ಗುಲ್ಬರ್ಗಾ

ನಾಳೆ ...ನರಳಿದಾಗ ಲೋಕಾರ್ಪಣೆ

Published On :

ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಡಿ.15ರಂದು ಸಂಜೆ 4.30ಕ್ಕೆ ವಿಜಯಕುಮಾರ್ ರೋಣದ ಅವರ ಮರದ ಮನ ನರಳಿದಾಗ ಗ್ರಂಥ ಲೋಕಾರ್ಪಣೆ ಮತ್ತು ಗುರುವಂದನ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಪಾಟೀಲ್ ಅವರು ಗ್ರಂಥ ಲೋಕಾರ್ಪಣೆ ಮಾಡುವರು. ಸಹ ಪ್ರಾಧ್ಯಾಪಕ ಡಾ. ಈಶ್ವರಯ್ಯ ಹಿರೇಮಠ ಗ್ರಂಥ ಪರಿಚಯ ಮಾಡಲಿದ್ದಾರೆ. ಡಾ. ಎಸ್.ಎಸ್. ಗುಬ್ಬಿ, ಪ್ರೊ. ಎಂ.ಬಿ. ಅಂಬಲಗಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಿದ್ದಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ವಿಜಯಕುಮಾರ್ ಹುಲಿ ಅಧ್ಯಕ್ಷತೆ ವಹಿಸಲಿದ್ದಾರೆ.
ಗುವಿವಿ ಬಂದ್ ಮುಂದೂಡಿಕೆ
ಗುಲ್ಬರ್ಗ: ಕುಲಪತಿ ಹಠಾವೋ, ವಿವಿ ಬಚಾವೋ ಎಂದು ಆಗ್ರಹಿಸಿ ವೀರಶೈವ ಯುವ ಬಳಗವು ಡಿ.13ರಂದು ಹಮ್ಮಿಕೊಂಡಿದ್ದ ಗುಲ್ಬರ್ಗ ವಿಶ್ವವಿದ್ಯಾಲಯ ಬಂದ್ ಕರೆಯನ್ನು ಡಿ.17ಕ್ಕೆ ಮುಂದೂಡಲಾಗಿದೆ ಎಂದು ಬಳಗದ ಸಂಚಾಲಕ ಮಲ್ಲಿಕಾರ್ಜುನ ಗರೂರ್ ತಿಳಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿರುವ ಕುಲಪತಿ ವಿರುದ್ಧ ಆಕ್ರೋಶಗೊಂಡಿರುವ ಯುವ ವೀರಶೈವರು ವಿವಿ ಬಂದ್ ಹೋರಾಟಕ್ಕೆ ಮುಂದಾಗಿದ್ದರು. ಡಿ.17ರಂದು ಬೆ.10.30ಕ್ಕೆ ನಗರದ ಬಸವೇಶ್ವರ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಖ್ಯ ಪೇದೆಗಳ ಅಮಾನತು
ಗುಲ್ಬರ್ಗ: ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ನಾಗರಿಕ ಮುಖ್ಯ ಪೇದೆ ಅನೀಲ್ ಮತ್ತು ಚೌಕ್ ಪೊಲೀಸ್ ಠಾಣೆಯ ನಾಗರಿಕ ಮುಖ್ಯ ಪೇದೆ ರಾಜಪ್ಪ ಅವರು 14.2.2013ರಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾದ ಆರೋಪದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತಿನ ಕ್ರಮಕ್ಕೆ ಆದೇಶಿಸಿ ಇಬ್ಬರನ್ನು ಅಮಾನತಿನಲ್ಲಿರಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಕಾರ್ಯಕರ್ತರ ಸಭೆ
ಗುಲ್ಬರ್ಗ: ಜೆಡಿಯು ಜಿಲ್ಲಾ ಘಟಕದ ಕಾರ್ಯಕರ್ತರ ಸಭೆಯು ಡಿ.15ರಂದು ಮ. 2.30ಕ್ಕೆ ಕುಸನೂರ ರಸ್ತೆಯಲ್ಲಿರುವ ಗುಲ್ಬರ್ಗ ಪ್ರೆಸ್ಕ್ಲಬ್ನಲ್ಲಿ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ್ವರರಾವ ಕುಪಾವತ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ಆಗಮಿಸಲಿದ್ದಾರೆ. ಪಕ್ಷದ ಮುಖಂಡರಾದ ಶಂಕರ ಕೋಡ್ಲಾ ನೇತೃತ್ವ ವಹಿಸುವರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಗುವುದು. ಮಾಹಿತಿಗಾಗಿ ಮೊ. 7259418640ಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.