ಗುಲ್ಬರ್ಗಾ

ಇಂದಿನಿಂದ ಕಾರ್ಯಕ್ರಮ

Published On :

ಆಳಂದ: ಪಟ್ಟಣದ ಬಾಹೇರ್ ಪೇಟದ ಏಕನಾಥ ಮಂದಿರದಲ್ಲಿ ಜು. 15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂದಿರದ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. 15 ರಂದು ಸಂಜೆ 6 ಗಂಟೆಯಿಂದ ರಾತ್ರಿ 8ರವರೆಗೆ ಹೌಸಾದ ವೀರನಾಥ ಮಲ್ಲಿನಾಥ ಮಹಾರಾಜ್ ನಾಥ್ ಸಂಸ್ಥಾನ ಪೀಠದ ಗುರುಬಾಬಾ ಮಹಾರಾಜ್ ಔಸೇಕರ್ ಅವರಿಂದ ಚಕ್ರಿ ಭಜನೆ ಹಾಗೂ ಪ್ರವಚನ ನಡೆಯಲಿದೆ. ಸಾನ್ನಿಧ್ಯವನ್ನು ಗಹೀನಿನಾಥ ಮಹಾರಾಜ ಔಸೇಕರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಉಸ್ಮನಾಬಾದ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಾಪುರಾವ ಮಾಧವರಾವ ಪಾಟೀಲ್ ಆಗಮಿಸುವರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು.  ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನಬಸವ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಜು.22 ಗೋಪಾಳ ಕಾವಲಿ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಂತರ ದಯಂಡಿ ಕಾರ್ಯಕ್ರಮ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಹೆಚ್ಚಿನ ರೇಲ್ವೆ ಸೌಲಭ್ಯಕ್ಕೆ ಮನವಿ
ಗುಲ್ಬರ್ಗ: ಜಿಲ್ಲೆಯ ಔದ್ಯೋಗಿಕ ಹಾಗೂ ವ್ಯಾಪಾರಾಭಿವೃದ್ಧಿಯನ್ನು ಹೊಂದುತ್ತಿರುವ ನಗರಗಳಲ್ಲೊಂದಾದ ಮತ್ತು ಉಪವಿಭಾಗ ಕೇಂದ್ರವಾದ ಸೇಡಂ ನಗರಕ್ಕೆ ಈಗಿರುವ ರೈಲು ಸೌಲಭ್ಯಗಳ ಜೊತೆಗೆ ಇನ್ನು ಹೆಚ್ಚಿನ ರೇಲ್ವೆ ಸೌಲಭ್ಯಗಳನ್ನು ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ವರರಾವ್ ಮಾಲಿ ಪಾಟೀಲ್ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಸೇಡಂ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಸಿಕಿಂದ್ರಾಬಾದ್- ರಾಜಕೋಟ, ಕೋನಾರ್ಕ್ ಎಕ್ಸ್‌ಪ್ರೆಸ್, ಸಿಕಿಂದ್ರಾಬಾದ್-ಪುನಾ ಶತಾಬ್ದಿ ಎಕ್ಸ್‌ಪ್ರೆಸ್, ಗೋರಕಪುರ- ಬೆಂಗಳೂರು, ಸಿಕಿಂದ್ರಾಬಾದ್- ಪೋರಬಂದರ್, ಗರೀಬ್ ರಥ ರೈಲುಗಳನ್ನು ಸೇಡಂ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ವಿಶ್ರಾಂತಿ ಕೋಣೆ, ಜನರೇಟರ್ ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆ, ಅಂಗವಿಕಲರಿಗೆ, ವೃದ್ಧರಿಗೆ 2ನೇ ಪ್ಲಾಟ್‌ಫಾರಂ ಹೋಗಲು ಹಾಗೂ ವಿಚಾರಣೆ ಕಚೇರಿ ಪ್ರಾರಂಭಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ತಳವಾರ ನೇಮಕಕ್ಕೆ ಆಗ್ರಹ
ಗುಲ್ಬರ್ಗ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ ತಳವಾರ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಮುಖಂಡರು ಒತ್ತಾಯಿಸಿದ್ದಾರೆ. ಸ್ವಾರ್ಥ ಬಯಸದೇ ಪಕ್ಷಕ್ಕಾಗಿ ದುಡಿದ ಹಿಂದುಳಿದ ವರ್ಗಗಳ ಮುಖಂಡ ತಳವಾರ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಇದೀಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕೆಂದು ಸೂರ್ಯಕಾಂತ ಅವರಾದ, ಸಾಯಿಬಣ್ಣ ಹರಸೂರ ಜಮಾದಾರ, ಶರಣು ಜಂಬಗಾ, ವೈಜನಾಥ ಪೂಜಾರಿ, ಶ್ರೀಶೈಲ್ ಬೋಧನ್, ಶರಣಪ್ಪ ಶ್ರೀಚಂದ ಅವರು ರಾಜ್ಯ ಮುಖಂಡರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.