ಗುಲ್ಬರ್ಗಾ

ಮತ್ತೆ ಸಾವಯವ ಕೃಷಿಯತ್ತ ಮರಳಿ..

Published On :

ಯಾದಗಿರಿ: ರೈತರ ಶೋಷಣೆ ಹೆಚ್ಚುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳುತ್ತಿದೆ. ಇದಕ್ಕೆ ಪರಿಹಾರ ಕಾಣಬೇಕಾದರೆ ರೈತರು ಸಾವಯವ ಕೃಷಿಯಡೆ ಮರಳಬೇಕೆಂದು ಜಿಪಂ ಸಿಇಒ ಜಿಲಾನಿ ಹೇಳಿದರು.
ನಗರದ ಆಫೀಸರ್ಸ್ ಕ್ಲಬ್‌ನಲ್ಲಿ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು, ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಸಾವಯವ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ರಾಸಾಯನಿಕ ಗೊಬ್ಬರ ಉಪಯೋಗಿಸುವುದರಿಂದ ವ್ಯವಸಾಯ ಖರ್ಚು ಹೆಚ್ಚಾಗುತ್ತಿದೆ. ಇದರಿಂದ ಕಾಲ ಕ್ರಮೇಣ ಭೂಮಿಯ ಫಲವತ್ತತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ತಮ್ಮ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದರ ಜತೆಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಬೆಂಬಲ ಬೆಲೆ ಅವೈಜ್ಞಾನಿಕ ನಿಗದಿ: ಪ್ರಗತಿಪರ ರೈತ ಸಿದ್ದಣಗೌಡ ಕಡೇಚೂರ ಮಾತನಾಡಿ, ಇಂದು ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರ ನಿಗದಿ ಪಡಿಸುವ ಬೆಂಬಲ ಬೆಲೆ ಕಾಲಕ್ಕೆ ತಕ್ಕಂತೆ ಸರಿಯಾಗಿ ನೀಡದಿರುವುದು ಒಂದೆಡೆಯಾದರೆ, ಅವೈಜ್ಞಾನಿಕ ಬೆಂಬಲ ಬೆಲೆ ನಿಗದಿಯೂ ಇದಕ್ಕೆ ಕಾರಣ ಎಂದರು.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಬೇಸಾಯ ತಜ್ಞ ಡಾ. ಮಲ್ಲಿಕಾರ್ಜುನ ಅಗನಾಳ ಮಾತನಾಡಿ, ರೈತರು ಸಾವಯವ ಕೃಷಿ ಕಡೆ ಗಮನಹರಿಸುವುದರಿಂದ ತಾವು ಬೆಳೆಯುವ ಉತ್ಪನ್ನಗಳ ಮೇಲಿನ ಖರ್ಚು ಕಡಿಮೆಯಾಗುತ್ತದೆ. ಕೃಷಿಗಾಗಿ ಸಾಲ ಮಾಡುವುದು ಕೂಡ ತಪ್ಪುತ್ತದೆ ಎಂದು ಹೇಳಿದರು. ಬಸಣ್ಣಗೌಡ ಗುಂಜಾನೂರ ಮಾತನಾಡಿದರು.
ಪ್ರಗತಿಪರ ರೈತ ಬಸಣ್ಣಗೌಡ ಮಾಲಿಪಾಟೀಲ್, ಇಒ ಶಿವರಾಮ ಚವ್ಹಾಣ, ಸುರೇಶ, ಶಂಕರಗೌಡ, ಜಲಾನಯನ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಜಿಯಾಉಲ್‌ಹಕ್, ಡಾ. ಷಣ್ಮುಖಸ್ವಾಮಿ, ಕೃಷಿ ಅಧಿಕಾರಿ ಯಲ್ಲಪ್ಪ, ರಾಜಕುಮಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.