ಮೈಲಾರಲಿಂಗೇಶ್ವರ ಜಾತ್ರೆ ವೈಭವ
ಚಿಂಚೋಳಿ: ತಾಲೂಕಿನ ಕಲ್ಲೂರ ರೋಡ ಗ್ರಾಮದಲ್ಲಿ ಪುರಾತನ ಮೈಲಾರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಭಾನುವಾರ ಸಂಜೆ ಸಡಗರ ಸಂಭ್ರಮದಿಂದ ನಡೆಯಿತು.
ಕಲ್ಲೂರ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಿತು. ಮುಂಜಾನೆ ನಡೆದ ಪಲ್ಲಕ್ಕಿ ಮೆರವಣಿಗೆ ಅತ್ಯಂತ ಅದ್ಧೂರಿಯಾಗಿ ನಡೆಯಿತು.ಗ್ರಾಮದ ಅನೇಕ ಭಕ್ತರು ಹೂವು ಮತ್ತು ಬೆಂಡು ಬಸಾತ ನಾಣ್ಯ ಎಸೆದು ತಮ್ಮ ಹರಕೆಯನ್ನು ಅರ್ಪಿಸಿದರು. ಸಂಜೆ ನಡೆದ ಜಾತ್ರೆಯಲ್ಲಿ ಗ್ರಾಮದ ಗೊಂಡ ಕುರುಬ ಜನಾಂಗದ ಮಹಿಳೆಯರು ತಲೆಯ ಮೇಲೆ ಸಿಂಗರಿಸಿದ ಕೊಡದ ಮೇಲೆ ದೀಪವನ್ನಿಟ್ಟು ದೇವಾಲಯ ಸುತ್ತಲೂ ಪ್ರದಕ್ಷಣೆ ಮಾಡಿದರು. ಡೊಳ್ಳು ಕುಣಿತ ಜಾತ್ರೆಯಲ್ಲಿ ಸೇರಿದ ಜನರಿಗೆ ಮನೋರಂಜನೆ ನೀಡಿತು. ಜಾತ್ರೆಯಲ್ಲಿ ತಾಲೂಕಿನ ಸೋಮಲಿಂಗದಳ್ಳಿ, ಮಿರಿಯಾಣ, ಚಿಂಚೋಳಿ, ಪೋಲಕಪಳ್ಳಿ, ಸಂಗಮ (ಕೆ) ಇನ್ನಿತರ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ತಾಲೂಕು ಕುರುಬ ಗೊಂಡ ಸಮಾಜದ ಅಧ್ಯಕ್ಷ ಮಲಕಪ್ಪ ಬಿರಾಪುರ, ಪ್ರಧಾನ ಕಾರ್ಯದರ್ಶಿ ಹಣಮಂತ ಪೂಜಾರಿ, ಕಲ್ಲೂರ ಗ್ರಾಮದ ಕುರುಬ ಸಮಾಜದ ನಾಗಪ್ಪ ಪೂಜಾರಿ, ನರಸಪ್ಪ ಪೂಜಾರಿ, ಶಿವಪ್ಪ ಪೂಜಾರಿ, ಬಿಚ್ಚಣ್ಣ ಪೂಜಾರಿ, ಹಾಶಣ್ಣ ಪೂಜಾರಿ, ತುಳಜಪ್ಪ ಪೂಜಾರಿ, ಜಗನ್ನಾಥ ಪೂಜಾರಿ, ರಮೇಶ, ಮಲ್ಲಪ್ಪ ಜಗನ್ನಾಥ ಎಕಮಾಯಿ, ಆನಂದ ಪೂಜಾರಿ ಮುಂತಾದವರು ಜಾತ್ರೆಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

