ಹುಟ್ಟುಹಬ್ಬ; ರಕ್ತದಾನ ಶಿಬಿರ
ಗುಲ್ಬರ್ಗ: ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ್ ಪಾಟೀಲರ 44ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ವೇದಿಕೆ ಪದಾಧಿಕಾರಿಗಳು ನಗರದ ನಂದಗೋಕುಲ ಅನಾಥಾಶ್ರಮದ ಮಕ್ಕಳಿಗೆ ಚಾದರ ಮತ್ತು ಜಮಖಾನೆಗಳನ್ನು ವಿತರಿಸಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿ ಅವರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದರು.
ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗ ತಹಸೀಲ್ದಾರ್ ವಿನೋದರೆಡ್ಡಿ, ರಕ್ತದಾನ ಮಾಡುವುದರಿಂದ ಬೇರೆ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಪಾಟೀಲರ ಜನ್ಮದಿನದಂದು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ರಕ್ತ ನಿಧಿಯ ಮುಖ್ಯಸ್ಥ ಡಾ. ಎಸ್.ಎಸ್. ದೇವರಮನಿ ಮಾತನಾಡಿ, ಪಾಟೀಲರ ಜನ್ಮದಿನದಂದು ಇದೇ ರೀತಿ ರಕ್ತದಾನ ಶಿಬಿರ ಹಮ್ಮಿಕೊಂಡು ನೂರಾರು ಜೀವಗಳಿಗೆ ಸಹಾಯ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.
ಸಮಾರಂಭದಲ್ಲಿ ಅರುಣಕುಮಾರ್ ಪಾಟೀಲ್, ಡಾ. ಉಮೇಶ್ಚಂದ್ರ, ಶರಣು ಪಪ್ಪಾ ಇತರರು ಉಪಸ್ಥಿತರಿದ್ದರು. ಮಂಜುನಾಥ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಸಚೀನ್ ಫರಹತಾಬಾದ್, ಚಂದ್ರು ಪಾಟೀಲ್, ಚನ್ನು ಮರಬ್, ಬಿ. ಜಯಸಿಂಗ್, ಶ್ರೀಕಾಂತ ಆಲೂರ, ಬಾಲರಾಜ, ಕಾಶಿನಾಥ ಮಾಳಗೆ, ಬಾಬುರಾವ ಚಿಂಚನಸೂರ್, ಪ್ರಭು ಸೇರಿದಂತೆ ನೂರಾರು ಕಾರ್ಯಕರ್ತರು ರಕ್ತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

