ಸಂಘಟನೆಯಿಂದ ಸಮಾಜದ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ ಜೇವರ್ಗಿ ಡಿ.15
ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ. ಈ ನಿಟ್ಟಿನಲ್ಲಿ ವಾಲ್ಮೀಕಿ ಸಮಾಜದ ಬಾಂಧವರು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ನಾಯಕ ಸಂಘ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಪ್ರಥಮ ಸ್ವಾಭಿಮಾನಿ ವಾಲ್ಮೀಕಿ ನಾಯಕ ಜನಾಂಗದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಲ್ಮೀಕಿ ಭವನಕ್ಕೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸಮಾಜ ಕಲ್ಯಾಣ ಸಚಿವರಿಗೆ ಸೂಚಿಸಲಾಗುವುದು ಎಂದರು.
ದೇಶದಲ್ಲಿನ ಮಹಾಪುರುಷರ ಜಯಂತಿಗಳನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಮಹಾ ಪುರುಷರ ತತ್ವ, ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಇಂಥಹ ಆಚರಣೆಗಳು ಅಗತ್ಯ ಎಂದರು.ಯುವಪೀಳಿಗೆಗೆ ತಿಳಿಸಿ: ವಾಲ್ಮೀಕಿ ಅವರು ದೇಶಕ್ಕೆ ರಾಮಾಯಣದಂಥಹ ಮಹಾಕಾವ್ಯ ಅರ್ಪಿಸುವುದರ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ. ವಾಲ್ಮೀಕಿ ಸಮಾಜದಲ್ಲಿ ಅನೇಕ ವಿದ್ಯಾವಂತ ಯುಗಪುರುಷರು ಜನ್ಮ ತಾಳಿ ಪ್ರಪಂಚಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಯುಗ ಪುರುಷರ ಜಯಂತಿ ಆಚರಿಸುವುದರಿಂದ ಅವರ ವಿಚಾರ ಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಖರ್ಗೆ ಹೇಳಿದರು. ಮಾಜಿ ಸಿಎಂ ಹಾಗೂ ಸಂಸದ ಎನ್.ಧರ್ಮಸಿಂಗ್ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂಥಹ ಸಮಾವೇಶಗಳು ಅಗತ್ಯ. ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಇಂಥಹ ಸಮಾವೇಶದಲ್ಲಿ ವಾಲ್ಮೀಕಿ ಸಮಾಜದ ಎಲ್ಲ ಶಾಸಕರು ಭಾಗವಹಿಸಬೇಕು ಎಂದರು.
ಪ್ರಗತಿಪರ ವಿಚಾರ ಮೈಗೂಡಿಸಿಕೊಳ್ಳಿ: ದೇಶ ಮತ್ತು ರಾಜ್ಯದಲ್ಲಿ ಅನೇಕ ರಾಜಕೀಯ ವ್ಯತ್ಯಾಸಗಳು ಬರುತ್ತವೆ. ರಾಜಕೀಯ ವ್ಯತ್ಯಾಸಗಳಿಗೆ ಗಮನ ಕೊಡದೆ ವಾಸ್ತವಿಕತೆಗೆ ಗಮನ ಹರಿಸುವುದು ಅಗತ್ಯ. ವಾಲ್ಮೀಕಿ ಸಮಾಜದ ಬಾಂಧವರು ಪ್ರಗತಿಪರ ವಿಚಾರ ಧಾರೆಗಳು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ತಾವು ಸಮಾಜ ಕಲ್ಯಾಣ ಸಚಿವರಿಗೆ ಮಾತನಾಡಿದ ನಂತರ 50 ಲಕ್ಷ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆಂದು ಎಂದರು.ರಾಜನಳ್ಳಿಯ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸೊನ್ನದ ಶಿವಾನಂದ ಸ್ವಾಮೀಜಿ, ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ವರದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಭಾವಚಿತ್ರ ಮೆರವಣಿಗೆ: ಇದ್ದಕ್ಕೂ ಮುನ್ನ ಡಾ. ಅಜಯಸಿಂಗ್ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಸಮಾವೇಶದ ವೇದಿಕೆವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ರಾಜಾ ವೆಂಕಟಪ್ಪನಾಯಕ ತಾತಾ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್, ಪ್ರತಾಪಗೌಡ ಪಾಟೀಲ್, ಡಾ. ಉಮೇಶ ಜಾದವ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಉಪಾಧ್ಯಕ್ಷೆ ಅನೀತಾ ವಳಕೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗನಗೌಡ ಸಂಕನೂರ, ಡಾ. ಅಶೋಕ ಚವ್ಹಾಣ, ಅಮೃತರಾಯಗೌಡ ಪಾಟೀಲ್ ವಡಗೇರಿ, ನಿಂಗಣ್ಣ ನೇರಡಗಿ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್, ನೀತಿನ್ ಗುತ್ತೇದಾರ, ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ನೇದಲಗಿ, ಪಪಂ ಅಧ್ಯಕ್ಷೆ ಅನೀತಾ ಪಾರ್ಶಿ, ಸಮಾಜದ ಅಧ್ಯಕ್ಷ ಹಣಮಂತರಾಯ ಹವಾಲ್ದಾರ, ಭೀಮರಾವ ಸುಬೇದಾರ, ಗುರುರಾಜ ಸುಬೇದಾರ, ವೀರಗಂಟೇಪ್ಪ ವಡಗೇರಾ, ವೆಂಕಟೇಶ ಕವಾಲ್ದಾರ, ಗುರುರಾಜ ಸುಲಳ್ಳಿ, ಈರಣ್ಣ ಅವರಾದಿ, ಸಾಯಿಬಣ್ಣ ಕವಾಲ್ದಾರ, ಪರಮೇಶ್ವರ ಬಿರಾಳ, ದೇವಿಂದ್ರ ಚನ್ನೂರ, ಬಸವರಾಜ ಸುಬೇದಾರ, ತಿರುಪತಿ ಟಣಕೇದಾರ, ಹಣಮಂತ್ರಾಯ ದೊರೆ, ತಿಪ್ಪಣ್ಣ ದೊರೆ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಜನರು, ವಾಲ್ಮೀಕಿ ಸಮಾಜ ಬಾಂಧವರು ಮಹಿಳೆಯರು ಪಾಲ್ಗೊಂಡಿದ್ದರು.
ಶ್ರೀದೇವಿ ಖಂಡಾಳೆ ಉಪನ್ಯಾಸ ನೀಡಿದರು. ಬಸವರಾಜ ಗವಾಯಿ ಪ್ರಾರ್ಥನೆ ಗೀತೆ ಹಾಡಿದರು. ಹಣಮಂತ್ರಾಯ ಹವಾಲ್ದಾರ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

