ಗುಲ್ಬರ್ಗಾ

ರಫ್ತು ಆಧಾರಿತ ವ್ಯವಹಾರ ಅವಶ್ಯ

Published On :

ಯಾದಗಿರಿ: ನಗರದಲ್ಲಿಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ರಫ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ವಿಟಿಪಿಸಿ ಉಪನಿರ್ದೇಶಕ ಎಂ.ಎ. ಶರೀಫ್ ಅಂತರಾಷ್ಟ್ರೀಯ ವ್ಯಾಪಾರದ ಕುರಿತು ಉಪನ್ಯಾಸ ನೀಡಿದರು. ಅದರಂತೆ ಧಾರವಾಡ ವಿಟಿಪಿಸಿ ಜಂಟಿ ನಿರ್ದೇಶಕ ಡಾ. ವೀರಣ್ಣ ಎಸ್.ಎಚ್. ಅವರು ರಫ್ತು ವ್ಯವಹಾರಕ್ಕೆ ಸಂಘ ಸಂಸ್ಥೆಗಳ ಬೆಂಬಲ ಮತ್ತು ರಫ್ತು ವ್ಯವಹಾರಕ್ಕೆ ಲಭ್ಯವಿರುವ ಪ್ರೋತ್ಸಾಹ ಹಾಗೂ ರಫ್ತು ಸಾಧ್ಯತೆ ಉತ್ಪನ್ನಗಳ ಕುರಿತು ಅವಶ್ಯಕ ಮಾಹಿತಿ ನೀಡಿದರು. ಸಮಾರಂಭವನ್ನು ಅಧ್ಯಕ್ಷ ಭವರಲಾಲ್ ಧೋಕಾ ಉದ್ಫಾಟಿಸಿ ಮಾತನಾಡಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಿದ್ರಾಮ ರೆಡ್ಡಿ, ಬಲಕಲ್ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಇರ್ಫನ್, ಮಾಣಿಕ, ಲಾಯಕ್ ಬದಲ್ ಉಪಸ್ಥತರಿದ್ದರು.

ಹತ್ತಿಗುಡೂರ ಅಂಗನವಾಡಿ ಕೇಂದ್ರಕ್ಕೆ ಬೀಗ
ಶಹಾಪುರ: ತಾಲೂಕಿನ ಹತ್ತಿಗುಡೂರ ಅಂಗನವಾಡಿ ಕೇಂದ್ರಕ್ಕೆ ಈ ಮೊದಲು ಒಬ್ಬರು ಸೇವಾ ಕಾರ್ಯಕರ್ತೆಯಾಗಿ ಕೆಲಸಮಾಡುತ್ತಿದ್ದರು ಮತ್ತೆ ಬೇರೊಬ್ಬರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದ ನಾಗರಿಕರು ಅಂಗನವಾಡಿಗೆ ಬೀಗ ಹಾಕಿ ಪ್ರತಿಭಟಿಸಿ ತಾಲೂಕ ಸಿಡಿಪಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದಲಿಂಗರಡ್ಡಿ ಸಾಹು ಮಾತನಾಡಿ, ನಮ್ಮ ಗ್ರಾಮದ ಅಂಗನವಾಡಿಗೆ ಈ ಮೊದಲೇ ಕಾರ್ಯಕರ್ತೆಯಾಗಿ ನೇಮಕಗೊಂಡ ರಿಜವಾನಾಬೇಗಂ ಅಂಗಡಿ ಎನ್ನುವವರು ಇದ್ದಾರೆ. ಆದರೆ ಖಾಲಿ ಇಲ್ಲದ ಇದೇ ಗ್ರಾಮಕ್ಕೆ ಶೇ.75ರಷ್ಟು ವಿಕಲಚೇತನ ಎಂದು ಪ್ರಮಾಣ ಪತ್ರ ದಾಖಲಿಸಿರುವ ಹುಸೇನಬಿ ಅರ್ಜಿ ಹಾಕುವಾಗಿನ ಭಾವಚಿತ್ರ ಬೇರೆ ಇದ್ದು, ನಂತರ ಎಸ್ಎಸ್ಎಲ್ಸಿ ಪ್ರಮಾಣ ಪತ್ರದಲ್ಲಿ ಬೇರೆಯೇ ಭಾವಚಿತ್ರ ವಿರುವುದು ಬಹಿರಂಗವಾಗಿದೆ. ದಾಖಲೆಗಳು ಮತ್ತು ಇಗಿರುವ ದಾಖಲೆಗಳು ಯದ್ವಾ ತದ್ವಾ ಇರುವುದರಿಂದ ಇವರನ್ನು ಕಾನೂನು ರೀತಿ ತನಿಖೆಗೆ ಒಳಪಡಿಸಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ತಾಲೂಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪಿ.ಪಿ. ದೊಡ್ಮನಿ ಭೇಟಿ ನೀಡಿ ಪರಿಶೀಲಿಸಿ ಮನವಿ ಸ್ವೀಕರಿಸಿದರು. ತಾಪಂ ಸದಸ್ಯ ಅಯ್ಯಣ್ಣ ಮಹಾಮನಿ, ತಿಪ್ಪಣ್ಣ ಕೆ. ಘಂಟಿ, ಭೀಮರಾಯ ಆರ್.ಹೊಸ್ಮನಿ, ದೇವಿಂದ್ರಪ್ಪ ಎಂ. ಟಣಕೇದಾರ, ಗುರಪ್ಪ ಬಿ. ಸುರಪುರ, ಬಸವರಾಜ ಮಹಾಮನಿ, ಶರಣಪ್ಪರಡ್ಡಿ ದೋರನಹಳ್ಳಿ, ಚಂದ್ರಶೇಖರ ನಾಟೇಕಾರ, ಈರಣ್ಣ ಅಂಗಡಿ, ಭೀಮನಗೌಡ ಮಾಲಿ ಪಾಟೀಲ, ಶಿವರಾಜಪ್ಪ ಸಾಹು, ಮಲ್ಲಿಕಾರ್ಜುನ ಹೊಸ್ಮನಿ, ಹುಸೇಸಾಬ ಜಮಾದಾರ, ಹುಸ್ಮಾನಸಾಬ ಸರಖಾವಾಸ, ಮಲ್ಲಯ್ಯ ಹೊಸ್ಮನಿ, ಶರಣಪ್ಪ ಟಣಕೇದಾರ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.