ಖಾತ್ರಿ ಕೆಲಸ ಪರಿಶೀಲನೆ
ಕೆಂಭಾವಿ: ಉದ್ಯೋಗ ಖಾತ್ರಿ ಯೋಜನೆಯಡಿ 2011- 12ನೇ ಸಾಲಿನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಖಲಾತಿ ಹಾಗೂ ಕಾಮಗಾರಿಗಳ ಪರಿಶೀಲನೆಗೆ ಬೆಂಗಳೂರು ತಂಡ ಭೇಟಿ ನೀಡಿ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಆಯುಕ್ತ ಪ್ರಭಾಷ್ ಚಂದ್ರ ರೈ ಅವರು ಗ್ರಾಪಂ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆಯ ಎರೆಹುಳು ಘಟಕ, ಶಾಲೆಯ ಹೂದೋಟ, ಚರಂಡಿ, ರಾಶಿ ಕಣ ಹೀಗೆ ಹಲವಾರು ಕಾಮಗಾರಿಗಳ ದಾಖಲೆ ಸಮೇತ ಪರಿಶೀಲಿಸಿದರು.
ಸಮಗ್ರ ತನಿಖೆ: ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನಾವು ಈಗಲೇ ಏನು ಹೇಳುವುದಿಲ್ಲ. ಇನ್ನೂ ಸಮಗ್ರ ತನಿಖೆ ನಡೆಸಬೇಕು. ಆಗ ಮಾತ್ರ ವಿವರ ತಿಳಿಯುತ್ತದೆ. ಆಯ್ದ ಕೆಲವು ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದೇವೆ. ಸ್ಥಳಿಯ ಅಧಿಕಾರಿಗಳು ಹೇಳಿದ ಕಾಮಗಾರಿಯನ್ನು ನಾವು ನೋಡುತ್ತಿಲ್ಲ. ಬದಲಿಗೆ 2011-12 ರಲ್ಲಿ ಮಾಡಲಾದ ಕಾಮಗಾರಿಗಳ ವಿವರ ನಮ್ಮಲ್ಲಿದೆ. ಕಾಮಗಾರಿಗಳನ್ನು ನಾವೇ ಗುರ್ತಿಸಿ ಪರಿಶೀಲಿಸುತ್ತಿದ್ದೇವೆ ಎಂದರು.
ಕ್ರಿಯಾ ಯೋಜನೆ ಹಾಗೂ ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ ಮಾಹಿತಿ ಇಲ್ಲ ಕೇವಲ ಕಾಮಗಾರಿಗಳ ಹೆಸನ್ನು ಮಾತ್ರ ಬರೆಯಲಾಗಿದೆ, ಕಡ್ಡಾಯವಾಗಿ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಹೆಸರುಗಳನ್ನು ನಮೂದಿಸಬೇಕು. ವಾರ್ಡ್ ಸಭೆ ನಡೆಸಿ ನಂತರ ಗ್ರಾಮ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ವರದಿ ಸಲ್ಲಿಕೆ: ಇವುಗಳನ್ನೆಲ್ಲ ಪರಿಶೀಲಿಸಲಾಗುತ್ತಿದ್ದು, ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಭೋಗಸ್ ಕಾಮಗಾರಿ ಮಾಡಲಾಗುತ್ತದೆ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಭಾವಚಿತ್ರಗಳನ್ನು ಜಿ.ಓ ಸ್ಟಾಂಪಿಗ್ ಫೋಟೊಗ್ರಾಫಿ ಬಳಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಗುಣನಿಂತ್ರಣ ಅಧಿಕಾರಿ ಚೌಡಪ್ಪ, ಓಂಬಡ್ಸನ್ ಅಧಿಕಾರಿ ಸಂಭಾಜಿರಾವ್ ಟಿಳೆ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭಯ್ಯ ಸ್ವಾಮಿ, ಎಂಜಿನಿಯರ್ಗಳಾದ ಎಸ್.ಜಿ. ಪಾಟೀಲ, ಮರೆಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನ್ಸರ್ ಪಟೇಲ ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

