ಗುಲ್ಬರ್ಗಾ

ಮಾನವರ ಪಾಪ ತೊಳೆಯಲು ಯೇಸು ಅವತಾರ

Published On :

ಯಾದಗಿರಿ: ಯೇಸು ಕ್ರಿಸ್ತನು ಈ ಲೋಕಕ್ಕೆ ಮಾನವನಾಗಿ ಪಾಪವನ್ನು ಕ್ಷಮಿಸಲು ಮಾನವ ರೂಪ ತಾಳಿ ಬಂದಿದ್ದನು ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕರು ಹಾಗೂ ಚಿರಂಜಿವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು (ಡಿಎಸ್) ಪೌಲ್ ಮಧುಕರ್ ಅಭಿಪ್ರಾಯಪಟ್ಟರು. ಅವರು ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಚಿರಂಜೀವಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇರಿ ಕ್ರಿಸ್ಮ್‌ಸ್ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಭ್ರಮದ ದಿನ: ಅವರು ಮಾತನಾಡಿ, ಯೇಸು ಜನಿಸಿದ ದಿನವನ್ನು ಪವಿತ್ರ ಕ್ರಿಸ್ಮ್‌ಸ್ ಎಂದು ಆಚರಿಸಲಾಗುತ್ತಿದ್ದು, ಆತನ ಜನ್ಮದಿನದಂದು ಹಬ್ಬದ ವಾತಾವರಣ ಇರಲಿದೆ. ಎಲ್ಲರೂ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಬೇಕು ಎಂದು ತಿಳಿಸಿದರು. ಕಾಲೇಜು ಪ್ರಾಂಶುಪಾಲೆ ಕು. ಮೇರಿ ಮಾರ್ಗರೇಟ್ ಮಾತನಾಡಿ, ಕ್ರಿಸ್ಮ್‌ಸ್ ಸಂತಸದ ಹಬ್ದವಾಗಿದ್ದು, ಯೇಸು ಸ್ವಾಮಿಗೆ ಆರಾಧಿಸುವ ಪವಿತ್ರ ದಿನವಾಗಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಕ್ಕಳಿಗೆ ಮನರಂಜನೆ ದೊರೆಯುತ್ತದೆ ಎಂದರು.
ರೆ. ಸತ್ಯಮಿತ್ರ, ಶೀಲಾ ಜಾನ್ ವೆಸ್ಲಿ, ಗಿರಿಧರ, ಸಾವಂತರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.