ಗುಲ್ಬರ್ಗಾ

8ರಂದು ಸುರಪುರ ವಿಜಯೋತ್ಸವ

Published On :

ಯಾದಗಿರಿ: 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಅರಸರು ಆಂಗ್ಲರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಸವಿ ನೆನಪಿಗಾಗಿ ಫೆ.8ರಂದು ಬೆ. 10ಕ್ಕೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸುರಪುರ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ್ ಮೂಡಬೂಳ ತಿಳಿಸಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ನಡೆದಿದೆ. ಸುರಪುರ ದೊರೆಗಳು ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ್ದಾರೆ. ಆದರೆ ಸುರಪುರ ದೊರೆಗಳ ಬಗ್ಗೆ ಇತಿಹಾಸದಿಂದ ಅಪಚಾರವಾಗಿದೆ ಎಂದರು.
ಯುವ ಜನಾಂಗಕ್ಕೆ ತಿಳಿಸಲು..: ಸುರಪುರ ಇತಿಹಾಸವನ್ನು ಮುಚ್ಚಿಡಲಾಗಿದೆ. ಸ್ವಾತಂತ್ರ್ಯ ನಂತರವೂ ಇದು ಮುಂದುವರಿದಿದೆ. ಆದರೆ ಸುರಪುರ ದೊರೆಗಳು ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ಬಗ್ಗೆ ಅನೇಕ ಪುರಾವೆಗಳಿವೆ. ಈ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ 6 ವರ್ಷಗಳಿಂದ ಸುರಪುರ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿ ಸಿದರು.
155 ವರ್ಷಗಳ ಹಿಂದೆ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸುರಪುರ ಸಂಸ್ಥಾನದ ಸೈನಿಕರು ಆಂಗ್ಲರನ್ನು ಸದೆಬಡಿದರು. ಫೆ.5, 1858ರಂದು ಬ್ರಿಟಿಷ್ ಸೇನಾನಿ ನ್ಯೂಬೆರಿಯನ್ನು ಕೊಂದು ವಿಜಯದ ಕೇಕೆ ಹಾಕಿದ ಸ್ಥಳ ಸುರಪುರ ತಾಲೂಕಿನ ರುಕ್ಮಾಪುರ ಎಂಬ ಗ್ರಾಮ. ಅಲ್ಲಿಯೇ ನ್ಯೂಬೆರಿ ಸಮಾಧಿ ಇದೆ. ಸ್ವಾತಂತ್ರ್ಯದ ಕ್ರಾಂತಿಯನ್ನು ಕರ್ನಾಟಕದಲ್ಲಿ ಸಾಕಾರಗೊಳಿಸಿದ ಎಲ್ಲ ಸೇನಾನಿಗಳ ಬಲಿದಾನವನ್ನು ಗೌರವಿಸುವ ಸಲುವಾಗಿ ಮತ್ತು ಪ್ರಥಮ ಸ್ವಾತಂತ್ರ್ಯ ಯುದ್ಧದ ವಿಜಯದ ನೆನಪಿಗಾಗಿ 6ನೇ ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸನ್ಮಾನ: ಮಹಾನ್ ಬಲಿದಾನಿ ಭೀಮರಾವ ಮುಂಡರಗಿ ಅವರ ವಂಶಸ್ಥರಾದ ವೆಂಕರಾವ ಲಕ್ಷ್ಮಣರಾವ ನಾಡಗೌಡ, ಹುತಾತ್ಮ ಯೋಧರಾದ ಕವಡಿಮಟ್ಟಿಯ ಶರಣಬಸವ ಕೆಂಗೂರಿ ಅವರ ತಾಯಿ ಮಲ್ಲಮ್ಮ, ಸಗರ ಗ್ರಾಮದ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳರ ಪತ್ನಿ ಗಂಗಾದೇವಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಮೆರವಣಿಗೆ: ಮೆರವಣಿಗೆಗೆ  ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಚಾಲನೆ ನೀಡಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಉದ್ಘಾಟಿಸುವರು. ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ ತಾತಾ ಅಧ್ಯಕ್ಷತೆ ವಹಿಸಲಿದ್ದಾರೆ. ಈಶಾನ್ಯ ವಲಯ ಐಜಿಪಿ ಮಹ್ಮದ್ ವಜೀರ ಅಹ್ಮದ್, ಇತಿಹಾಸ ಸಂಶೋಧಕ ಕೃಷ್ಣ ಕೋಲಾರ, ಬಳ್ಳಾರಿ ಕೃಷ್ಣದೇವರಾಯ ವಿವಿ ಕುಲಸಚಿವ ಡಾ. ರಂಗರಾಜ ವನದುರ್ಗ, ಗಂಗಾಧರ ಆವಂತಿ  ಪಾಲ್ಗೊಳ್ಳಲಿದ್ದಾರೆ.   ಕೇಂದ್ರದ ಕಾರ್ಯದರ್ಶಿ ಕೃಷ್ಣಾ ಸುಬೇದಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.