ಗುಲ್ಬರ್ಗಾ

ಹಾರದ ಧ್ವಜ: ಕ್ರಮಕ್ಕೆ ಆಗ್ರಹ

Published On :

ಜೇವರ್ಗಿ: ರಾಜ್ಯದ ಮಾಜಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸರ್ಕಾರಿ ಕಚೇರಿಗಳಲ್ಲಿ ಅರ್ಧ ಧ್ವಜ ಹಾರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಸ್ಥಳೀಯ ಅಧಿಕಾರಿಗಳು ಅರ್ಧ ಧ್ವಜ ಹಾರಿಸದೆ ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ಅವಮಾನಿಸಿದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಮಲಶೆಟ್ಟೆಪ್ಪಗೌಡ ಹಿರೇಗೌಡ ಆರೋಪಿಸಿದ್ದಾರೆ. ಸ್ಥಳೀಯ ತಾಲೂಕು ಆಡಳಿತ ಕೇಂದ್ರ ಸ್ಥಾನ ತಹಸೀಲ್ದಾರ್ ಕಾರ್ಯಾಲಯ, ತೋಟಗಾರಿಕೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯಿತಿ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಅರ್ಧ ಧ್ವಜ ಹಾರಿಸಿಲ್ಲ. ನಿಷ್ಕ್ರಿಯ  ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿರೇಗೌಡ ಒತ್ತಾಯಿಸಿದ್ದಾರೆ.
ನೆಲೋಗಿ; 26ರಿಂದ ಆಷಾಢ ಉತ್ಸವ
ಜೇವರ್ಗಿ: ತಾಲೂಕಿನ ನೆಲೋಗಿಯಲ್ಲಿ ಜು.26 ಹಾಗೂ 27ರಂದು ಎರಡು ದಿನ ಆಷಾಢ ಉತ್ಸವ ಕಾರ್ಯಕ್ರಮ ಜರುಗಲಿದೆ. ಉತ್ಸವದ ನಿಮಿತ್ತ ನೆಲೋಗಿಯ ಬಲಭೀಮಸೇನ ದೇವರಿಗೆ ಹಾಗೂ ವೇದಾನಂದ ಸ್ವಾಮೀಜಿಗಳಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಕ್ಷೇಕ ನೆರವೇರಲಿದೆ. 26ರಂದು ಮಧ್ಯಾಹ್ನ 2 ಗಂಟೆಗೆ ವೇದಾನಂದ ಸ್ವಾಮೀಜಿಗಳ ಗೃಹದಿಂದ ಪ್ರಾಣದೇವರ ಸನ್ನಿಧಿಗೆ ತೆರಳಿ ಪ್ರಾಣದೇವರ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ. ಭಕ್ತಾದಿಗಳಿಗೆ 26 ಮತ್ತು 27ರಂದು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಮೂರು ದಿನ ನೀರಿಲ್ಲ
ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಭೀಮಾ ತೀರದಲ್ಲಿ ಅಳವಡಿಸಲಾದ ಜಾಕ್‌ವೆಲ್ ಕೆಟ್ಟಿದ್ದು, ದುರಸ್ತಿ ಕಾರ್ಯ ಜು.22ರಿಂದ ನಡೆಯಲಿದೆ. ಹೀಗಾಗಿ ಜು.22ರಿಂದ 24ರವರೆಗೆ  ನೀರು ಸರಬರಾಜು ಸ್ಥಗಿತಗೊಳ್ಳುತ್ತಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಹಿರೇಮಠ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.