ಗುಲ್ಬರ್ಗಾ

ಕಾನೂನು ನೆರವಿಗಾಗಿ ಸಲಹೆ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಜು.18
ವಿಚಾರಣಾಧೀನ ಕೈದಿಗಳು ನ್ಯಾಯ ಪಡೆಯಲು ತೊಂದರೆಯಾದರೆ ಕಾನೂನಿನ ನೆರವು ಪಡೆಯಬಹುದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ಶ್ರೇಣಿಯ ನ್ಯಾಯಾಧೀಶ ಎಂ.ಶಶೀಧರಗೌಡ ಹೇಳಿದರು.
  ಇಲ್ಲಿಯ ಉಪ ಕಾರಾಗೃಹದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವು ಅಪರಾಧಿಗಳಿದ್ದೇವೆ ನಮಗೆ ಮುಕ್ತಿಯೇ ಇಲ್ಲಾ ಎಂಬ ಭಾವನೆ ಬೇಡ. ವಿಚಾರಣೆ ಮುಗಿದು ಆರೋಪ ಸಾಬೀತಾದಾಗ ಮಾತ್ರ ನೀವು ಅಪರಾಧಿಗಳು. ಅಪರಾಧ ಉದ್ದೇಶ ಪೂರ್ವಕವಾಗಿ ಘಟಿಸುವುದಿಲ್ಲ. ಇದು ಆಕಸ್ಮಿಕವಾಗಿ ನಡೆದುಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಪರಾಧ ಘಟಿಸುವ ವಾತಾವರಣ ಸೃಷ್ಟಿಯಾಗುತ್ತಿದೆ. ಆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದರೆ ನಿಮ್ಮಿಂದ ನಡೆಯುವ ಅಪರಾಧ ತಪ್ಪಿಹೋಗುತ್ತದೆ. ಕಾರಣ ಅಪರಾಧ ಘಟಿಸುವ ಮುನ್ನ ಮತ್ತು ಪುನಾರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
 ಉಪ ಕಾರಾಗೃಹದ ಅಧೀಕ್ಷಕ ಎಸ್.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಪಾಟೀಲ, ಮಹಿಳಾ ಘಟಕದ ಉಪಾಧ್ಯಕ್ಷೆ ಛಾಯಾ ಕುಂಟೋಜಿ, ಸರ್ಕಾರಿ ಸಹಾಯಕ ಅಭಿಯೋಜಕ ಅಶೋಕಕುಮಾರ, ವಕೀಲ ಜಿ.ಎಸ್. ಪಾಟೀಲ ಉಚಿತ ಕಾನೂನು ಸಲಹೆಗಾರ ಜಿ. ತಮ್ಮಣ್ಣ, ಪಿಎಸ್‌ಐ ಹನುಂತಪ್ಪ ಪಟೇದ, ಎಎಸ್‌ಐ ಶ್ರೀಕಾಂತ ವೇದಿಕೆಯಲ್ಲಿದ್ದರು.
 ಸಿವಿಲ್ ಮತ್ತು ಕ್ರಿಮಿನಲ್ ಅಪರಾಧಿಗಳು ಎಂಬ ವಿಷಯದ ಮೇಲೆ ವಕೀಲ ಬಿ.ಕೆ. ದೇಸಾಯಿ, ಫ್ಲೀ ಬಾರ್ಗೇನಿಂಗ್ ಎಂಬ ವಿಷಯದ ಮೇಲೆ ಶ್ರೀದೇವಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಬನ್ನಾಳೆ ಸ್ವಾಗತಿಸಿದರು. ನಂದನಗೌಡ ನಿರೂಪಿಸಿದರು. ಮಲ್ಲು ಮಂಗ್ಯಾಳ ವಂದಿಸಿದರು. ವಕೀಲರಾದ ನಿಂಗಣ್ಣ ಚಿಂಚೋಡಿ, ಸಿದ್ರಾಮಪ್ಪ, ಯಲ್ಲಪ್ಪ ಹುಲಕಲ್ ಶಾಂತಗೌಡ, ಅಪ್ಪಣ್ಣ, ಮನೋಹರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.