ಗುಲ್ಬರ್ಗಾ

26 ಅಭ್ಯರ್ಥಿಗಳ ಅವಿರೋಧ ಆಯ್ಕೆ

Published On :

ಕನ್ನಡಪ್ರಭ ವಾರ್ತೆ  ಚಿತ್ತಾಪುರ ಜು.18
ತಾಲೂಕ ಸರ್ಕಾರಿ ನೌಕರರ ಸಂಘದ ಚುನಾವಣೆಯ 32 ಸ್ಥಾನಗಳಲ್ಲಿ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಸುಭಾಷ ಸುರೆ ಹಾಗೂ ಸಹಾಯಕ ಚುನಾವಣಾಧಿಕಾರಿ ಮಮ್ಮಹ ಇಸ್ಮಾಯಿಲ್ ಪಟೇಲ್ ತಿಳಿಸಿದ್ದಾರೆ.
ಮಂಗಳವಾರ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿತ್ತು. 26 ಸ್ಥಾನಗಳಲ್ಲಿ ಪ್ರತಿ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚಂದ್ರಕಾಂತ (ಲೋಕೋಪಯೋಗಿ), ಬಸವಕುಮಾರ (ಪಂ.ರಾಜ್ಯ ಎಂಜಿನಿಯಿಂಗ್), ನವಲೆ ಭಾಗಪ್ಪ (ಸಹಕಾರ), ಜಗದೀಶ (ತೋಟಗಾರಿಕೆ), ಗಂಗಾಧರ (ಉಪಖಜಾನೆ), ಶಿವಕುಮಾರ್ (ನ್ಯಾಯಾಂಗ),ಪಿ. ಎಸ್. ಚಾಂಧೋಡಿ (ಜಲಾಯನ), ಲಕ್ಷ್ಮಣ ಶೃಂಗೇರಿ, ವಿಜಯಕುಮಾರ್ ಲೋಡ್ಡೆನೊರ್ (ತಾಪಂ), ಶರಣಬಸಪ್ಪ (ಕೃಷಿ), ಸಾಯಿರೆಡ್ಡಿ (ಸಮಾಜ ಕಲ್ಯಾಣ), ನಿಜಗುಣಿ. ಬಿ (ಬಿಸಿಎಂ), ಮಲ್ಲೇಶಿ ಕೋಬುಳ್ಕರ್ (ಸಬ್ ರಜಿಸ್ಟರ್), ಶರಣು (ಎಪಿಎಂಸಿ), ಮೀನಾಕ್ಷಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ), ಮಹ್ಮದ್ ಸಯಿದೋದ್ದಿನ (ಅಬಕಾರಿ), ಹಣಮಂತರಾಯ ಹಾಗೂ ಮಧುಸೂಧನ (ಕಂದಾಯ), ಸೂರ್ಯಕಾಂತ ಫೂಲಾರಿ (ಆಹಾರ ಸರಬರಾಜು ಹಾಗೂ ನಾಗರಿಕ), ಶ್ರೀಮಂತ ಹೊಸ್ಮನಿ, ನಾಗೇಂದ್ರಪ್ಪ (ಪ್ರೌಢ ಶಾಲೆ ಶಿಕ್ಷಣ), ಜಗದೇವ ಮಳಗೆ, ಬಸವರಾಜ ಬಳುಂಡಗಿ, ಆದಪ್ಪ ಬಗಲಿ, ರೇವಣಸಿದ್ದಪ್ಪ (ಪ್ರಾಥಮಿಕ ಶಿಕ್ಷಣ).
32 ಸ್ಥಾನಗಳಿಗೆ 44 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಅದರಲ್ಲಿ ಒಂದು ನಾಮ ಪತ್ರ ತಿರಸ್ಕೃತಗೊಂಡಿದೆ. 43 ನಾಮಪತ್ರಗಳಲ್ಲಿ 7 ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಉಳಿದ 36 ನಾಮಪತ್ರಗಳಲ್ಲಿ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 6 ಸ್ಥಾನಗಳಿಗೆ ಜುಲೈ 22 ರಂದು ಚುನಾವಣೆ ನಡೆಯಲಿದೆ. 6 ಸ್ಥಾನಗಳಿಗೆ 10ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕಣದಲ್ಲಿ ಉಳಿದವರು: ಅರುಣಕುಮಾರ್, ಮಹ್ಮದ್ ಎಕಬಾಲ್, ಗಂಗಮ್ಮ, ಪರುಷುರಾಮ, ಮಹೇಶ್ವರ, ರತ್ಮಮ್ಮ, ನಾಗಪ್ಪ (ಆರೋಗ್ಯ ಇಲಾಖೆಯ 4 ಸ್ಥಾನಗಳಿಗೆ), ಮೋನೇಶ್ವರ ದೊಡ್ಮನಿ, ಚಂದ್ರಕಾಂತ ಅಂಬಲಗಿ, ಸದಾಶಿವ (ಪಶು ಸಂಗೋಪನೆ ಇಲಾಖೆಯ 2 ಸ್ಥಾನಗಳಿಗೆ) ಸ್ಪರ್ಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.