ಗುಲ್ಬರ್ಗಾ

ಕರಡಕಲ್ ಮಠದಲ್ಲಿ 19ರಂದು ಬಸವ ಜಯಂತಿ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಜೂ.9
ತಾಲೂಕಿನ ಕರಡಕಲ್ ಗ್ರಾಮದ ಕೋರಿ ಸಿದ್ದೇಶ್ವರ ಶಾಖಾ ಮಠದಲ್ಲಿ ಜೂ.19ರಂದು ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಬಸವ ಜಯಂತಿ ಶತಮಾನೋತ್ಸವದ ಸಂಭ್ರಮಾಚರಣೆ, ಪ್ರಶಸ್ತಿ ಪ್ರದಾನ, ಧ್ವನಿ ಸುರುಳಿ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ತಿಳಿಸಿದ್ದಾರೆ.
  ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಬಸವ ಜಯಂತಿಯನ್ನು ಮಠದ ಶಾಂತರುದ್ರಮುನಿ ಸ್ವಾಮೀಜಿ ಉದ್ಘಾಟಿಸುವರು. ನಾಲವಾರ ಕೋರಿಸಿದ್ದೇಶ್ವರ ಮಠದ ತೋಟೇಂದ್ರ ಸ್ವಾಮೀಜಿ ನೇತೃತ್ವ ವಹಿಸುವರು. ಗುರುಮಠಕಲ್ ಖಾಸಾಮಠದ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಧ್ವನಿ ಸುರುಳಿ: ಮಧ್ಯಾಹ್ನ 2ನೇ ಹಂತದ ಕಾರ್ಯಕ್ರಮದಲ್ಲಿ ತಿಮ್ಮಾಪುರದ ದಿ. ಬಸವೇಶ್ವರನಾಥ ಸೂಗೂರಮಠ ರಚಿಸಿದ ಬಸವೇಶ್ವರ ಸುಪ್ರಭಾತ ಧ್ವನಿಸುರುಳಿಯನ್ನು ನಾಲವಾರದ ಸಿದ್ದತೋಟೇಂದ್ರ ಶಿವಾಚಾರ್ಯರು ಬಿಡುಗಡೆ ಮಾಡುವರು.
ಬಸವಶ್ರೀ ಪ್ರಶಸ್ತಿ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜೇವರ್ಗಿಯ ಶರಣ ಸಾಹಿತಿ ಶಾಂತಪ್ಪ ಪಾಟೀಲ ನರಬೋಳಿ, ಯಾದಗಿರಿಯ ಬಸವರಾಜ ಶಾಸ್ತ್ರಿ, ಕಸಾಪ ಸುರಪುರ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ, ಕೊಡೆಕಲ್ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಬಸಣ್ಣ ಗೊಡ್ರಿಹಾಳ ಅವರಿಗೆ ಪ್ರತಿಷ್ಠಾನದಿಂದ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
  ಆಕಾಶವಾಣಿ ಕಲಾವಿದರಾದ ಶರಣಕುಮಾರ ಜಾಲಹಳ್ಳಿ, ಬಸವರಾಜ ಬಂಟನೂರ, ಶಾಂತಗೌಡ ಪಾಟೀಲ ಅವರಿಂದ ವಚನಗಾಯನ ನಡೆಯಲಿದೆ. ಮುದುನೂರ, ಯಡ್ರಾಮಿ, ಕೆಂಭಾವಿ, ಹರನಾಳ, ಖೈರಾವಡಗಿ, ನಗನೂರ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮತ್ತು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಮುಖಂಡರಾದ ಶರಣು ಗದ್ದಗಿ, ಚಂದ್ರಶೇಖರಗೌಡ ಮಾಗನೂರ, ನಾಗಣ್ಣ ದಂಡಿನ್, ಬಸನಗೌಡ ಯಡಿಯಾಪೂರ, ಎಚ್.ಸಿ. ಪಾಟೀಲ, ಮಲ್ಲನಗೌಡ ಉಕ್ಕಿನಾಳ, ವೀರನಗೌಡ ಮಲ್ಲಾಬಾದಿ, ನಾಗನಗೌಡ ಕಂದಕೂರ ಸೇರಿದಂತೆ ಸಮಾಜದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.