ಪಹಣಿಗಾಗಿ ನಿಲ್ಲದ ಪರದಾಟ, ಅಲೆದಾಟ
ಕನ್ನಡಪ್ರಭ ವಾರ್ತೆ ಆಳಂದ ಜೂ.13
ಮುಂಗಾರು ಹಂಗಾಮಿನ ಬಿತ್ತನೆ ಸಬ್ಸಿಡಿ ಬೀಜ ಪಡೆಯಲು ಮತ್ತು ಬ್ಯಾಂಕ್ಗಳಿಂದ ಕೃಷಿ ಸಾಲ ಪಡೆಯಲು ಅಗತ್ಯವಿರುವ ಜಮೀನಿನ ಪಹಣಿ ಪತ್ರ ಹಾಗೂ ಮತ್ತಿತರ ಸಂಬಂಧಿಸಿದ ದಾಖಲೆ ಪಡೆಯಲು ರೈತಾಪಿ ಜನರು, ವಿದ್ಯಾರ್ಥಿಗಳು ನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಯ ಕಟ್ಟಡದಲ್ಲೇ ವಿತರಣೆ ಮಾಡುವ ಪಹಣಿ ಕೇಂದ್ರದ ಮುಂದೆ ನಿತ್ಯ ನೂರಾರು ರೈತರು ಪಹಣಿ ಪಡೆಯಲು ಮುಂದಾದರೆ, ಸಮಯಕ್ಕೆ ಪಹಣಿ ನೆಮ್ಮದಿಯಿಂದ ದಾಖಲೆ ದೊರೆಯದೆ ಪರದಾಡುವಂತಾಗಿದೆ. ಇಲ್ಲಿನ ಪಹಣಿ ಕೇಂದ್ರದ ಸಿಬ್ಬಂದಿಗೆ ಕೆಲಸ ಹೊರೆಯಾದರೆ, ಮತ್ತೊಂದಡೆ ರೈತರು ಪಹಣಿಗಾಗಿ ದಿನವಿಡೀ ಕಾದು ನಿಲ್ಲುವಂತಾಗಿದೆ.
ದಿನವಿಡೀ ಕಾಯಬೇಕು..: ಪಹಣಿ ಪಡೆಯಲು ಸೋಮವಾರ ಸರಣಿಗೆ ಬೆಳಗಿನ 9.25ಕ್ಕೆ ನಿಂತುಕೊಂಡಿದ್ದ ಸಂಗೋಳಗಿ ಗ್ರಾಮದ ಸಿದ್ದರಾಮ ಚಂದ್ರಾಮಪ್ಪ ಬಿರಾದಾರ ಎಂಬುವರಿಗೆ ಮ.4 ಗಂಟೆ ಹೊತ್ತಿಗೆ ಪಹಣಿ ಪತ್ರ ದೊರೆತಿದೆ. ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ದಿನವಿಡೀ ಕಾದು ನಿಲ್ಲಬೇಕಾಗಿದೆ ಎಂದು ಸ್ವತಃ ಸಿದ್ಧರಾಮ ಅವರು “OÚ«ÚsÚ®ÚúڒOæQ ತಿಳಿಸಿದರು. ಇದಕ್ಕೆ ಹೊರತಲ್ಲ ಎನ್ನುವಂತೆ ಶಾಲಾ ದಾಖಲಾತಿಗಾಗಿ ನೆಮ್ಮದಿ ಕೇಂದ್ರಗಳ ಮುಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಕೂಡ ದಿನವೀಡಿ ಸರಣಿಗೆ ನಿಂತುಕೊಳ್ಳುವಂತಾಗಿದೆ.
ಪಹಣಿಗಾಗಿ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಬಂದು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದ್ದು ತೀವ್ರ ತೊಂದರೆಯಾಗಿದೆ. ಕೆಲ ವೃದ್ಧರು ಮೂರ್ಛೆ ಹೋಗಿದ್ದಲ್ಲದೆ, ಸರಣಿಗೆ ನಿಂತು ಕಾಲು ನೋವಾಗಿ ಸರಣಿಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ನೆಮ್ಮದಿ ಸ್ಥಗಿತ: ತಾಲೂಕಿನ ಐದು ಹೋಬಳಿ ಕೇಂದ್ರ ನರೋಣಾ, ಖಜೂರಿ, ಆಳಂದ, ಮಾದನಹಿಪ್ಪರಗಾ ಮತ್ತು ನಿಂಬರಗಾ ನೆಮ್ಮದಿ ಕೇಂದ್ರಗಳಲ್ಲಿನ ಪಹಣಿ ವಿತರಣೆ ಕಾರ್ಯ ನಡೆಯುತ್ತಿಲ್ಲ. ಸರ್ವರ್ ಡೌನ್ ಇದೆ ನಾವೇನು ಮಾಡಬೇಕು, ನಾಳೆ ಬನ್ನಿ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ.
ವಿದ್ಯುತ್ ತೊಂದರೆ ಇಷ್ಟಾಗುವುದರಲ್ಲಿ ಊಟದ ಸಮಯವಾಯಿತೆಂದು ಹೋದರೆ, ಎರಡ್ಮೂರು ಗಂಟೆಯಾದರು ನೆಮ್ಮದಿ ಕೇಂದ್ರಕ್ಕೆ ಸಿಬ್ಬಂದಿ ಮರಳಿ ಬರುವುದೇ ಇಲ್ಲ.
ಹೀಗಾಗಿ ತಾಲೂಕು ಕೇಂದ್ರ ಆಳಂದ ಪಟ್ಟಣದಲ್ಲಿ ಪಹಣಿ ದೊರೆಯುತ್ತದೆ ಎಂದು ನಂಬಿ ಬಂದವರಿಗೆ ಸರಣಿಯಲ್ಲೇ ದಿನ ಕಳೆಯುಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
“«æÈÚß½¦’ ಕೊರತೆ: ಎಲ್ಲ ಭಾಗದ ನೆಮ್ಮದಿ ಕೇಂದ್ರಗಳು ಕಾರ್ಯನಿರ್ವಹಿಸದೆ ಇರುವುದರಿಂದ ತಹಸೀಲ್ದಾರ್ ಕಚೇರಿಯಲ್ಲಿನ ಪಹಣಿ ಕೇಂದ್ರಕ್ಕೆ ಹೆಚ್ಚಿನ ರೈತರು ಬರುತ್ತಿರುವುದೇ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ತಹಸೀಲ್ದಾರ್ ಪಹಣಿ ವಿತರಣಾ ಸಿಬ್ಬಂದಿಯೊಬ್ಬರು.
ಪ್ರತ್ಯೇಕ ವ್ಯವಸ್ಥೆ ಆಗಬೇಕು, ಇಲ್ಲವೇ ಆಯಾ ನೆಮ್ಮದಿ ಕೇಂದ್ರಗಳಲ್ಲಿ ಪಹಣಿ ವಿತರಣೆ ಶುರುಮಾಡಿದರೆ ಮಾತ್ರ ಸಮಸ್ಯೆ ತೆರೆ ಬೀಳುತ್ತದೆ. ಇಲ್ಲವಾದಲ್ಲಿ ಜನರಿಗೆ ಪರದಾಟ ತಪ್ಪಿದ್ದಲ್ಲ.
ಪಹಣಿಗಾಗಿ ಪಾದರಕ್ಷೆ ಪಾಳಿ
ಜೇವರ್ಗಿ: ಪಟ್ಟಣದ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಪಹಣಿ ವಿತರಣಾ ಕೇಂದ್ರದಲ್ಲಿ ನೂರಾರು ರೈತರು ಪಹಣಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಸರದಿಗೆ ನಿಂತು ಸುಸ್ತಾದ ರೈತರು ಕೊನೆಗೆ ಸರದಿ ಖಾತ್ರಿಗಾಗಿ ತಮ್ಮ ಪಾದರಕ್ಷೆಗಳನ್ನು ಸರದಿಯಲ್ಲಿ ಬಿಡುತ್ತಿದ್ದಾರೆ.
ಗುರುವಾರ ಗಣಕ ಯಂತ್ರದಿಂದ ಪಹಣಿ ಪತ್ರ ಪಡೆಯಲು ದಿನಗಟ್ಟಲೆ ಸರತಿಯಲ್ಲಿ ನಿಂತರೂ ಪಹಣಿ ಪತ್ರ ಸಮಯಕ್ಕೆ ದೊರಕದೆ ರೈತರು ಪರದಾಡಿದ್ದಾರೆ.
ವಿದ್ಯುತ್ ತೊಂದರೆ: ಸರದಿಗಾಗಿ ದಿನವಿಡಿ ಸಮಯ ಹಾಳು ಮಾಡಿಕೊಂಡರು ತಮ್ಮ ಸರದಿ ಬರುತ್ತದೇ ಎನ್ನುವ ಗ್ಯಾರಂಟಿ ಇರುವುದಿಲ್ಲ. ಪದೇ ಪದೇ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ರೈತರು ಮತಷ್ಟು ನೋವು ಅನುಭವಿಸುವಂತಾಗಿದೆ. ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿ ಕೇವಲ ಒಂದೇ ಗಣಕಯಂತ್ರ ಇರುವುದರಿಂದ ರೈತರು ಪಹಣಿ ಪಡೆಯಲು ಅನಾನುಕೂಲವಾಗುತ್ತದೆ. ವಿದ್ಯುತ್ ಪೂರೈಕೆ ಸರಿಯಾಗಿ ಇಲ್ಲದಿರುವುದು ರೈತರಿಗೆ ಸಕಾಲದಲ್ಲಿ ಪಹಣಿ ದೊರೆಯುತ್ತಿಲ್ಲ. ಕಂದಾಯ ಇಲಾಖೆಯವರು ಪಹಣಿ ಪತ್ರಗಳನ್ನು ನೀಡಲು ಹೆಚ್ಚುವರಿ ಕೌಂಟರ್ಗಳನ್ನು ಆರಂಭಿಸಬೇಕು. ನೆಮ್ಮದಿ ಕೇಂದ್ರಗಳಲ್ಲೂ ಪಹಣಿ ಪಡೆಯಲು ಅವಕಾಶ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

