ಗುಲ್ಬರ್ಗಾ

ಇಂದಿನಿಂದ ಬಲಭೀಮಸೇನ ಜಾತ್ರೆ

Published On :

ಗುರುಮಠಕಲ್: ಹೈದ್ರಾಬಾದ್ ಕರ್ನಾಟಕ ಭಾಗದ ಭಕ್ತರ ಮನೆಯ ಅರಾಧ್ಯ ದೈವಾ ಮೋತಕ ಗಿಡದಲ್ಲಿ ಬಂದು ಭಕ್ತ ಜನರ ಇಷ್ಟಾರ್ಥಗಳನ್ನು ಪೂರೈಸುವ ಮೋತಕಪಲ್ಲಿಯ ಬಲಭೀಮಸೇನ ಸ್ವಾಮಿ ಜಾತ್ರಾ ಮಹೋತ್ಸವ ಇದೇ ಹೊಸ್ತಿಲ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗಿ ಎರಡು ದಿನ ನಡೆಯಲಿದೆ. ಹುಣ್ಣಿಮೆಯ ದಿನದಂದು ಬೆಳ್ಳಿಗೆ ಸ್ವಾಮಿಯವರಿಗೆ ವ್ಯಾಸ ಪೂಜೆ ನಡೆದು ನಂತರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಮಧ್ಯರಾತ್ರಿ ಮಹಾರಾಥೋತ್ಸವ ಕಾರ್ಯಕ್ರಮ ನಡೆಯುವುದು. ಮಾರನೇ ದಿನ ಸಾಯಂಕಾಲ ಸ್ವಾಮಿಯವರ ಹೂವಿನ ರಥೋತ್ಸವ ಕಾರ್ಯಕ್ರಮ ನಡೆಯುವುದು.
ಮೂರ್ತಿಯ ವಿಶೇಷತೆ: ಇಲ್ಲಿನ ದೇವಸ್ಥಾನದಲ್ಲಿರುವ ವಾಯುಪುತ್ರ ಅಂಜನೇಯ ಸ್ವಾಮಿಯ ಮೂರ್ತಿ ಸ್ವಯಂಭೂ ಮೂರ್ತಿಯಾಗಿದ್ದು, ಹನುಮಂತ ದೇವರ ಮೂರು ಅವತಾರಗಳನ್ನು ಒಂದೇ ಶಿಲೆಯಲ್ಲಿ ಕಾಣಬಹುದು. ಎಡಗೈಯಲ್ಲಿ ಸೌಗಂಧಿಕ ಪುಷ್ಪ ಇರುವುರಿಂದ ಭೀಮಸೇನ ದೇವರೆಂದು ಬಲಗೈ ಮೇಲಕ್ಕೆ ಎತ್ತಿರುವುದು ಮತ್ತು ಜಟೆ ಇಲ್ಲದಿರುವುದರಿಂದ ಮದ್ವಾವತಾರ ರೂಪ ಆಗಿರುವುದು ಕಂಡು ಬರುತ್ತದೆ.
  ಮೂರ್ತಿಯ ಎದೆಯಲ್ಲಿ ನರಸಿಂಹ ಸಾಲಿಗ್ರಾಮವು ಕಾಣುತ್ತದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಅಂಗಾರ ಮತ್ತು ಮಂತ್ರಾಕ್ಷತೆಯಾಗಿದೆ.
ಕ್ಷೇತ್ರ ಮಹಿಮೆ: ಇಲ್ಲಿ ಮತ್ತೊಂದು ವಿಶೇಷವೆಂದರೆ ಸ್ವಾಮಿಯವರ ದೇವಾಲಯದ ಮುಂದಿನ ಭಾಗದಲ್ಲಿ ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿರುವಂತಹ ಪುಷ್ಕರಣಿ ಇದೆ. ಶಾಪಗ್ರಸ್ತನಾದ ನಾರದ ಮಹರ್ಷಿ ಇಲ್ಲಿಗೆ ಬಂದು  ಸ್ನಾನ ಮಾಡಿ, ದೇವರ ದರ್ಶನ ಪಡೆದು ಶಾಪಮುಕ್ತನಾದ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
  ಈ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ,ಅಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದ್ದಂತೆ ವಿವಿಧೆಡೆಯಿಂದ ಭಕ್ತದಿಗಳು ಇಲ್ಲಿಗೆ ಬರುವುದುಂಟು. ಜಾತ್ರೆ ಮಹೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ಸೇಡಂ, ಗುಲ್ಬರ್ಗ, ತಾಂಡೂರ, ಕೊಡಂಗಲ್, ನಾರಾಯಣ ಪೇಟ, ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್ ಸೇರಿದ್ದಂತೆ ವಿವಿಧ ಘಟಕಗಳಿಂದ ಬಸ್ ವ್ಯವಸ್ಥೆ ಇರುತ್ತದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.