ಗುಲ್ಬರ್ಗಾ

ವಕೀಲಿ ವ್ಯಾಸಂಗ; ಅರ್ಜಿ ಆಹ್ವಾನ

Published On :

ಗುಲ್ಬರ್ಗ: ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 60 ಬಿಎಎಲ್‌ಎಲ್‌ಬಿ ಅಧ್ಯಯನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಬಿಎಎಲ್‌ಎಲ್‌ಬಿ ಅಧ್ಯಯನವು ಹತ್ತು ಸೆಮಿಸ್ಟರ್ ಪದ್ಧತಿ ವ್ಯಾಸಂಗ ಕ್ರಮವಾಗಿದೆ. 6ನೇ ಸೆಮಿಸ್ಟರ್ ಪಾಸಾದ ನಂತರ ವಿದ್ಯಾರ್ಥಿಗಳು ಯಾವುದೇ ಕಾನೂನಿನ ರೀತ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬಹುದು. ನಂತರ ಇನ್ನುಳಿದ 4 ಸೆಮಿಸ್ಟರ್ ಪಾಸಾದ ನಂತರ ವಿದ್ಯಾರ್ಥಿಗಳು ಕಾನೂನು ಪದವಿಯನ್ನು ಪಡೆಯಲಿಕ್ಕೆ ಅರ್ಹರಾಗಿರುತ್ತಾರೆ. ಪಿಯುಸಿ ಹಾಗೂ ಜೆಓಸಿ ಪಾಸಾದ ವಿದ್ಯಾರ್ಥಿಗಳು ಮಾತ್ರ 5ವರ್ಷದ ಬಿಎ, ಎಲ್‌ಎಲ್‌ಬಿ ಪ್ರಥಮ ವರ್ಷದ ಕಾನೂನು ಪ್ರವೇಶ ಪಡೆಯಲಿಕ್ಕೆ ಅರ್ಹರಾಗಿರುತ್ತಾರೆ. ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಈ ಕಾಲೇಜಿನಲ್ಲಿ ಪ್ರವೇಶ ಇರುವುದಿಲ್ಲ. ಬಿಎಎಲ್‌ಎಲ್‌ಬಿ ಪ್ರವೇಶ ವಿಧಾನವು ಸಂಪೂರ್ಣ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಮರತೂರು ಗ್ರಾಮದಲ್ಲಿ ಕಾನೂನು ಕಾಲೇಜಿನ ಮೂಲ ಸೌಕರ್ಯ ಆಗುವವರೆಗೆ ತಾತ್ಕಾಲಿಕವಾಗಿ ಗುಲ್ಬರ್ಗ ನಗರಕ್ಕೆ ಸ್ಥಳಾಂತರಿಸಲಾಗಿದೆ. ಈ ಹೆಚ್ಚಿನ ಮಾಹಿತಿಗೆ ಡಾ. ಶಿವಾನಂದ ಎಚ್. ಲೇಂಗಟಿ, ಪ್ರಾಚಾರ್ಯರು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು, ವಿಶ್ವವಿದ್ಯಾಲಯ ಆವರಣ ಗುಲ್ಬರ್ಗ- 585106ನ್ನು ಅಥವಾ ದೂರವಾಣಿ ಸಂಖ್ಯೆ 9449122506ನ್ನು ಸಂಪರ್ಕಿಸಿ ಪಡೆಯಬಹದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.