'ಮಠದ ಅಭಿವೃದ್ಧಿಗೆ 2 ಕೋಟಿ'
ಜೇವರ್ಗಿ: ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಕಡಕೋಳ ಮಡಿವಾಳೇಶ್ವರ ಮಠದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ 2.20 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ತಾಲೂಕಿನ ಕಡಕೋಳದಲ್ಲಿ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಕಡಕೋಳದಲ್ಲಿ ಯಾತ್ರಿಕ ನಿವಾಸಕ್ಕೆ 50 ಲಕ್ಷ, ಸುಂಬಡ ಯಾತ್ರಿಕ ನಿವಾಸಕ್ಕೆ 60 ಲಕ್ಷ, ಮಠದ ಹತ್ತಿರ ನಿರ್ಮಿಸಿರುವ ರಂಗಮಂದಿರ 13 ಲಕ್ಷ, ಸಿಂದಗಿ ತಾಲೂಕಿನ ಹಂದಿಗನೂರ ಯಾತ್ರಿಕ ನಿವಾಸ ಸೇರಿದಂತೆ ಶೌಚಾಲಯ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲು ಒಟ್ಟು 2.20 ಕೋಟಿ ಅನುದಾನ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಧರ್ಮಸಭೆಯನ್ನು ಹೊನ್ನಕಿರಣಗಿಯ ಚಂದ್ರಗುಂಡ ಶ್ರೀ ಉದ್ಘಾಟಿಸಿದರು. ಕಡಕೋಳದ ರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.
ಶಖಾಪುರದ ಸಿದ್ದರಾಮ ಶ್ರೀ, ಸರಡಗಿಯ ಶ್ರೀ, ಪಾಳಾದ ಗುರುಮೂರ್ತಿ ಶ್ರೀ, ಕುಕನೂರಿನ ಚನ್ನಮಲ್ಲ ಶ್ರೀ, ಮಳಖೇಡದ ಸೈಯದ್ ಶಹಾ ಮುಸ್ತಫಾ ಖಾದ್ರಿ ದರ್ಗಾ ಸೇರಿದಂತೆ ನಾಡಿನ ಮಠಾಧೀಶರು ಸಮ್ಮುಖ ವಹಿಸಿದ್ದರು.
ಗೊಲ್ಲಾಳಪ್ಪಗೌಡ ಮಾಗಣಗೇರಿ, ಚಂದ್ರಶೇಖರ ಪುರಾಣಿಕ, ರಾಜುಗೌಡ ಪಾಟೀಲ್, ಪ್ರವೀಣಕುಮಾರ್ ಕುಂಟೋಜಿಮಠ, ಬಸವರಾಜ ಮಾಲಿಪಾಟೀಲ್, ದಯಾನಂದ ಹಿರೇಮಠ, ವಿಠ್ಠಲ್ ಕವಾಲ್ದಾರ್, ನಾಗಲಿಂಗಯ್ಯ ಮಠಪತಿ, ಬಸಲಿಂಗಪ್ಪ ಕವಾಲ್ದಾರ್, ಬಸಯ್ಯ ಹಿರೇಮಠ, ಹಳ್ಳೆಪ್ಪಗೌಡ ಪೊಲೀಸ್ ಪಾಟೀಲ್, ಶರಣಪ್ಪಗೌಡ ಪಾಟೀಲ್, ಈರಣ್ಣಗೌಡ ಮಾಲಿಪಾಟೀಲ್, ಗೌಡಪ್ಪಗೌಡ ಮಾಲಿಪಾಟೀಲ್, ವೆಂಕಟೇಶ ದೊರೆ, ಮಡಿವಾಳಪ್ಪ ಸಜ್ಜನ್, ಶ್ರೀಮಂತ ಜಮಾದಾರ, ಬಸವಲಿಂಗಪ್ಪ ಕವಾಲ್ದಾರ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಧರ್ಮಸಭೆಯಲ್ಲಿ 12 ಜನ ಶ್ರೀಮಠದ ಭಕ್ತಾದಿಗಳಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು. ಉಪನ್ಯಾಸಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

