಣ್ಣ ದೇಸಾಯಿ, ಬಿ.ಸಿ. ಪಾಟೀಲ್, ಬಸವರಾಜ ವೈಲಿ, ಆನಂದ ಬಾರಿಗಿಡದ ಸೇರಿದಂತೆ ಇತರರು ಇದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

