'ಸುರಪುರ ಇತಿಹಾಸ ಅವಿಸ್ಮರಣೀಯ'
ಕನ್ನಡಪ್ರಭ ವಾರ್ತೆ ಸುರಪುರ ಜು.23
ದೇಶದ ಇತಿಹಾಸದಲ್ಲಿ ಸುರಪುರ ತನ್ನದೇ ಆದ ಹಿರಿಮೆ ಹೊಂದಿದ್ದು, ಸಗರನಾಡಿನ ರಾಜಧಾನಿಯಂತ್ತಿತ್ತು. ಇಲ್ಲಿಯ ಪುರಾತತ್ವ ನೆಲೆಗಳಿಂದಾಗಿ ಜಗತ್ತಿನಲ್ಲಿ ಇದಕ್ಕೆ ವಿಶಿಷ್ಟ ಸ್ಥಾನ ದೊರಕಲು ಕಾರಣವಾಯಿತು ಎಂದು ಇತಿಹಾಸ ಅನುಸಂಧಾನ ಪರಿಷತ್ನ ಉಪನಿರ್ದೇಶಕ ಎಸ್.ಕೆ.ಅರುಣಿ ಹೇಳಿದರು.
ಇಲ್ಲಿಯ ಜನನಿ ಮಹಿಳಾ ಕಾಲೇಜಿನಲ್ಲಿ ನೃಪತುಂಗ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರ ಹಾಗೂ ಜ್ಞಾನೋದಯ ಶಿಕ್ಷಣ ಸಂಸ್ಥೆಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ತಲುಪಿಸಿ: ಇಲ್ಲಿಯ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯ ಹಾಗೂ ಶಾಸನಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹಸನ್ಗಂಗು ಸಗರನಾಡಿನಲ್ಲಿ ಬಹುಮನಿ ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದನು. ಅಂಥ ಸಂಪದ್ಭರಿತ ನಾಡು ಸಗರ ಎಂದರು. ಇಲ್ಲಿಯ ಸ್ಮಾರಕಗಳು ನಮ್ಮ ಇತಿಹಾಸದ ಮೂಕಸಾಕ್ಷಿಗಳಾಗಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು. ಇದನ್ನು ಮುಂದುವರಿಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು. ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ, ಲಂಕೆಪ್ಪ ಕವಲಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಆದಿಶೇಷ ನೀಲಗಾರ ವೇದಿಕೆಯಲ್ಲಿದ್ದರು. ಬಸವರಾಜ ಜಿಕೆ, ತಿಪ್ಪಣ್ಣ ಕ್ಯಾತನಾಳ, ನಾಗರಾಜ ಡಿ.ಎಸ್, ಪರಶುರಾಮ, ಶೇಖರ, ರಾಘು ಆದೋನಿ, ಶ್ರೀಧರ ಕಟ್ಟಿಮನಿ, ಮಾದೇಶ ಸತ್ಯಂಪೇಟೆ ಇತರರಿದ್ದರು.
ರಾಜಗೋಪಾಲ ವಿಭೂತೆ ಪ್ರಾಸ್ತವಿಕವಾಗಿ ಮಾತನಾಡಿದರು. ಶರಣಬಸವ ಯಳವಾರ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ಮಲ್ಲು ಕಮತಗಿ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

