ಇಂದು ನೇತ್ರ ತಪಾಸಣೆ ಶಿಬಿರ
ಗುಲ್ಬರ್ಗ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು(ಅಂಧತ್ವ ವಿಭಾಗ) ಮತ್ತು ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ನೇತ್ರ ಶಸ್ತ್ರ ಚಿಕಿತ್ಸಾ ಘಟಕ, ಅರ್ಜೂ ಎಜ್ಯುಕೇಷನ್ ಹಾಗೂ ಚಾರಿಟಬಲ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಜು.26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಜ್‌ನಗರ ಮತ್ತು ಶಿವಾಜಿನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಡಾ. ಉದಯ ಪಾಟೀಲ್ ರೋಗಿಗಳ ತಪಾಸಣೆ ಕೈಗೊಳ್ಳುವರು. ಹೀರಾಪುರ ನಗರ ಮತ್ತು ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಡಾ. ಎಂ.ಎಸ್. ವರ್ಮಾ ಅವರು ಕೋರಿದ್ದಾರೆ. ವಿವರಕ್ಕೆ ದೂ. 08472- 278649, ಮೊ. 98456 32609 ಸಂಪರ್ಕಿಸಬಹುದು.
ಇಂದು ವಿಭಾಗ ಮಟ್ಟದ ಕಾರ್ಯಕ್ರಮ
ಗುಲ್ಬರ್ಗ: ಮೀಸಲಾತಿ ಜನಕ ಛತ್ರಪತಿ ಸಾಹು ಮಹಾರಾಜ್ ಅವರ 139ನೇ ಮತ್ತು ದಲಿತ ಚೇತನ ಪ್ರೊ. ಕೃಷ್ಣಪ್ಪನವರ 75ನೇ ಜನ್ಮದಿನದ ಅಂಗವಾಗಿ ಜು.26ರಂದು ರಾಯಚೂರಿನ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಸಾಮಾಜಿಕ ನ್ಯಾಯದ ದಿನವನ್ನಾಗಿ ವಿಭಾಗ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದಿರಾ ಕೃಷ್ಣಪ್ಪ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವರು. ಮಾವಳ್ಳಿ ಶಂಕರ ಅಧ್ಯಕ್ಷತೆ ವಹಿಸುವರು. ಡಾ. ಅಪ್ಪಗೆರೆ ಸೋಮಶೇಖರ ವಿಷಯ ಮಂಡನೆ ಮಾಡಲಿದ್ದಾರೆ.
ಎಐಡಿವೈಒನಿಂದ ಯುವಜನ ಶಿಬಿರ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಆಲ್ ಇಂಡಿಯಾ ಡೆಮೊಕ್ರೇಟಿಕ್ ಯೂಥ್ ಆರ್ಗನೈಜೇಷನ್ (ಎಐಡಿವೈಒ) ಸ್ಥಳೀಯ ಸಮಿತಿ ವತಿಯಿಂದ ವಲಯ ಮಟ್ಟದ ಯುವಜನ ಶಿಬಿರವನ್ನು ಜು.26 ರಂದು ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ಸಿದ್ದು ಚೌಧರಿ ತಿಳಿಸಿದ್ದಾರೆ. ಸದರಿ ಸಭೆಯಲ್ಲಿ ವಿದ್ಯಾರ್ಥಿ, ಯುವಜನರ ಮುಂದಿರುವ ಸವಾಲುಗಳು ಪ್ರಸಕ್ತ ರಾಜಕೀಯ ವಿಷಯ ಕುರಿತು ಚರ್ಚಾಗೋಷ್ಠಿ ನಡೆಯಲಿದ್ದು, ಎಸ್‌ಯುಸಿಐ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ಡಾ. ಮಂಜುನಾಥ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ನಿಂಗಣ್ಣ ಜಂಬರಿ ಅಧ್ಯಕ್ಷತೆ ವಹಿಸುವರು.
ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ನಗರದ 110 ಕೆ.ವಿ. ಕಪನೂರ ಉಪವಿತರಣಾ ಕೇಂದ್ರದ ಸುಧಾರಣೆ ಕೆಲಸ ಕೈಗೊಳ್ಳಲಾಗಿದೆ. ಈ ಪ್ರಯುಕ್ತ ಜು.26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ 110 ಕೆ.ವಿ. ಕಪನೂರ ಉಪವಿತರಣಾ ಕೇಂದ್ರ ಮೇಲೆ ಬರುವ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವ್ಯತ್ಯಯವಾಗಲಿರುವ ಬಡಾವಣೆಗಳು- ಕೆ.ಐ.ಡಿ.ಬಿ.-1 ಹಾಗೂ 2ನೇ ಹಂತ, ಹರಸೂರ, ಅವರಾದ, ಬೇಲೂರ ಕೈಗಾರಿಕಾ ಪ್ರದೇಶ ಮತ್ತು ಅಶೋಕ ಪಾಲಿಮರ ಫೀಡರಿನ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

