ಶೌಚಾಲಯ ಅರಿವು ಮೂಡಿಸಿ
ಕನ್ನಡಪ್ರಭ ವಾರ್ತೆ ಸುರಪುರ ಡಿ.10
ಗ್ರಾಮೀಣ ಜನರು ಹೆಚ್ಚಾಗಿ ಬಯಲು ಶೌಚವನ್ನೆ ಅವಲಂಬಿಸಿದ್ದಾರೆ. ಇದಕ್ಕೆ ಅವರಲ್ಲಿನ ಅರಿವಿನ ಕೊರತೆಯೇ ಪ್ರಮುಖ ಕಾರಣ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ ಬಯಲು ಶೌಚ ತಡೆಗಟ್ಟಿ, ಶೌಚಾಲಯ ಕಟ್ಟಿಸಲು ಮುಂದಾಗಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಸೂರ್ಯಕಾಂತ ಸಲಹೆ ನೀಡಿದರು.
ತಾಪಂ ಸಭಾಂಗಣದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಸ್ವಚ್ಛತಾ ಕಾರ್ಯಕರ್ತರಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಶೌಚಾಲಯ ಹೊಂದಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ನಿರ್ಮಲ ಭಾರತ ಅಭಿಯಾನ ಎಂಬ ಯೋಜನೆ ಹಾಕಿಕೊಂಡಿದೆ. ಸರ್ಕಾರ ಇಷ್ಟೊಂದು ಹಣ ಕೊಡುತ್ತಿದ್ದರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂಬುದು ಖೇದಕರ ಸಂಗತಿ ಎಂದರು.
ಬಯಲು ಶೌಚವು ಸಮಾಜಕ್ಕ ಶಾಪವಾಗಿ ಕಾಡುತ್ತಿದೆ. ಮಹಿಳೆಯರು ಶೌಚಕ್ಕೆ ಹೊರಗೆ ಹೋಗುವುದು ತೀರಾ ಅವಮಾನದ ಸಂಗತಿ. ಮನೆಯ ಅಕ್ಕಪಕ್ಕದಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಪರಿಸರ ಮಲೀನವಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಸೂಳ್ಳೆ ಮತ್ತು ನೊಣಗಳು ಮನೆಯಲ್ಲಿನ ಆಹಾರ ಪದಾರ್ಥದ ಮೇಲೆ ಬಂದು ಕೂಡುವುದರಿಂದ ಕಾಲರಾ, ಟೈಫಾಯಿಡ್ ಸೇರಿದಂತೆ ಇತರೆ ರೋಗಗಳು ಆಕ್ರಮಿಸುತ್ತವೆ. ಕಾರಣ ಬಯಲು ಶೌಚ ಹೋಗಲಾಡಿಸಲು ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜನರಿಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ನಿರ್ಮಲ ಭಾರತ ಅಭಿಯಾನದ ರಾಜ್ಯ ಸಮಾಲೋಚಕಿ ಅನ್ನಪೂರ್ಣ ಉಪ್ಪೇನ್ ಮಾತನಾಡಿ, ಕಳೆದ ಐದು ದಿನಗಳಿಂದ ತಾಲೂಕಿನ ನಾನಾ ಗ್ರಾಮಗಳಿಗೆ ಬೆಳಗ್ಗೆ 4.30 ರಿಂದ 8 ಗಂಟೆಯವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಿ ಬಯಲು ಶೌಚಕ್ಕೆ ಹೋಗುವ ಮಹಿಳೆ ಹಾಗೂ ಪುರುಷರನ್ನು ತಡೆದು ಮನವೊಲಿಸಿ ಮನೆಯಲ್ಲಿ ಶೌಚಾಲಯ ನಿರ್ಮಿಸಿ, ಬಳಸುವಂತೆ ಮನವಿ ಮಾಡಿದ್ದೇವೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಯ್ಯ ಹಿರೇಮಠ ಮಾತನಾಡಿದರು. ಜಿಲ್ಲಾ ಸಮಾಲೋಚಕ ವೆಂಕಟೇಶ ಸ್ವಾಗತಿಸಿದರು. ತಾಲೂಕು ಸಮಾಲೋಚಕ ಸಂಗೇಶ ಪುಜಾರಿ ನಿರೂಪಿಸಿದರು. ಶರಣಗೌಡ ಯಾದಗಿರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

