ಗುಲ್ಬರ್ಗಾ

ಹಾವು ಕಚ್ಚಿ ಯುವಕ ಸಾವು

Published On :

ಗುಲ್ಬರ್ಗ: ಹಾವು ಕಚ್ಚಿ ಬಿಹಾರ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಹೊರ ವಲಯದ ಬೇಲೂರ ಕ್ರಾಸ್ ಬಳಿ ನಡೆದಿದೆ. ಬಿಹಾರ ಮೂಲದ ಅಜಯ ತಂದೆ ರಾಮ ಪ್ರಸಾದ(18) ಮೃತನು. ಈತ ಬೇಲೂರ ಕ್ರಾಸ್ ಬಳಿಯ ಸುಗೂರೇಶ್ವರ ದಾಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ದಾಲ್‌ಮಿಲ್‌ನಲ್ಲಿ ಮಲಗಿಕೊಂಡಿದ್ದ ಸಂದರ್ಭದಲ್ಲಿ ಯುವಕನಿಗೆ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜ್ ಸುಲ್ತಾನಪುರ; ಬಾಲಕ ನಾಪತ್ತೆ
ಗುಲ್ಬರ್ಗ: ತಾಜ್ ಸುಲ್ತಾನಪುರದ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ನಲ್ಲಿರುವ 12 ವರ್ಷದ ಬಾಲಕನೊಬ್ಬ ನಾಪತ್ತೆಯಾಗಿದ್ದಾನೆ. ದೇವೇಗೌಡ ತಂದೆ ಬಸಣಗೌಡ ಬೋರಡ್ಡಿ ಎಂಬ ಬಾಲಕ ಮೇ 28ರಂದು ಬೆ. 11.30ರ ಸುಮಾರಿಗೆ ಹೊರಗಡೆ ಹೋಗಿ ಆಟವಾಡಿ ಬರುತ್ತೇನೆಂದು ಹೋದವನು ಮರಳಿ ಬಂದಿಲ್ಲ ಎಂದು ಆತನ ತಂದೆ ಬಸಣಗೌಡ ಬೋರಡ್ಡಿ ಅವರು ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಬಾಲಕ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. 4- 5 ಎತ್ತರ, ತಳ್ಳನೆಯ ಮೈಕಟ್ಟು, ಸಾದಗಪ್ಪು ಮೈಬಣ್ಣ, ಉದ್ದನೆಯ ಮೂಗು, ಅಗಲವಾದ ಹಣೆ, ಮುಂದಿನ ಮೇಲಿನ ಹಲ್ಲು ಸ್ವಲ್ಪ ಮುಂದೆ ಉದ್ದವಾಗಿರುತ್ತವೆ, ಬಿಸ್ಕಿಟ್ ಕಲರ್ ಚಕ್ಸ್ ಶರ್ಟ್, ಆಕಾಶ ಕಲರ್ ನೀಲಿ ಪ್ಯಾಂಟ್ ಧರಿಸಿದ್ದಾನೆ. ಇತನ ಬಗ್ಗೆ ಸುಳಿವು ಸಿಕ್ಕರೆ ದೂ. 08472- 263631/ಕಂಟ್ರೋಲ್ ರೂಂ 263604 ಸಂಪರ್ಕಿಸಬಹುದು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.