ನಾಳೆ ಬೆಂಗಳೂರಲ್ಲಿ ಪ್ರತಿಭಟನೆ
ಗುಲ್ಬರ್ಗ: ಬುದ್ಧಗಯಾದ ಬಾಂಬ್ ದಾಳಿ ಬಗ್ಗೆ ಶೀಘ್ರ ತನಿಖೆ ನಡೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜು.31 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ದರಿಸಿದೆ.ಅಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಟೌನ್ಹಾಲ್ನಿಂದ ಸ್ವತಂತ್ರ ಉದ್ಯಾನವನದ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು.ಸಮಿತಿಯ ಹಿರಿಯ ಮುಖಂಡರಾದ ಮಲ್ಲೇಶಿ ಸಜ್ಜನ್ ಮತ್ತು ಅರ್ಜುನ ಭದ್ರೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆಂದು ಜಿಲ್ಲಾ ಸಂಚಾಲಕ ರವಿ ಮದನಕರ್ ತಿಳಿಸಿದ್ದಾರೆ.
ಕೌಟುಂಬಿಕ ಕಲಹ;
ದಂಪತಿ ಆತ್ಮಹತ್ಯೆ
ಗುಲ್ಬರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ ಗಂಡ ಶಿವಕುಮಾರ್(20) ಮತ್ತು ಶಿವಕುಮಾರ್ ತಂದೆ ಮಲಕಪ್ಪ(25) ಆತ್ಮಹತ್ಯೆಗೆ ಶರಣಾದ ದಂಪತಿ. ಮದುವೆಯಾಗಿ ಕೇವಲ 2 ತಿಂಗಳಾಗಿತ್ತು. ಶಿವಕುಮಾರನೇ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದ. ಮನೆಯವರು ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಶಿವಕುಮಾರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ಕಾಳಗಿ ಸಿಪಿಐ ರಮೇಶ ಕರಡೆಗುಡ್ಡಾ, ಎಎಸ್ಐಗಳಾದ ಬಸವರಾಜ, ಸಿದ್ರಾಮ ಮತ್ತು ಸಿಬ್ಬಂದಿ ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಬಾಲಕಿ ದುರ್ಮರಣ
ಅಫಜಲ್ಪುರ: ತಾಲೂಕಿನ ಮಣ್ಣೂರ- ಇಂಡಿ ರಸ್ತೆಯ ಮಧ್ಯದಲ್ಲಿರುವ ಶೇಷಗಿರಿ ಕ್ರಾಸ್ ಹತ್ತಿರ ಸೋಮವಾರ ಮಧ್ಯಾಹ್ನ ಜೀಪ ಮತ್ತು ಬೈಕ್ ಮಧ್ಯ ಅಪಘಾತ ಸಂಭವಿಸಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.ಅಫಜಲ್ಪುರ ತಾಲೂಕಿನ ಉಡಚಣ ಗ್ರಾಮದ 11 ವರ್ಷದ ಬಾಲಕಿ ರತ್ನಾಬಾಯಿ ತಂದೆ ರಮೇಶ ಕಾಮನಳ್ಳಿ ಮೃತಳು. ಬೈಕ್ನಲ್ಲಿ ಬಾಲಕಿ ತನ್ನ ಸಹೋದರ ಮಾವ ಹಾಗೂ ತಾಯಿಯೊಂದಿಗೆ ಇಂಡಿಯಿಂದ ಮಣ್ಣೂರ ಮಾರ್ಗವಾಗಿ ಅಫಜಲ್ಪುರ ತಾಲೂಕಿನ ಉಡಚಣ ಗ್ರಾಮಕ್ಕೆ ಹೋಗುತ್ತಿದ್ದಾಗ ಜೀಪ ಡಿಕ್ಕಿ ಹೊಡೆದಿದೆ.ಮೃತ ರತ್ನಾಬಾಯಿಯ ಸೋದರಮಾವ ಹಾಗೂ ತಾಯಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಅಫಜಲ್ಪುರ ಠಾಣೆಯ ಸಿಪಿಐ ಕೆ.ರಾಜೇಂದ್ರ ಮತ್ತು ಪಿಎಸ್ಐ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

