'ಶಿಕ್ಷಕರ ಸ್ಥಾನ ಪೂಜ್ಯನೀಯ'
ಸುರಪುರ: ವಿದ್ಯೆ ನೀಡಿದ ಗುರು, ಜನ್ಮ ನೀಡಿದ ತಂದೆ ತಾಯಿಗಳ ಋಣ ಈ ಜನ್ಮದಲ್ಲಿ ತೀರಿಲಾಗದ ಋಣ ಎಂದು ಚಿತ್ರ ನಿರ್ಮಾಪಕ, ನಿರ್ದೇಶಕ ವಿರೇಶ ಟಕ್ಕಳಗಿ ಅಭಿಪ್ರಾಯಪಟ್ಟರು. ಇಲ್ಲಿಯ ಸರ್ವೋದಯ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ನೀಡಿದ ಸನ್ಮಾನ ಸ್ವೀಕರಿಸಿ, ಭವ್ಯ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅವರ ನಡತೆ ಹಾಗೂ ಪ್ರಾಮಾಣಿಕತೆಗೆ ಸಮಾಜದಲ್ಲಿ ಗೌರವ ಅರಿಸಿ ಬರುತ್ತದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೋವರ್ಧನ ಝಂವ್ಹಾರ ಮಾತನಾಡಿ, ಚಿತ್ರ ನಿರ್ದೇಶಕ ವಿರೇಶ ಅವರು ನಮ್ಮ ಶಾಲೆಯ ಮಾಜಿ ವಿದ್ಯಾರ್ಥಿ ಎಂಬುದು ಸಂತೋಷದ ಸಂಗತಿ. ಕಲಿತ ಶಾಲೆ ಮತ್ತು ಕಲಿಸಿದವರನ್ನು ಸ್ಮರಿಸುತ್ತಾ ಮುನ್ನಡೆದರೆ ನಿಮ್ಮ ಗುರಿಯಲ್ಲಿ ಯಶಸ್ವಿಯಾಗುತ್ತೀರಿ ಎಂದರು. ಸಹ ಕಲಾವಿದರಾದ ಮಂಜು ಮತ್ತು ಪ್ರಿಯಾ ರಾಠೋಡರನ್ನು ಸತ್ಕರಿಸಲಾಯಿತು. ಪ್ರಮುಖರಾದ ಬಸವರಾಜ ನಿಷ್ಠಿ ದೇಶಮುಖ, ಶಾಲೆಯ ಮುಖ್ಯ ಗುರು ಶಿವಕುಮಾರ ಮಸ್ಕಿ, ಸಿದ್ದಣ್ಣ ವಾಲಿ, ಮಲ್ಲಣ್ಣ, ಶೇಖರ ಇದ್ದರು.
ಬಡವರಿಂದ 30 ವಸೂಲಿ
ಗುರುಮಠಕಲ್: ಇಲ್ಲಿನ ವಿಶೇಷ ತಹಸೀಲ್ದಾರ್ ಕಾರ್ಯಲಯದಲ್ಲಿ ವಿಧವೆ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ ಲಾಭಕ್ಕಾಗಿ ಬರುವ ಬಡವರಿಂದ ಪ್ರತಿಯೊಂದು ಫಾರ್ಮನಿಂದ 30ರಂತೆ ಅಕ್ರಮವಾಗಿ ಹಣ ವಸೂಲಿ ಮಾಡುತಲಿದ್ದಾರೆ. ಇದನ್ನು ತಡೆಯಲು ಪಪಂ ಸದಸ್ಯ ಲಿಂಗಪ್ಪ ಆಗ್ರಹಿಸಿ ವಿಶೇಷ ತಹಸೀಲ್ದಾರ್ಗೆ ಮನವಿ ಮಾಡಿದ್ದಾರೆ.
ಬೀದಿ ನಾಟಕ ಕಾರ್ಯಕ್ರಮ
ಯಾದಗಿರಿ: ವಾರ್ತಾಇಲಾಖೆಯಿಂದ ಗ್ರಾಮ ಸಂಪರ್ಕ ಯೋಜನೆಯಡಿ ಡಿ.20ರಿಂದ 25 ರವರೆಗೆ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿ.21ರಂದು ಮೀನಾಸಪುರ, ನಜರಾಪೂರ, 22ರಂದು ಗುಂಜನೂರ್, ಕೊಂಕಲ್,23 ರಂದು ಧರ್ಮಪುರ, ಚಿನ್ನಕಾರ, 24ರಂದು ಚಿಂತನಹಳ್ಳಿ, ಕಂದಕೂರ, 25ರಂದು ಗೋಪಲಪುರ, ಅರಕೇರಾ(ಕೆ)ದಲ್ಲಿ ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

