ಗುಲ್ಬರ್ಗಾ

ಅನುವುಗಾರರ ಪಾತ್ರ ಮಹತ್ವದ್ದು

Published On :

ಕನ್ನಡಪ್ರಭ ವಾರ್ತೆ ,  ಚಿಂಚೋಳಿ ,  ಡಿ.24
ರೈತರು ಬೆಳೆಯುವ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದುಕೊಳ್ಳವಲ್ಲಿ ಅನುವುಗಾರರ ಪಾತ್ರ ಅತಿ ಮಹತ್ವದ್ದು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಹೇಳಿದರು.
ಚಂದಾಪುರ ನಗರದ ರೈತಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಭೂ ಚೇತನ ಯೋಜನೆ 2ಅಡಿಯಲ್ಲಿ ಹಿಂಗಾರು ಹಂಗಾಮಿನ ತಾಲೂಕು ಮಟ್ಟದ ಅನುವುಗಾರರ ಸಮಾವೇಶ, ರೈತರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಮಾಹಿತಿ ನೀಡಿ: ಅನುವುಗಾರರಿಗೆ ಕೃಷಿ ಇಲಾಖೆಯಿಂದ ರಾಜ್ಯ, ಜಿಲ್ಲಾಮಟ್ಟದ ಕಾರ್ಯಾಗಾರ ಮತ್ತು ತರಬೇತಿಯಲ್ಲಿ ಭಾಗವಹಿಸುತ್ತಿರುವುದರಿಂದ ತಮ್ಮಲ್ಲಿ ಕೃಷಿ ಇಲಾಖೆಯಿಂದ ನೀಡುತ್ತಿರುವ ಕೃಷಿ ತಂತ್ರಜ್ಞಾನ ಮತ್ತು ಬೀಜ ಗೊಬ್ಬರ ಬಳಕೆ ಇನ್ನಿತರ ಯಂತ್ರೋಪಕರಣಗಳ ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರೆ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.
ತೊಗರಿ ಬೆಳೆ ಹಾನಿ: ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ಮಾತನಾಡಿ, ಸ್ಪರ್ಧಾತ್ಮಕವಾಗಿ ಬೆಳೆ ಬೆಳೆದು ಹೆಚ್ಚಿನ ಆಹಾರ ಉತ್ಪಾದನೆ ರೈತರು ಮಾಡಬೇಕಾಗಿದೆ. ತಾಲೂಕಿನ ಚಿಮ್ಮನಚೋಡ ಮತ್ತು ಚಿಂಚೋಳಿ ವಲಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ತೊಗರಿ ಬೆಳೆ ಸ್ವಲ್ಪಮಟ್ಟಿಗೆ ಹಾನಿಯಾಗಿದೆ ಎಂದರು.
ಕೃಷಿ ಪ್ರಶಸ್ತಿ: ತೊಗರಿ ಉತ್ಪಾದನೆಯಲ್ಲಿ ಬಹುಮಾನ ಪಡೆದ ನಾರಾಯಣರೆಡ್ಡಿ ಗುಂಡಾರೆಡ್ಡಿ ಚೆಟನಳ್ಳಿ (ಪ್ರಥಮ), ಅಶೋಕಕುಮಾರ್ ರೇವಣಸಿದ್ದಪ್ಪ ಸಾಲೇಬೀರನಳ್ಳಿ (ದ್ವೀತಿಯ) ನಿಂಗಾರೆಡ್ಡಿ ಬಕ್ಕಾರೆಡ್ಡಿ ಪಟಪಳ್ಳಿ (ತೃತಿಯ) ಮುಂತಾದ ರೈತರಿಗೆ 2012-13ನೇ ಸಾಲಿನ ಮುಂಗಾರು ಹಂಗಾಮಿನ ಚಿಂಚೋಳಿ ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ಮತ್ತು ನಗದು ಚೆಕ್ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿಗೆ ಕಲಾವತಿ ಭೀಮಸೇನರಾವ ಮೋಘಾ ಇವರು ದ್ವೀತಿಯ ಸ್ಥಾನ ಪಡೆದು ನಗದು ಚೆಕ್ 10 ಸಾವಿರ ಪಡೆದುಕೊಂಡರು. ಸಮಾರಂಭವನ್ನು ತಾಪಂ ಅಧ್ಯಕ್ಷೆ ತಾರಾಮತಿ ಕುಂಬಾರ ಉದ್ಘಾಟಿಸಿದರು. ಡಾ. ಜಹೀರ್ ಅಹ್ಮದ್, ಮೊಗಲಪ್ಪಾ ಕರಕಟ್ಟಿ, ಶಿವನಾಗಯ್ಯ ಸ್ವಾಮಿ ಇತರರು ಉಪಸ್ಥಿತರಿದ್ದರು. ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ಸ್ವಾಗತಿಸಿದರು. ಉದಯಚಂದ್ರ ನಿರೂಪಿಸಿದರು. ಬಸವರಾಜ ಮಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.