ಸಂಕ್ಷಿಪ್ತ ಸುದ್ದಿ
ಸಾವಳೇಶ್ವರ: ನಾಳೆ ಶರಣ ಸಂಗಮ
ಆಳಂದ: ತಾಲೂಕಿನ ಸಾವಳೇಶ್ವರ ಗ್ರಾಮದ ವಿವಿಧ ಯುವಕ ಸಂಘಟನೆಗಳ ಆಶ್ರಯದಲ್ಲಿ ಸಿದ್ದೇಶ್ವರಿ ದೇವಾಲಯದ ಆವರಣದಲ್ಲಿ ಜು.8ರಂದು ಸಂಜೆ 6ಕ್ಕೆ ಶರಣ ಸಂಗಮ ಕಾರ್ಯಕ್ರಮ ನಡೆಯಲಿದೆ. ಉಸ್ತುರಿ- ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ ಅವರು ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷೆ ಸುನಿತಾ ಚಂದ್ರಶೇಖರ ಪೂಜಾರಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಸಂಜಯ ಮಾಕಲ್, ಅತಿಥಿಗಳಾಗಿ ಪತ್ರಕರ್ತ ಮಹಾದೇವ ವಡಗಾಂವ, ಭಾರತ ಮುಕ್ತಿ ಮೋರ್ಚಾ ಗೌರವಾಧ್ಯಕ್ಷ ಎಸ್.ಡಿ. ಸಾಗರಶೆಟ್ಟಿ, ಮುಖ್ಯಗುರು ಆನಂದ ಗೌಡೆ, ಪ್ರಾಚಾರ್ಯ ಜ್ಯೋತಿ ಕರಕಳ್ಳಿ, ವಸಂತ ಫುಲಾರೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಶಿವಾನುಭವ ಚಿಂತನ ಗೋಷ್ಠಿ
ಗುಲ್ಬರ್ಗ: ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದ ಸಂಸ್ಥಾನ ಮಠದ ವತಿಯಿಂದ ವಿವಿಧ ಶಿವಾನುಭವ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜು.8ರಂದು ಅಮವಾಸ್ಯೆ ನಿಮಿತ್ತ ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ 335ನೇ ಗೋಷ್ಠಿ, ಜೇವರ್ಗಿ ತಾಲೂಕಿನ ಸುಕ್ಷೇತ್ರ ಶಾಖಾಪುರದ ವಿಶ್ವರಾಧ್ಯ ತಪೋವನ ಮಠದಲ್ಲಿ 225ನೇ ಗೋಷ್ಠಿ, ಗುಲ್ಬರ್ಗ ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿಯಲ್ಲಿ 172ನೇ ಗೋಷ್ಠಿ, ಜು. 13 ರಂದು ಶಹಾಪುರ ತಾಲೂಕಿನ ಸುಕ್ಷೇತ್ರ ಅಪ್ಪನ ಶಾಖಾಪುರ ಮಠದಲ್ಲಿ 153ನೇ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಗೋಷ್ಠಿಗಳ ನಂತರ ರಾತ್ರಿಯಿಡೀ ವಚನ ಗಾಯನ, ಭಜನೆ ನಡೆಯಲಿದೆ.
ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನ
ಗುಲ್ಬರ್ಗ: 80 ಸಾವಿರ ಮೌಲ್ಯದ ಎರಡು ತೊಲೆ ಬಂಗಾರ ಕೇಳಲು ಹೋದ ಮಹಿಳೆ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಶಹಾಬಾದ್ನ ಮಿಲ್ಲತ್ ನಗರದಲ್ಲಿ ಶುಕ್ರವಾರ ನಡೆದಿದೆ. ಮರೆಮ್ಮ ಗಂಡ ದೇವಪುತ್ರ ಸೋಮನ ಎಂಬ ಮಹಿಳೆ ತುರ್ತು ಸಂದರ್ಭದಲ್ಲಿ ನೀಡಿದ 2 ತೊಲೆ ಬಂಗಾರವನ್ನು ಭೀಮಾಶಂಕರ ಬಳಿ ಕೇಳಲು ಹೋದಾಗ ಆತ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಶಹಾಬಾದ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಬಸ್ ಡಿಕ್ಕಿ: ವ್ಯಕ್ತಿ ಸಾವು
ಗುಲ್ಬರ್ಗ: ಸಾರಿಗೆ ಸಂಸ್ಥೆಯ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಧಳದಲ್ಲೇ ಮೃತಪಟ್ಟ ಘಟನೆ ಸುಂಟನೂರ್ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಆಳಂದ ತಾಲೂಕಿನ ಸುಂಟನೂರ್ ಗ್ರಾಮದ ನಿವಾಸಿ ಲಾಲಾ ಸಾಹೇಬ್ ತಂದೆ ಬಾಬುಸಾಬ್ ಎಂಬಾತ ಮೃತಪಟ್ಟ ದುರ್ದೈವಿ. ಇತ ಗುಲ್ಬರ್ಗಕ್ಕೆ ಹೋಗಲು ಸುಂಟನೂರ್ ಕ್ರಾಸ್ ಹತ್ತಿರ ನಿಂತಾಗ ಕೆಎಸ್ಆರ್ಟಿಸಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

